ಆದಿವಾಸಿ ಯುವಕನಿಗೆ ಪೊಲೀಸ್ ಕಸ್ಟಡಿಯಲ್ಲಿ ದೌರ್ಜನ್ಯ!

ಕಾಂಙಂಗಾಡ್, ಜ.18: ಇಬ್ಬರದಾಳಿಯಿಂದ ಬೆರಳು ಕಳೆದುಕೊಂಡ ಆದಿವಾಸಿ ಯುವಕನನ್ನೇ ಪೊಲೀಸರು ಕಸ್ಟಡಿಗೆ ಪಡೆದು ಕ್ರೂರವಾಗಿ ಥಳಿಸಿದ್ದಾರೆ. ಅಂಬಲ್ತರ ಪನಂಙಾಡ್ ಜಯರಾಜ್ ಪೊಲೀಸ್ ದೌರ್ಜನ್ಯಕ್ಕೆ ತುತ್ತಾದ ಆದಿವಾಸಿ ಯುವಕ. ಕಳೆದ ದಿವಸ ಜಯರಾಜ್‌ನನ್ನು ಸಂದೀಪ್, ಸುದೀಪ್ ಎಂಬಿಬ್ಬರು ಹೊಡೆದಿದ್ದರು. ಹೊಕೈಯ ವೇಳೆ ಜಯರಾಜ್‌ರ ಒಂದು ಬೆರಳು ತುಂಡಾಗಿದ್ದು ನಂತರ ಅವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ಬಂದ ಪೊಲೀಸರು ಜಯರಾಜ್‌ನನ್ನು ಕಸ್ಟಡಿಗೆ ಪಡೆದು ಅಂಬಲತ್ತರ ಠಾಣೆಗೆ ಕರೆದೊಯ್ದು ಮಂಗಳವಾರ ಬೆಳಗ್ಗಿನವರೆಗೂ ಲಾಕಪ್‌ನಲ್ಲಿಟ್ಟು ಹಿಂಸೆ ನೀಡಿದ್ದಾರೆ. ಜೊತೆಗೆ ಜಾಮೀನು ರಹಿತ ಕೇಸು ಹಾಕಿದ್ದಾರೆ.
ಜಯರಾಜ್ ತಾಯಿ ದಲಿತ್ ಮಹಾಸಭಾ ನಾಯಕರನ್ನು ಕರೆದು ಕೊಂಡು ಠಾಣೆಗೆ ಹೋಗಿದ್ದಾರೆ. ನಂತರ ಕೇರಳ ಡಿಜಿಪಿಗೆ ವಿಷಯವನ್ನು ತಿಳಿಸಲಾಗಿದೆ. ಡಿಜಿಪಿ ಯುವಕ ಬಿಡುಗಡೆಗೆ ಎಸ್ಪಿಗೆ ಸೂಚನೆ ನೀಡಿದ್ದಾರೆ. ಎಸ್ಪಿ ಮಧ್ಯಪ್ರವೇಶದಿಂದ ಜಯರಾಜ್‌ರನ್ನು ಪೊಲೀಸರು ಬಿಡುಗಡೆಗೊಳಿಸಿದರೆಂದು ವರದಿ ತಿಳಿಸಿದೆ.
Next Story





