ಪ್ರಾಂಶುಪಾಲ, ಮೂವರು ಶಿಕ್ಷಕರಿಂದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ
ಜೆಹಾನಾಬಾದ್,ಜ.16: ಜೆಹಾನಾಬಾದ್ ಜಿಲ್ಲೆಯ ಸರಕಾರಿ ಶಾಲೆಯೊಂದರ 12ರ ಹರೆಯದ ಬಾಲಕಿಯ ಮೇಲೆ ಪ್ರಾಂಶುಪಾಲ ಮತ್ತು ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರವನ್ನು ನಡೆಸಿದ ಹೇಯ ಘಟನೆ ವರದಿಯಾಗಿದೆ.
ಕಾಕೋ ಪ್ರೌಢಶಾಲೆಯ ಪ್ರಾಂಶುಪಾಲ ಅಜು ಅಹ್ಮದ್, ಶಿಕ್ಷಕರಾದ ಅತುಲ್ ರೆಹಮಾನ್, ಅಬ್ದುಲ್ ಬಾರಿ ಮತ್ತು ಮುಹಮ್ಮದ್ ಶೌಕತ್ ಅವರು ರವಿವಾರ ಶಾಲಾ ಕಟ್ಟಡದೊಳಗೆ ಬಾಲಕಿಯೊಬ್ಬಳೇ ಇದ್ದಾಗ ಆಕೆಯನ್ನು ಟೆರೇಸ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪಿ.ಕೆ.ಶ್ರೀವಾಸ್ತವ ಅವರು ತಿಳಿಸಿದರು.
ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಬಾಲಕಿಯ ತಾಯಿ ಮಗಳಿಗಾಗಿ ಹುಡುಕಾಡಿ ದಾಗ ಅಸ್ತವ್ಯಸ್ತ ಸ್ಥಿತಿಯಲ್ಲಿ ಟೆರೇಸ್‌ನಲ್ಲಿ ಪತ್ತೆಯಾಗಿದ್ದಳು. ಮಗಳಿಂದ ವಿಷಯ ಗೊತ್ತಾದಾಗ ಅವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಡಿದ್ದು, ಅವರಿಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಪ್ರಾಂಶುಪಾಲರು ರವಿವಾರದ ಬದಲಿಗೆ ಶುಕ್ರವಾರವನ್ನು ಶಾಲೆಗೆ ರಜಾದಿನವೆಂದು ವೌಖಿಕವಾಗಿ ಘೋಷಿಸಿದ್ದು, ರವಿವಾರ ತರಗತಿಗಳನ್ನು ನಡೆಸಿದ್ದರು ಎಂದು ಶ್ರೀವಾಸ್ತವ ತಿಳಿಸಿದರು.







