ಈಜಿಪ್ಟ್: ತಪಾಸಣಾ ಠಾಣೆಯ ಮೇಲೆ ದಾಳಿ 8 ಪೊಲೀಸರ ಸಾವು

ಕೈರೋ, ಜ. 17: ಈಜಿಪ್ಟ್‌ನ ಅಲ್-ವಾದಿ ಅಲ್ ಗೆದಿದ್ ರಾಜ್ಯದ ತಪಾಸಣಾ ಠಾಣೆಯೊಂದರ ಮೇಲೆ ಸೋಮವಾರ ದಾಳಿ ನಡೆಸಿದ ಬಂದೂಕುಧಾರಿಗಳು ಎಂಟು ಪೊಲೀಸರನ್ನು ಕೊಂದಿದ್ದಾರೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.
ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿದಾಗ ಇಬ್ಬರು ಬಂದೂಕುಧಾರಿಗಳೂ ಹತರಾಗಿದ್ದಾರೆ. ಘಟನೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಅಲ್-ಖರ್ಗ ನಗರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಅಲ್-ನಕಬ್ ತಪಾಸಣಾ ಠಾಣೆಯ ಮೇಲೆ ದಾಳಿ ನಡೆದಿದೆ ಎಂದು ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
Next Story





