ಪಾಲಿಕೆ ನೀರು ಕಲುಷಿತ: ಪಾಲೆಮಾರ್ ಪುನರುಚ್ಛಾರ

ಮಂಗಳೂರು, ಜ.17: ಮಂಗಳೂರು ಮಹಾನಗರ ಪಾಲಿಕೆಯು ಕುಡಿಯುವ ನೀರು ಕಲುಷಿತಗೊಂಡಿರುವುದು ನಿಜ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಪುನರುಚ್ಛರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಬೆಯಲ್ಲಿ ಒಳಚರಂಡಿ ನೀರನ್ನು ಹೊಳೆಗೆ ಹರಿದು ಬಿಡಲಾಗುತ್ತದೆ. ನೀರು ಸಮರ್ಪಕವಾಗಿ ಶುದ್ದೀಕರಣಗೊಳ್ಳುತ್ತಿಲ್ಲ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ತಪ್ಪನ್ನು ಒಪ್ಪಿ ಸರಿಪಡಿಸುವ ಬದಲು ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ಸರಿಯಲ್ಲ. ನೀರಿನ ವಿಷಯದಲ್ಲಿ ರಾಜಕೀಯ ಬೇಡ. ತಪ್ಪು ಒಪ್ಪಿಕೊಂಡರೆ ನಾನು ಪಾಲಿಕೆಯೊಂದಿಗೆ ಕೈ ಜೋಡಿಸುವೆ. ಇಲ್ಲದಿದ್ದರೆ ಹೋರಾಟ ಮುಂದುವರಿಸುವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ವಿಪಕ್ಷ ನಾಯಕಿ ರೂಪಾ ಡಿ. ಬಂಗೇರಾ, ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ಉತ್ತರ ಮಂಡಲ ಕಾರ್ಯದರ್ಶಿ ಅಶೋಕ್ ಉಪಸ್ಥಿತರಿದ್ದರು.
Next Story





