ಉರ್ವ ಮಾರುಕಟ್ಟೆ ಕಾಮಗಾರಿ ಪರಿಶೀಲಿಸಿದ ಐವನ್ ಡಿಸೋಜಾ
11.76 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗಳ್ಳಲಿರುವ ಪುನರ್ವಸತಿ ಕಟ್ಟಡ

ಮಂಗಳೂರು , ಜ.18 : ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ 11.76 ಕೋಟಿ ರೂ. ನಿರ್ಮಾಣಗೊಳ್ಳಲಿರುವ ಮಾರುಕಟ್ಟೆ ಕಾಂಪ್ಲೆಕ್ಸ್‌ನಲ್ಲಿ ಸುಮಾರು 44 ಅಂಗಡಿ ಶಾಪ್‌ಗಳು , 60 ಹೆಚ್ಚು ಮೀನು ಮಾರುವ ಮಹಿಳೆಯರು ಇರುವ ಮಾರುಕಟ್ಟೆಯ ಪುನರ್ವಸತಿ ಪರಿಶೀಲಿಸಿ, ಮೂಲಭೂತ ಸೌಕರ್ಯಗಳಾದ ನೀರು , ಶೌಚಾಲಯದ ವ್ಯವಸ್ಥೆ ಮತ್ತು ಮಾರಾಟ ಮಾಡಲು ಕುಳಿತುಕೊಳ್ಳಲು ಸ್ಥಳಗಳನ್ನು ಪರಿಶೀಲಿಸಿ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀಕಾಂತ್ ರಾವ್ ಮತ್ತು ನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ತುರ್ತಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಮಾರುಕಟ್ಟೆ ಕಂಟ್ರಾಕ್ಟರ್ ಆಸೀಫ್ ಚರ್ಚೆ ನಡೆಸಿ, ನೂತನ ಮಾರುಕಟ್ಟೆಯ ಸ್ಥಳಕ್ಕೆ ಭೇಟಿ ನೀಡಿ ಶೀಘ್ರದಲ್ಲಿಯೇ 12 ತಿಂಗಳ ಒಳಗೆ ಕಾಮಗಾರಿ ಪೂರ್ತಿಗೊಳಿಸುವಂತೆ ಮಾರುಕಟ್ಟೆ ಇಂಜಿನಿಯರ್‌ರವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮೂಡ ಸದಸ್ಯರಾದ ಶೋಭಾ ಪಡೀಲ್, ಕೇಶವ ಸನಿಲ್, ಮುರಳಿ ಮನಪಾ ಸದಸ್ಯ ರಾಧಕೃಷ್ಣ , ನಾಮ ನಿರ್ದೇಶಿತ ಸದಸ್ಯನಾಗೇಶ್ ಕುಮಾರ್, ಸ್ಥಳೀಯ ನಾಯಕರಾದ ಬಿ.ಜೆ ಸುವರ್ಣ, ಯುವನಾಯಕರಾದ ಚೇತನ್ ಕುಮಾರ್, ಮಮತಾ ಶೆಟ್ಟಿ, ವಾರ್ಡ್ ಅಧ್ಯಕ್ಷರಾದ ಕರುಣಾಕರ್, ಮಹೇಶ್ ಕೋಡಿಕಲ್, ಶಶಿಕಾಂತ್, ದಿನೇಶ್ ಕುಂಪಲ, ಪಿಯೂಶ್ , ನಗರ ಪಾಲಿಕೆ ಕಂದಾಯ ಅಧಿಕಾರಿ ಪ್ರವೀಣ್ ಕುಮಾರ್ ರಘುಪಾಲ್, ನಗರಾಭಿವೃದ್ಧಿ ಪ್ರಾಧಿಕಾರದ ಮೋಹನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.







