Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಇಂದ್ರಾಣಿ ಹೊಳೆ ಮಾಲಿನ್ಯ ತಡೆಯಲು ಆಗ್ರಹ...

ಇಂದ್ರಾಣಿ ಹೊಳೆ ಮಾಲಿನ್ಯ ತಡೆಯಲು ಆಗ್ರಹ : ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

ವಾರ್ತಾಭಾರತಿವಾರ್ತಾಭಾರತಿ17 Jan 2017 7:23 PM IST
share
ಇಂದ್ರಾಣಿ ಹೊಳೆ ಮಾಲಿನ್ಯ ತಡೆಯಲು ಆಗ್ರಹ : ನಗರಸಭೆ ವಿರುದ್ಧ ಸಾರ್ವಜನಿಕರ ಪ್ರತಿಭಟನೆ

ಉಡುಪಿ, ಜ.17: ಉಡುಪಿ ನಗರಸಭಾ ವ್ಯಾಪ್ತಿಯ ಅರ್ಧದಷ್ಟು ಭಾಗಕ್ಕೆ ಜೀವನಾಡಿಯಾಗಿದ್ದ ಇಂದ್ರಾಣಿ ಹೊಳೆಗೆ ನಗರಸಭೆ ಕಾನೂನು ಬಾಹಿರವಾಗಿ ಕಳೆದ ಹತ್ತಾರು ವರ್ಷಗಳಿಂದ ತ್ಯಾಜ್ಯವನ್ನು ಸುರಿದು ಕೊಚ್ಚೆಯಾಗಿಸಿದ್ದು, ಇದರಿಂದ ಮಠದಬೆಟ್ಟುವಿನಿಂದ ಕಲ್ಮಾಡಿವರೆಗಿನ ಜನರು ಆರೋಗ್ಯವೂ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನದಿಗೆ ಬಿಡುತ್ತಿರುವ ಮಾಲಿನ್ಯವನ್ನು ತಕ್ಷಣವೇ ನಿಲ್ಲಿಸಿ ಅದನ್ನು ಶುದ್ಧೀಕರಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಪರಿಸರದ ಜನತೆ ಇಂದು ಬೃಹತ್ ಪ್ರತಿಭಟನೆ ನಡೆಸಿ ಒತ್ತಾಯಿಸಿತು.

ಉಡುಪಿ ಇಂದ್ರಾಣಿ ತೀರ್ಥ ಮುಕ್ತಿ ಆಂದೋಲನ ಸಮಿತಿ ನೇತೃತ್ವದಲ್ಲಿ ಪರಿಸರದ ವಿವಿಧ ಸಂಘಟನೆಗಳು, ಯುವಕ ಮಂಡಲಗಳು ಹಾಗೂ ಕೃಷಿಕರು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ನಗರದ ಕರಾವಳಿ ಸರ್ಕಲ್‌ನಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಅರ್ಪಿಸಿದರು.

ಬೇರೆ ಬೇರೆ ಭಾಗಗಳಿಂದ ಹರಿದು ಬರುವ ಪರಿಶುದ್ಧ ನೀರಿನ ಮೂರು ಕಿರು ಝರಿಗಳು ಇಂದ್ರಾಳಿ ಬಳಿ ಒಂದಾಗಿ ಬೀಡಿನಗುಡ್ಡೆ, ಕಲ್ಸಂಕ, ಮಠದಬೆಟ್ಟು, ನಿಟ್ಟೂರು, ಕಂಬಳಕಟ್ಟ ಮಾರ್ಗವಾಗಿ ಕೊಡವೂರು ಶ್ರೀಶಂಕರನಾರಾಯಣ ದೇವಸ್ಥಾನದ ಹಿಂಭಾಗದಿಂದ ಹರಿದು ಕಲ್ಮಾಡಿ ಬಳಿ ಸಮುದ್ರದ ಹಿನ್ನೀರನ್ನು ಸೇರುತ್ತದೆ. ಇತಿಹಾಸದ ದಾಖಲೆಗಳನ್ನು ಇದನ್ನು ಇಂದ್ರಾಣಿ ತೀರ್ಥ ಎಂದು ಕರೆಯಲಾಗುತ್ತದೆ.

ಈ ಪರಿಶುದ್ಧ ನೀರಿನ ತೊರೆಯನ್ನು ಅವಲಂಬಿಸಿ ಹಲವು ಕುಟುಂಬಗಳು ಜೀವನ ಸಾಗಿಸುತಿದ್ದು, ಕುಡಿಯುವ ನೀರು ಸೇರಿದಂತೆ ದೈನಂದಿನ ಬಳಕೆಗೆ ಬಳಸ್ಪಡುತ್ತಿತ್ತು. ಸರಕಾರವೇ ಇದಕ್ಕೆ ಕಿರು ಅಣೆಕಟ್ಟನ್ನು ಕಟ್ಟಿ ನೀರನ್ನು ಕೃಷಿಗೂ ವ್ಯಾಪಕವಾಗಿ ಬಳಕೆಯಾಗುತ್ತಿತ್ತು.

ಆದರೆ ಕಳೆದ 15 ವರ್ಷಗಳಿಂದೀಚೆ ಇಂದ್ರಾಣಿ ಹೊಳೆ ಮಾಲಿನ್ಯದಿಂದ ಕೊಳೆತು ನಾರುತ್ತಿದೆ. ಅದು ಸೂಸುವ ದುರ್ಗಂಧ ಪರಿಸರದಲ್ಲಿ ಬದುಕನ್ನು ಅಸಹ್ಯಗೊಳಿಸಿದೆ. ಇದನ್ನು ಬಳಸುವ ಕೃಷಿಕ ದುಡಿಯಲಾರದ ರೋಗಿಯಾಗಿ ದ್ದಾನೆ. ಸುತ್ತಮುತ್ತಲ ಪರಿಸರದಲ್ಲಿ ಮಾರಕ ಡೆಂಗ್ ಕಾಯಿಲೆ ಜನರನ್ನು ಬಲಿ ಪಡೆಯುತ್ತಿದೆ. ಹೊಳೆ ಆಸುಪಾಸಿನ 2 ಕಿ.ಮೀ. ದೂರದವರೆಗಿನ ಸಿಹಿನೀರಿನ ಬಾವಿಗಳು ಹೊಳೆಯ ತ್ಯಾಜ್ಯವನ್ನೇ ಇಂಗಿಸಿಕೊಂಡು ಜನಸಾಮಾನ್ಯರ ಬಳಕೆಗೆ ಅಸಾಧ್ಯವೆನಿಸಿವೆ ಎಂದು ಪ್ರತಿಭಟನಕಾರರು ಮನವಿಯಲ್ಲಿ ಹೇಳಿದ್ದಾರೆ.

ಈ ಹೊಳೆ ಬದಿಯಲ್ಲಿ ವಾಸಮಾಡಬೇಕಾದ ಮಠದಬೆಟ್ಟುವಿನಿಂದ ಕಲ್ಮಾಡಿ ವರೆಗಿನ ಜನರು ದಿನವಿಡೀ ಮೂಗುಮುಚ್ಚಿಕೊಂಡು ಶುದ್ಧ ಗಾಳಿ, ನೀರಿನ ಕೊರತೆಯಿಂದ ಮಕ್ಕಳು ಸೇರಿದಂತೆ ಎಲ್ಲರ ಭವಿಷ್ಯ, ಆರೋಗ್ಯದ ಕುರಿತಂತೆ ಚಿಂತಾಕ್ರಾಂತರಾಗಿದ್ದಾರೆ.

ಜನರ ಜೀವಜಲವಾಗಿದ್ದ ಇಂದ್ರಾಣಿ ಹೊಳೆ, ಇಂದು ಜನರ ಪಾಲಿಗೆ ನರಕಸದೃಶ್ಯವಾಗಲು, ಇದರ ನೈಸರ್ಗಿಕ ಜಲಧಾರೆಯನ್ನು ಸಂಪೂರ್ಣ ನಾಶಮಾಡಿದ ಶ್ರೇಯಸ್ಸು ಸಲ್ಲಬೇಕಾಗಿರುವುದು ನಗರಸಭೆಗಲ್ಲದೇ ಬೇರೆ ಯಾರಿಗೂ ಇಲ್ಲ. ಇಲ್ಲಿ ಆಡಳಿತ ನಡೆಸಿದ ಎಲ್ಲರಿಗೂ ಇದರ ಪಾಲು ಸೇರುತ್ತದೆ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ನಗರಸಭೆಯ ಆಡಳಿತಗಾರರು ಎಲ್ಲಾ ತ್ಯಾಜ್ಯಗಳನ್ನು ನೇರವಾಗಿ ಎಸೆದಿದ್ದು ಇಂದ್ರಾಣಿ ಹೊಳೆಗೆ. ಕಳೆದ ಹತ್ತಾರು ವರ್ಷಗಳಿಂದ ಮಾಡಿಕೊಂಡು ಬಂದ ಈ ಪರಿಪಾಠದಿಂದ ಇಂದು ಇಂದ್ರಾಣಿ ಮಾಲಿನ್ಯದ ಕೊಚ್ಚೆಯಾಗಿದೆ. ಇದೀಗ ನಾವು ಇಂದ್ರಾಣಿ ತೀರ್ಥದ ಮುಕ್ತಿಗಾಗಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹೋರಾಟಕ್ಕೆ ಮುಂದಾಗಿದ್ದೇವೆ ಎಂದವರು ಮನವಿಯಲ್ಲಿ ಹೇಳಿದ್ದಾರೆ.

ಬೇಡಿಕೆಗಳು:

ಇಂದ್ರಾಣಿ ನದಿಗೆ ನಗರಸಭೆ ಸುರಿಯುತ್ತಿರುವ ಶುದ್ಧೀಕರಿಸಿದ ಮತ್ತು ಶುದ್ಧೀಕರಿಸದ ನೀರು  ಅಥವಾ ತ್ಯಾಜ್ಯವನ್ನು ತಕ್ಷಣದಲ್ಲಿ ಮತ್ತು ಶಾಶ್ವತವಾಗಿ ನಿಲ್ಲಿಸಬೇಕು. ಭವಿಷ್ಯದಲ್ಲಿ ಯಾವತ್ತೂ ಇಂತಹ ನೈಸರ್ಗಿಕ ತೊರೆಗಳಿಗೆ, ನೀರು ಹರಿಯುವ ತೋಡುಗಳಿಗೆ ತ್ಯಾಜ್ಯವನ್ನು ಸುರಿಯುವುದಿಲ್ಲ ಎಂದು ಪ್ರಮಾಣ ಪತ್ರ ನೀಡಬೇಕು.

ಇಂದಿನಿಂದ 20 ದಿನಗಳ ಒಳಗೆ ಈ ಸಮಸ್ಯೆಗೆ ನಗರಸಭೆ ಸೂಕ್ತ ಹಾಗೂ ಶಾಶತ್ವ ಪರಿಹಾರವನ್ನು ಕಲ್ಪಿಸದಿದ್ದಲ್ಲಿ 20ನೇ ದಿನ ಅಂದರೆ ಫೆ.6ರಂದು ಬೃಹತ್ ಹಾಗೂ ಉಗ್ರಸ್ವರೂಪದ ಪ್ರತಿಭಟನೆ ನಡೆಸಲು ನಾವು ನಿರ್ಧರಿಸಿದ್ದೇವೆ ಎಂದು ಸಾರ್ವಜನಿಕರು ನೀಡಿದ ಮನವಿಯಲ್ಲಿ ಎಚ್ಚರಿಸಲಾಗಿದೆ.

ಪ್ರತಿಭಟನೆಯಲ್ಲಿ ಕೊಡವೂರಿನ ರಾಘವೇಂದ್ರ ರಾವ್, ಕೃಷಿಕರಾದ ಅಪ್ಪು ಬೆಳ್ಚಡ, ಸಂತೋಷ್ ಶೆಟ್ಟಿ, ರಾಜೇಶ್ ಶೆಟ್ಟಿ, ಪಿ.ಎಂ.ಆಚಾರ್ಯ, ಬಾಲಕೃಷ್ಣ ಕೊಡವೂರು, ವಂ.ಆಲ್ಬನ್ ಡಿಸೋಜ, ಯುಜಿನ್ ಲಸ್ರಾಡೊ ಹಾಗೂ ವಿವಿಧ ಸಂಘಟನೆಗಳು, ಯುವಕ, ಯುವತಿ ಮಂಡಲಗಳ ಸದಸ್ಯರು ಪಾಲ್ಗೊಂಡಿದ್ದರು.
 ಜಿಲ್ಲಾಧಿಕಾರಿ, ನಗರಸಭಾ ಪೌರಾಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂನ ಸಿಇಓ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿಯನ್ನು ಅರ್ಪಿಸಲಾಯಿತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X