2017, 2018 ರಲ್ಲಿ ಭಾರತ ವಿಶ್ವದ ಅತ್ಯಂತ ಕ್ಷಿಪ್ರವಾಗಿ ಬೆಳೆಯುವ ಆರ್ಥಿಕತೆ : ಐಎಂಎಫ್
.jpg)
ವಾಶಿಂಗ್ಟನ್, ಜ. 17: ಭಾರತದ ಆರ್ಥಿಕತೆಯು 2017 ಮತ್ತು 2018ರಲ್ಲಿ ಚೀನಾಕ್ಕಿಂತಲೂ ವೇಗವಾಗಿ ಬೆಳೆಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ.
2016ರ ವರ್ಷಕ್ಕೆ ಚೀನಾದ ಆರ್ಥಿಕ ಬೆಳವಣಿಗೆಯನ್ನು ಐಎಂಎಫ್ 6.7 ಶೇಕಡ ಎಂಬುದಾಗಿ ಅಂದಾಜಿಸಿತ್ತು. ಅದು ಭಾರತದ 6.6 ಶೇಕಡಕ್ಕಿಂತ ಕೇವಲ 0.1 ಶೇ. ದಷ್ಟು ಹೆಚ್ಚಾಗಿತ್ತು.
ಐಎಂಎಫ್ ಪ್ರಕಾರ, ಭಾರತೀಯ ಆರ್ಥಿಕತೆಯು ಮುಂದಿನ ಎರಡು ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ವೃದ್ಧಿಸಲಿದೆ. 2017ರಲ್ಲಿ ಭಾರತದ ಆರ್ಥಿಕತೆಯು 7.2 ಶೇ.ದಷ್ಟು ಮತ್ತು 2018ರಲ್ಲಿ 7.7 ಶೇಕಡದಷ್ಟು ಬೆಳವಣಿಗೆ ಹೊಂದಲಿದೆ ಎಂದು ಅದು ಅಂದಾಜಿಸಿದೆ.
ಅದೇ ವೇಳೆ, ಈ ಅವಧಿಯಲ್ಲಿ ಚೀನಾದ ಆರ್ಥಿಕ ಪ್ರಗತಿ ಕ್ರಮವಾಗಿ 6.5 ಶೇ. ಮತ್ತು 6.0ಶೇ. ಆಗಿರುತ್ತದೆ ಎಂದು ಐಎಂಎಫ್ ಹೇಳಿದೆ.
Next Story





