ಸದ್ಭಾವನಾ ವೇದಿಕೆಯಿಂದ ಕ್ರಿಸ್ಮಸ್ ಸೌಹಾರ್ದ ಕೂಟ

ಮಂಗಳೂರು, ಜ.17: ಜಪ್ಪು ವರ್ತುಲ ಸದ್ಭಾವನಾ ವೇದಿಕೆಯಿಂದ ನಗರದ ಕಾಸಿಯಾ ಚರ್ಚ್ ಸಭಾಂಗಣದಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವೈಸಿಎಂ ನಿರ್ದೇಶಕ ಫಾ. ರೂಪೇಶ್ ಮಾಡ್ತ, ಶಾಂತಿ ಕಿಸ್ಮಸ್‌ನ ಸಂದೇಶವಾಗಿದೆ. ಬೈಬಲ್ ಮತ್ತು ಕುರ್‌ಆನ್‌ನ ಹಲವಾರು ಸಮಾನಾಂತರ ವಿಷಯಗಳಿವೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಮಲ್ಲಿಪಟ್ಣ ಮಾತನಾಡಿ ಯಾವುದೇ ಧರ್ಮದ ಒಳ್ಳೆಯ ವಿಚಾರವನ್ನು ಸ್ವೀಕರಿಸಬೇಕು. ಇದರಿಂದ ಸೌಹಾರ್ದ ವೃದ್ಧಿಸಲಿದೆ ಎಂದರು.
ಜಮಾಅತೆ ಇಸ್ಲಾಮೀ ಹಿಂದ್‌ನ ಅಧ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ ಸೌಹಾರ್ದ ಕೂಟಗಳಿಂದ ಜನರನ್ನು ಒಗ್ಗೂಡಿಸಲು ಸಾಧ್ಯವಿದೆ. ಅಸೂಯೆಯ ಮೂಲಕ ಅನ್ಯರನ್ನು ಸೃಷ್ಟಿಸಲಾಗುತ್ತದೆ. ನಮ್ಮಲ್ಲಿ ಯಾರೂ ಅನ್ಯರಿಲ್ಲ ಎನ್ನುವ ಹಂತಕ್ಕೆ ನಾವು ತಲುಪಬೇಕಾಗಿದೆ ಎಂದರು.
ಮುಖ್ಯ ಶಿಕ್ಷಕಿ ಗುಲೋಬನ ತಾವುರೋ ಬಳಗ ಪ್ರಾರ್ಥಿಸಿತು. ಕಾರ್ಯಕ್ರಮದ ಸಂಚಾಲಕ ದೀಪಕ್ ಡಿಸೋಜ ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷ ಎಂ.ವಿ.ಸುರೇಶ್ ಪ್ರಾಸ್ತಾವಿಸಿದರು. ಸಾಲೆಹ್ ಮುಹಮ್ಮದ್ ವಂದಿಸಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.







