ಮಸೀದಿಗಳಿಗೆ ಕಲ್ಲೆಸೆತ: ಲೀಗ್ ಖಂಡನೆ
ಮಂಗಳೂರು, ಜ.16: ಮುಲ್ಕಿ, ಹಳೆಯಂಗಡಿಯ ಕದಿಕೆ, ಸಂತಕಟ್ಟೆ ಜುಮಾ ಮಸೀದಿಗೆ ಕಲ್ಲೆಸೆದ ಕೃತ್ಯವನ್ನು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ ಜಿಲ್ಲಾ ಸಮಿತಿ ಖಂಡಿಸಿದೆ.
ತಕ್ಷಣ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಮತ್ತು ಇದರ ದುರಸ್ತಿ ವೆಚ್ಚವನ್ನು ಆರೋಪಿಗಳಿಂದಲೇ ವಸೂಲಿ ಮಾಡಲು ಕ್ರಮ ಜರಗಿಸಬೇಕು ಎಂದು ಲೀಗ್ ಅಧ್ಯಕ್ಷ ಸಿ. ಅಹ್ಮದ್ ಜಮಾಲ್ ಒತ್ತಾಯಿಸಿದ್ದಾರೆ.
Next Story





