ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆಲ್ಲುವ ಗುರಿ: ಸಾಕ್ಷಿ ಮಲಿಕ್

ಹೊಸದಿಲ್ಲಿ, ಜ.16: ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಹಾಗೂ ಏಕೈಕ ಮಹಿಳಾ ಕುಸ್ತಿಪಟು ಆಗಿರುವ ಸಾಕ್ಷಿ ಮಲಿಕ್ 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕವನ್ನು ಜಯಿಸಿ ಸುಶೀಲ್ ಕುಮಾರ್‌ರ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿದ್ದಾರೆ.
‘‘2020ರ ಟೋಕಿಯೊದಲ್ಲಿ ಒಲಿಂಪಿಕ್ಸ್ ಪದಕವನ್ನು ಜಯಿಸಿ ಸುಶೀಲ್ ಕುಮಾರ್‌ರ ಐತಿಹಾಸಿಕ ದಾಖಲೆಯನ್ನು ಸರಿಗಟ್ಟುವುದು ನನ್ನ ಮುಂದಿರುವ ಮುಖ್ಯ ಗುರಿ. ಆ ಗುರಿಯನ್ನು ಈಡೇರಿಸಿಕೊಳ್ಳುವತ್ತ ಸಂಪೂರ್ಣ ಗಮನವಿರಿಸಿದ್ದೇನೆ. ಸುಶೀಲ್‌ಜೀ ಅವರಂತೆಯೇ ಡಬಲ್ ಒಲಿಂಪಿಕ್ ಪದಕ ಗೆಲ್ಲಲು ಬಯಸಿದ್ದೇನೆ. ಒಲಿಂಪಿಕ್ಸ್‌ಗೆ ಆಕೆ ಅಥವಾ ಆತ ನಾಲ್ಕು ವರ್ಷಗಳ ಮೊದಲೇ ತರಬೇತಿ ನಡೆಸಬೇಕಾಗುತ್ತದೆ. ನಾನು ಈಗಾಗಲೇ ನನ್ನ ತರಬೇತಿಯನ್ನು ಕ್ರಮಬದ್ಧವಾಗಿ ಆರಂಭಿಸಿದ್ದೇನೆ’’ ಎಂದು ಸಾಕ್ಷಿ ಹೇಳಿದ್ದಾರೆ.
‘‘ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ತನ್ನ ತಕ್ಷಣದ ಗುರಿ. ದಿಲ್ಲಿಯಲ್ಲಿ ಮೇಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಯೋಜನೆಯನ್ನು ಹಾಕಿಕೊಂಡಿರುವೆ. ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ಎದುರು ನೋಡುತ್ತಿರುವೆ’’ ಎಂದು ಸಾಕ್ಷಿ ನುಡಿದಿದ್ದಾರೆ.





