ಹತ್ತು ವರ್ಷಗಳಿಂದ ಬರದಿಂದ ಬಳಲಿದ ಗ್ರಾಮೀಣರು!

ಕೊಲೊಂಬೊ, ಜ.18: ಶ್ರೀಲಂಕಾದ ಇಪ್ಪತೈದರಲ್ಲಿ 13 ಜಿಲ್ಲೆಗಳಲ್ಲಿ 2006ರಿಂದ ಭಯಾನಕ ಬರ ಪೀಡಿತವಾಗಿದೆ. ಅಪಾಯ ಪರಿಹಾರ ಕೇಂದ್ರದ ವಕ್ತಾರ ಪ್ರದೀಪ್ ಕೊಡಿಂಪ್ಲಿ: ಈ ಜಿಲ್ಲೆಗಳಲ್ಲಿ ಕುಡಿಯಲು ನೀರಿಲ್ಲ. ಬೆಳೆಹಾನಿಯಾಗಿದೆ"ಎಂದು ತಿಳಿಸಿದ್ದಾರೆ. ನೀರಾವರಿ ಇಲಾಖೆ ದೇಶದ ನೀರಾವರಿಯ ಹೆಚ್ಚಿನ ಜಲಾಶಯಗಳು ಬತ್ತಿಹೋಗಿವೆ ಎಂದಿದೆ.
ಜಲಪ್ರಾಧೀಕಾರಣದ ಪ್ರಕಾರ ಕುಡಿಯುವ ನೀರು ಸರಬರಾಜಿಗೆ ಅಡ್ಡಿಯಾಗಿದೆ. ಹವಾಮಾನ ಇಲಾಖೆ ಜನವರಿ ಇಪ್ಪತ್ತಕ್ಕೆ ಸ್ವಲ್ಪ ಮಳೆಆಗಬಹುದೆಂದು ಮುನ್ಸೂಚನೆ ನೀಡಿದೆ.ಶ್ರೀಲಂಕ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಕಾರ್ಯಾಲಯ ವಿಶ್ವಸಂಸ್ಥೆಯ ಆಹಾರ ಕೃಷಿ ಸಂಘಟನೆ, ವಿಶ್ವ ಆಹಾರ ಕಾರ್ಯಕ್ರಮ ಡಬ್ಲ್ಯೂ ಎಫ್ ಪಿಯೊಂದಿಗೆ ಮಾತಾಡಿ ಬರ ಪೀಡಿತ ಜಿಲ್ಲೆಗಳಿಗಾಗಿ ಅಂತಾರಾಷ್ಟ್ರೀಯ ನೆರವು ಯಾಚಿಸಲಾಗಿದ್ದು, ನೆರವಿನ ಭರವಸೆ ದೊರಕಿದೆ ಎಂದು ತಿಳಿಸಿದೆ ಎಂದು ವರದಿಯಾಗಿದೆ.
Next Story





