ಪಿಣರಾಯಿ ಲುಂಗಿ ಉಟ್ಟ ಮಮತಾ: ಕೇರಳ ಬಿಜೆಪಿ

ಕ್ಯಾಲಿಕಟ್,ಜ.18: ಕಲೋತ್ಸವದಲ್ಲಿ ಅಸಹಿಷ್ಣುತೆ ಕುರಿತು ಮಾತಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಕಿಡಿಕಾರಿದ್ದಾರೆ. ಪಿಣರಾಯಿ ವಿಜಯನ್ ಗುಣಮಟ್ಟರಾಹಿತ್ಯದ ರಾಜಕೀಯ ಮಾಡುತ್ತಿದ್ದಾರೆ ಎಂದಿರುವ ಸುರೇಂದ್ರನ್ ಪಿಣರಾಯಿ ಲುಂಗಿ ಉಟ್ಟ ಮೋದಿಯಲ್ಲ, ಲುಂಗಿ ಉಟ್ಟ ಮಮತಾ ಎಂದಿದ್ದಾರೆ. ಮಾತ್ರವಲ್ಲ ಅವರು ಮುಖ್ಯಮಂತ್ರಿಯನ್ನು ಅಭಿವೃದ್ಧಿ ವಿರೋಧಿಯೆಂದು ಲೇವಡಿ ಮಾಡಿದ್ದಾರೆ.
ಫೇಸ್‌ಬುಕ್ ಪೋಸ್ಟ್‌ನ ಪೂರ್ಣ ರೂಪ ಹೀಗಿದೆ
ಕಲೋತ್ಸವ ವೇದಿಕೆಯಲ್ಲಿ ಬಿಜೆಪಿಯ ಅಸಹಿಷ್ಣುತೆ ಹಂಚಿದ ಪಿಣರಾಯಿ ಗುಣಮಟ್ಟವಿಲ್ಲದ ರಾಜಕೀಯ ಮಾಡುತ್ತಿದ್ದಾರೆ.ತಸ್ಲಿಮಾ ನಸ್ರೀನ್ ವಿಷಯದಲ್ಲಿ, ಝಕರಿಯ ವಿಷಯದಲ್ಲಿ ಟಿ.ಪಿ.
ಶ್ರೀನಿವಾಸನ್‌ರ ವಿಷಯದಲ್ಲಿ ಅವರ ಪಕ್ಷದ ಸಹಿಷ್ಣುತೆಯನ್ನು ನಾವು ಕಂಡಿದ್ದೇವೆ. ನಂತರ ಇಂಡಿಯ ಟುಡೆಯ ಕಂಕ್ಲೇವ್‌ನಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಯಂತೆ ಹೊರಟು ಹೋದ ವ್ಯಕ್ತಿ ಇವರು. ಕೇರಳ ಅಭಿವೃದ್ಧಿ ಅವರ ಅಜೆಂಡಾ ಆಗಿತ್ತಲ್ಲವೇ. ವಾಸ್ತವದಲ್ಲಿ ಅವರು ಲುಂಗಿಧರಿಸಿದಮೋದಿಯಲ್ಲ; ಲುಂಗಿ ಧರಿಸಿದ ಮಮತಾ ಆಗಿದ್ದಾರೆ. ಪಿಣರಾಯಿ ಸ್ವಂತ ಅಸಹಿಷ್ಣುತೆಯಿಂದ ನಾಡನ್ನು ಹಿಂದೊತ್ತುವ ಅಭಿವೃದ್ಧಿವಿರೋಧಿಯಾಗಿದ್ದಾರೆ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಸುರೇಂದ್ರನ್ ಬರೆದಿದ್ದಾರೆಂದು ವರದಿ ತಿಳಿಸಿದೆ.







