ಎಟಿಎಂ ಮೂಲಕ ಇನ್ನು 10 ಸಾವಿರ ಪಡೆಯಿರಿ!
.jpg)
ಮುಂಬೈ,ಜ.17: ನಗದು ಕೊರತೆಯಿಂದ ಕಂಗಾಲಾಗಿರುವ ನಾಗರಿಕರಿಗೆ ಸಿಹಿ ಸುದ್ದಿ. ಭಾರತೀಯ ರಿಸರ್ವ್ ಬ್ಯಾಂಕ್ ಚಾಲ್ತಿಖಾತೆಯಿಂದ ಪಡೆಯಬಹುದಾದ ನಗದು ಮೊತ್ತವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೆಚ್ಚಿಸಿದೆ. ಗ್ರಾಹಕರು ಇದೀಗ ಎಟಿಎಂ ಮೂಲಕ ದಿನಕ್ಕೆ 10 ಸಾವಿರ ರೂಪಾಯಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ.
ಇದುವರೆಗೆ ಎಟಿಎಂ ಮೂಲಕ ಪಡೆಯಬಹುದಾದ ಗರಿಷ್ಠ ಮಿತಿ 4500 ರೂಪಾಯಿ ಆಗಿತ್ತು. ಚಾಲ್ತಿ ಖಾತೆ ಹೊಂದಿರುವವರು ಬ್ಯಾಂಕಿನಿಂದ ಹಿಂದೆ ನಿಗದಿಪಡಿಸಿದ್ದ 50 ಸಾವಿರ ಮಿತಿಯ ಬದಲಾಗಿ, ವಾರಕ್ಕೆ ಒಂದು ಲಕ್ಷ ರೂಪಾಯಿಯನ್ನು ಬ್ಯಾಂಕ್ ಶಾಖೆಯಲ್ಲಿ ಪಡೆಯಬಹುದಾಗಿದೆ.
ಅದರೆ ಉಳಿತಾಯ ಖಾತೆಯಿಂದ ಪಡೆಯಬಹುದಾದ ಮೊತ್ತದ ಪ್ರಮಾಣ ವಾರಕ್ಕೆ 24 ಸಾವಿರದಲ್ಲೇ ಮುಂದುವರಿದಿದೆ.
ಈ ಬಗ್ಗೆ ಎಲ್ಲ ಬ್ಯಾಂಕ್ ಶಾಖೆಗಳಿಗೆ ಸೋಮವಾರ ಮಾಹಿತಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು 500 ಹಾಗೂ 1000 ರೂಪಾಯಿಯ ನೋಟುಗಳನ್ನು ರದ್ದುಪಡಿಸುವ ನಿರ್ಧಾರ ಪ್ರಕಟಿಸಿದ 70 ದಿನಗಳ ಬಳಿಕ ಗ್ರಾಹಕರು ಸ್ವಲ್ಪಮಟ್ಟಿಗೆ ನಿರಾಳರಾಗಿದ್ದಾರೆ.
ಇದು ಬ್ಯಾಂಕ್ ಸಿಬ್ಬಂದಿಗೂ ಖುಷಿ ತಂದಿದೆ. ಏಕೆಂದರೆ, "ಒಟ್ಟಾರೆ ಮೊತ್ತವನ್ನು ಹೆಚ್ಚಿಸದ ಕಾರಣ, ಖಾತೆದಾರರು ಎಟಿಎಂಗೆ ಕಡಿಮೆ ಬಾರಿ ಹೋದರೆ ಸಾಕಾಗುತ್ತದೆ" ಎಂದು ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ ಹೇಳಿದ್ದಾರೆ. ಇದು ಬ್ಯಾಂಕ್ ಮೇಲಿನ ಒತ್ತಡ ಕಡಿಮೆ ಮಾಡಲೂ ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.







