ಭಟ್ಕಳ: ಖುಷಿ ಉತ್ಸವದಲ್ಲಿ ಗಮನ ಸೆಳೆದ ಬಾಲಕಿ ತುಳಸಿ ಹೆಗಡೆ
.jpg)
ಭಟ್ಕಳ,ಜ.16: ಸಂಕ್ರಾಂತಿಯ ಪ್ರಯುಕ್ತ ತಾಲೂಕಿನ ತೆಂಗಿನಗುಂಡಿಯ ತಿಲಕ ಯುವಕ ಮಂಡಳಿ ಹಾಗೂ ಸಿಂಚನ ಯುವತಿ ಮಂಡಳಿ ಸಂಯುಕ್ತವಾಗಿ ಹಮ್ಮಿಕೊಂಡ ಖುಷಿ 2017ರ ಉತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರವುದ ಸವಿಯನ್ನು ಅನುಭವಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ನಂದಗೋಕುಲ ತಂಡದ ಕಲಾವಿದರು ಹುಲಿ ವೇಷ, ನೃತ್ಯ ಇತ್ಯಾದಿಗಳನ್ನು ಪ್ರದರ್ಶಿಸಿದರು. ಈಗಾಗಲೇ ಬೇರೆ ಬೇರೆ ರಾಜ್ಯದ ಜನತೆಯನ್ನು ತನ್ನ ವಿಶ್ವಶಾಂತಿ ಸಂದೇಶ ರೂಪಕದ ಮೂಲಕ ಗಮನ ಸೆಳೆದ ಶಿರಸಿ ಲಯನ್ಸ ಶಾಲಾ ಎರಡನೇ ವರ್ಗದ ವಿದ್ಯಾರ್ಥಿನಿ ತುಳಸಿ ಹೆಗಡೆ ಅವಳ ಯಕ್ಷ ನೃತ್ಯ ರೂಪಕದ ಪ್ರದರ್ಶನದ ಎಲ್ಲರ ಗಮನ ಸೆಳೆಯಲು ಯಶಸ್ವೀಯಾಯಿತು.
ವಿಶ್ವಶಾಂತಿ ಸಂದೇಶದ ವೇಳೆಯಲ್ಲಿ ಮಂಗಳೂರಿನ ನಂದ ಗೋಕುಲ ತಂಡದ ಬಾಲ ಕಲಾವಿದ ಪವನಕುಮಾರ ಬಿಡಿಸಿದ ತುಳಸಿ ಹೆಗಡೆ ಚಿತ್ರವನ್ನು ಬಾಲಕಿಗೆ ತಿಲಕ ಯುವಕ ಮಂಡಳದ ಅಧ್ಯಕ್ಷ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತುಳಸಿ ಹೆಗಡೆ ಅವರನ್ನು ವೇದಿಕೆಯಲ್ಲಿ ತಿಲಕ ಯುವಕ ಮಂಡಳದ ವತಿಯಿಂದ ಗೌರವಿಸಲಾಯಿತು.
Next Story





