ಮುಬಶ್ಶಿರಾ ಅಪಹರಣ ಪ್ರಕರಣ: 17ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲು
ಕಾಂಞಂಗಾಡ್, ಜ.18: ಪೆರಿಯದ ಖಾಸಗಿ ವಿದ್ಯಾಸಂಸ್ಥೆಯ ಹತ್ತನೆ ತರಗತಿ ವಿದ್ಯಾರ್ಥಿನಿ ಮಾಣಿಕೊತ್ತ್‌ನ ಹದಿನೈದುವರ್ಷದ ಫಾತಿಮತ್ ಮುಬಶ್ಶಿರಾ ಅಪಹರಣ ಪ್ರಕರಣದಲ್ಲಿ ಹೆತ್ತವರು ನೀಡಿದ ದೂರಿನ ಆಧಾರದಲ್ಲಿ ಹದಿನೇಳು ವರ್ಷದ ಯುವಕನ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ಪೆರಿಯದ ಖಾಸಗಿ ಸಂಸ್ಥೆಯ ಪ್ಲಸ್ ಟು ವಿದ್ಯಾರ್ಥಿ ಪುಲ್ಲೂರ್ ಉದಯನಗರದ ಮುಹಮ್ಮದ್ ನಿಯಾಝ್ ವಿರುದ್ದ ಮುಬಶ್ಶಿರಾಳ ಹೇಳಿಕೆ ಪಡೆದ ಬಳಿಕ ಕೇಸು ದಾಖಲಿಸಲಾಗಿದೆ.
ಇಬ್ಬರನ್ನು ಚೆನ್ನೈಯ ಲ್ಲಿ ಪತ್ತೆಹಚ್ಚಿ ಪೊಲೀಸರು ಊರಿಗೆ ಕರೆತಂದಿದ್ದು, ಬಾಲಕಿಯ ಹೇಳಿಕೆಯನ್ನು ದಾಖಲಿಸಿದ ಬಳಿಕ ಕೋರ್ಟು ಆಕೆಯನ್ನು ಹೆತ್ತವರಿಗೊಪ್ಪಿಸಿದೆ.ಮುಬಶ್ಶಿರಾಳನ್ನು ನಿಯಾಝ್ ಅಪಹರಿಸಿರುವನೆಂದು ಹೆತ್ತವರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ದಾಖಲಿಸಿದ್ದರು. ಪೊಲೀಸರು ಇದೇ ದೂರನ್ನು ಸಲ್ಲಿಸಿತ್ತು.
ತನ್ನಿಚ್ಛೆಯಂತೆ ತಾನು ನಿಯಾಝ್ ನ ಜೊತೆ ತೆರಳಿದ್ದೇನೆಂದು ಬಾಲಕಿ ಹೇಳಿದ್ದರೂ ಅವಳು ಅಪ್ರಾಪ್ತೆಯಾದ ಹಿನ್ನೆಲೆಯಲ್ಲಿ ನಿಯಾಝ್ ವಿರುದ್ಧ ಅಪಹರಣ ಕೇಸು ದಾಖಲಿಸಲಾಗಿದೆ. ಇದೇ ವೇಳೆ ಚೆನ್ನೈಯ ಬಾಡಿಗೆ ಮನೆಯಲ್ಲಿ ಮುಬಶ್ಶಿರಾ ಮತ್ತು ನಿಯಾಝ್ ನನ್ನು ಅಡಗಿ ಕೂತುಕೊಳ್ಳಲು ನೆರವು ನೀಡಿದ ತಮಿಳ್ನಾಡಿನ ಮುರುಗನ್‌ನ್ನು ಆರೋಪ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.





