ಬ್ಲಡ್ ಡೋನರ್ಸ್ ಹಾಗೂ ಮಂಗಳೂರು ವಿದ್ಯಾ ಟ್ಯುಟೋರಿಯಲ್ಸ್ ವತಿಯಿಂದ ರಕ್ತದಾನ ಶಿಬಿರ
.jpg)
ಮಂಗಳೂರು, ಜ.17: ಬ್ಲಡ್ ಡೋನರ್ಸ್ ಮಂಗಳೂರು ಮತ್ತು ವಿದ್ಯಾ ಟ್ಯುಟೋರಿಯಲ್ಸ್ ಸ್ಟೇಟ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಹಯೋಗದೊಂದಿಗೆ ಹೋಟೆಲ್ ರೀಗಲ್ ಪಾರ್ಕ್ ಸಭಾಂಗಣದಲ್ಲಿ ರಕ್ತದಾನ ಶಿಬಿರ ಹಾಗೂ ರಕ್ತದಾನದ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು
ವಿದ್ಯಾ ಟ್ಯುಟೋರಿಯಲ್ಸ್ ನ ಪ್ರಾಂಶುಪಾಲರಾದ ಕಬೀರ್ ಕಣ್ಣಂಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜೀವ್ ಗಾಂಧೀ ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ .ಯು.ಟಿ ಇಫ್ತಿಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದ ಬಗ್ಗೆ ಮತ್ತು ಅದರ ಶ್ರೇಷ್ಠತೆ ಬಗ್ಗೆ ಅರಿವು ಮೂಡಿಸುವ ಇಂತಹ ಸಂಘಟನೆಗಳ ಕಾರ್ಯ ಶ್ಲಾಘನೆ ಪ್ರಸ್ತುತ ರಕ್ತದ ಅಗತ್ಯತೆ ಹೆಚ್ಚಿದೆ. ನಿರೀಕ್ಷೆಗೆ ತಕ್ಕಂತೆ ರಕ್ತ ಸಿಗುತ್ತಿಲ್ಲ. ಇದರಿಂದ ರೋಗಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ರಕ್ತದಾನಿಗಳನ್ನು ಪ್ರೇರೆಪಿಸುವ ನಿಟ್ಟಿನಲ್ಲಿ ಇಂತಹ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ವೇದಿಕೆಯಲ್ಲಿ " ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಉಸ್ತುವಾರಿ ಎಡ್ವರ್ಡ್ ,ಬ್ಲಡ್ ಡೋನರ್ಸ್ ಮಂಗಳೂರು ತಂಡದ ಅಡ್ಮಿನ್ ಗಳಾದ ದಾವೂದ್ ಬಜಾಲ್, ಮುಸ್ತಫಾ ಕೆ.ಸಿ. ರೋಡ್, ಅಶ್ರಫ್ ಉಪ್ಪಿನಂಗಡಿ ಹಾಗೂ ಸದಸ್ಯರಾದ ಶಾಯಿದ್ ಸುರತ್ಕಲ್ ಫಹಾದ್ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಅಧಿಕ ಮಂದಿ ರಕ್ತದಾನ ಮಾಡಿ ಸಹಕರಿಸಿದರು. ವಿದ್ಯಾ ಟ್ಯುಟೋರಿಯಲ್ಸ್ ನ ಸಿಬ್ಬಂದಿ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದ ಸಮರ್ಪಿಸಿದರು







