ಪಾಕ್: ಮಾದಕ ದ್ರವ್ಯ ಸೇವನೆ ಪರೀಕ್ಷೆಗಾಗಿ ವಿಮಾನ ಸಿಬ್ಬಂದಿ ಮೃತದೇಹ ಅಗೆಯಲು ನಿರ್ಧಾರ

ಇಸ್ಲಾಮಾಬಾದ್, ಜ. 17: ಅಸಾಮಾನ್ಯ ಕ್ರಮವೊಂದರಲ್ಲಿ, ಕಳೆದ ತಿಂಗಳು ಅಪಘಾತಕ್ಕೀಡಾದ ವಿಮಾನವೊಂದರ ಸಿಬ್ಬಂದಿಯ ಮೃತದೇಹಗಳನ್ನು ಅಗೆದು ತೆಗೆಯಲು ಪಾಕಿಸ್ತಾನದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ಸಿಬ್ಬಂದಿ ಪೈಕಿ ಯಾರಾದರೂ ಮಾದಕ ದ್ರವ್ಯದ ನಶೆಯಲ್ಲಿದ್ದರೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಡಿಸೆಂಬರ್ 7ರಂದು ಚಿತ್ರಾಲ್‌ನಿಂದ ಇಸ್ಲಾಮಾಬಾದ್‌ಗೆ ಹಾರುತ್ತಿದ್ದ ಪಾಕಿಸ್ತಾನ್ ಅಂತಾರಾಷ್ಟ್ರೀಯ ಏರ್‌ಲೈನ್ಸ್ (ಪಿಐಎ)ನ ಪಿಕೆ-661 ವಿಮಾನ ಅಬೊಟಾಬಾದ್ ಸಮೀಪದ ಹವೇಲಿಯನ್ ಸಮೀಪದ ಗುಡ್ಡಗಾಡು ಪ್ರದೇಶವೊಂದರಲ್ಲಿ ಪತನಗೊಂಡಿತ್ತು.
ಸಿಬ್ಬಂದಿ ಸೇರಿದಂತೆ ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 48 ಮಂದಿ ಮೃತಪಟ್ಟಿದ್ದಾರೆ.ಅಪಘಾತದ ಬಗ್ಗೆ ಸಮಗ್ರ ತನಿಖೆಗೆ ಪಾಕಿಸ್ತಾನ ಆದೇಶ ನೀಡಿದೆ.
Next Story





