Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಪವರ್ ಲಿಫ್ಟಿಂಗ್ ನಲ್ಲಿ ಅಸಾಮಾನ್ಯ ಸಾಧಕ...

ಪವರ್ ಲಿಫ್ಟಿಂಗ್ ನಲ್ಲಿ ಅಸಾಮಾನ್ಯ ಸಾಧಕ ವಲಿಬಾಷ : ಖರ್ಚಿನ ಭಾರ ಎತ್ತಿ ಸಹಕರಿಸುತ್ತೀರಾ ?

ವಿದೇಶದಲ್ಲೂ ದೇಶದ ಕೀರ್ತಿ ಪತಾಕೆ ಹಾರಿಸಲು ಸನ್ನದ್ಧ ಈ ಶೂರ

ವಾರ್ತಾಭಾರತಿವಾರ್ತಾಭಾರತಿ18 Jan 2017 6:15 PM IST
share
ಪವರ್ ಲಿಫ್ಟಿಂಗ್ ನಲ್ಲಿ ಅಸಾಮಾನ್ಯ ಸಾಧಕ ವಲಿಬಾಷ : ಖರ್ಚಿನ ಭಾರ ಎತ್ತಿ ಸಹಕರಿಸುತ್ತೀರಾ ?

ಹೊಸಪೇಟೆ (ಬಳ್ಳಾರಿ) , ಜ.17: ಮಿರಿಮಿರಿ ಮಿಂಚುವ ಹುರಿಗೊಳಿಸಿದ ದೇಹ. ಭಾರವನ್ನು ಸಲೀಸಾಗಿ ಎತ್ತಿ ಬಿಸಾಕಬಲ್ಲ ಅಗಾಧ ಶಕ್ತಿ. ಭಾಗವಹಿಸಿದ ಎಲ್ಲಾ ಪಂದ್ಯಾಟಗಳಲ್ಲಿ ಮೊದಲ ಸ್ಥಾನದಲ್ಲಿ ಜಯಗಳಿಸಿದ ಶೂರ ಈತ. ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಪ್ರಶಸ್ತಿ ಗೆದ್ದು ಥಾಯ್ಲೆಂಡ್‌ನತ್ತ ದಾಪುಗಾಲಿಟ್ಟಿರುವ ಇವರ ಎದುರಿರುವ ಅತಿದೊಡ್ಡ ಸವಾಲು ವಿದೇಶಕ್ಕೆ ಹೋಗಲು ಹಣ ಹೊಂದಿಸುವುದು. ಇದು ನಮ್ಮ ವ್ಯವಸ್ಥೆಯ ವಿಪರ್ಯಾಸ.

ಇವರ ಹೆಸರು ವಲಿಬಾಷ. 34 ವರ್ಷದ ಇವರು ಜೀವನೋಪಾಯಕ್ಕೆ ಡ್ರೈವಿಂಗ್ ಕೆಲಸ ಮಾಡುತ್ತಿದ್ದಾರೆ. ಅಪ್ಪ ಅಮ್ಮ ಅವರಿವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಕಡು ಬಡತನವೇ ಹೊದ್ದು ಮಲಗಿರುವ ಕುಟುಂಬ ಇವರದ್ದು.

ಆದರೆ ಈತನ ಸಾಧನೆಗೆ ಈ ಸಮಸ್ಯೆ ಅಡ್ಡಿಯಾಗಿಲ್ಲ. ಇಂತಹ ಸಾಮಾನ್ಯ ಕುಟುಂಬದಿಂದ ಬಂದಿರುವ ವಲಿಬಾಷ ಎಲ್ಲ ಅಡೆತಡೆಗಳನ್ನು ಮೀರಿ ಬಾಡಿ ಬಿಲ್ಡಿಂಗ್, ಬೆಂಚ್ ಪ್ರಸ್ ಕಾಂಪಿಟೇಶನ್, ಭಾರ ಎತ್ತುವ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅನೇಕ ಅಸಾಮಾನ್ಯ  ಸಾಧನೆಗಳನ್ನು ಮಾಡಿದ್ದಾರೆ. ಛಲ, ನಿರಂತರ ಪರಿಶ್ರಮ, ಸುತ್ತಮುತ್ತಲ ಜನ ಜಾತಿ ಮತ ನೋಡದೆ ನೀಡಿದ ಸಹಕಾರ ಇವರನ್ನು ಇಲ್ಲಿಯವರೆಗೆ ಕರೆತಂದಿದೆ. ಆದರೆ ಈಗ ಮುಂದಿರುವ ಸವಾಲು ಬಹುದೊಡ್ಡದು. ಪ್ರೋತ್ಸಾಹ ಸಿಕ್ಕಿದರೆ ವಿದೇಶದಲ್ಲೂ ಭಾರತದ ಕೀರ್ತಿ ಪತಾಕೆ ಹಾರಿಸಲು ಬಾಷಾ ಸನ್ನದ್ಧರಾಗಿದ್ದಾರೆ. ಆದರೆ ಅವರನ್ನು ಕಳಿಸಿಕೊಡಲು ನಾವು ಸಿದ್ಧರಾಗಬೇಕಾಗಿದೆ. ಅಷ್ಟೇ....

ಬಳ್ಳಾರಿ ಜಿಲ್ಲಾ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 1ನೆ ಸ್ಥಾನ, ಮಿಸ್ಟರ್ ಸ್ಟ್ರಾಂಗ್ ಮ್ಯಾನ್, ಕೊಪ್ಪಳ ಹಾಗೂ ಗದಗ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಬೆಸ್ಟ್ ಪೋಜರ್, 2012ರಲ್ಲಿ ನಡೆದ ಮಿಸ್ಟರ್ ಮೆಗಾವರ್ಲ್ಡ್ ಕ್ಲಾಸಿಕ್ ನಾರ್ಥ್ ಕರ್ನಾಟಕ ಡಿವಿಜನ್ ಲೆವೆಲ್ ಚಾಂಪಿಯನ್ ಶಿಪ್‌ನಲ್ಲಿ 3ನೆ ಸ್ಥಾನ, 2013ರಲ್ಲಿ ನಡೆದ ಕರ್ನಾಟಕ ಸ್ಟೇಟ್ ಪವರ್ ಲಿಫ್ಟರ್ಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 1ನೆ ಸ್ಥಾನ, 2013ರಲ್ಲಿ ಜಮ್ಮು ಕಾಶ್ಮೀರದಲ್ಲಿ ಆಯೋಜಿಸಿದ ಇಂಡಿಯನ್ ಬಾಡಿ ಲಿಫ್ಟಿಂಗ್ ಅಸೋಸಿಯೇಶನ್ ವತಿಯಿಂದ ನಡೆದ ನ್ಯಾಷನಲ್ ಲೆವೆಲ್ ಸ್ಪರ್ಧೆಯಲ್ಲಿ 5ನೆ ಸ್ಥಾನ, 2015ರಲ್ಲಿ ನಡೆದ ಹಂಪಿ ಉತ್ಸವದ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆ ಹಾಗೂ ಓಪನ್ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ಪವರ್ ಲಿಫ್ಟರ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 1ನೆ ಸ್ಥಾನ, ಹಂಪಿ ಉತ್ಸವ-2016ರಲ್ಲಿ ನಡೆದ ಓಪನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 1ನೆ ಸ್ಥಾನ ಗಳಿಸಿದ್ದಾರೆ. ಇನ್ನೂ ಅನೇಕ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2016 ಡಿಸೆಂಬರ್‌ನಲ್ಲಿ ನ್ಯಾಷನಲ್ ಪವರ್ ಲ್ಟಿರ್ಸ್‌ ಫೆಡರೇಶನ್ ಹಾಗೂ ಇಂಟರ್ ನ್ಯಾಷನಲ್ ಕಾಂಪಿಟಿಷನ್ ಅನ್ ಎಫಿಲಿಯೇಟೆಡ್ ಯೂನಿಟ್ ಆ್ ವರ್ಲ್ಡ್ ಪವರ್ ಲಿಫ್ಟಿಂಗ್ ಯೂನಿಯನ್ ವತಿಯಿಂದ ಮುಂಬೈನ ಥಾಣೆಯಲ್ಲಿ ಇಂಟರ್ ನ್ಯಾಷನಲ್ ಕಾಂಪಿಟಿಷನ್‌ಗಾಗಿ ನಡೆದ ಟ್ರಯಲ್ಸ್‌ನಲ್ಲಿ ‘ಸೀನಿಯರ್ ಮ್ಯಾನ್’ ವಿಭಾಗದ 67.5 ಕೆಜಿ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ. 2017ರ ಎಪ್ರಿಲ್‌ನ ಕೊನೆಯ ವಾರದಲ್ಲಿ ಥಾಯ್ಲೆಂಡ್ ದೇಶದ ಪಟಾಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಭಾರತದ ಪರವಾಗಿ ಭಾಗವಹಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರಯಾಣಕ್ಕೆ , ತರಬೇತಿಗೆ ಹಾಗು  ಇತರ ಖರ್ಚುಗಳಿಗೆ ಹಣಕಾಸಿನ ಕೊರತೆ ಕಾಡುತ್ತಿದೆ. ಕೂಲಿ ಕಾರ್ಮಿಕರಾದ ಇವರಿಗೆ ದಿನದ ಆದಾಯ ಹೊಟ್ಟಿ ಹೊರೆಯುವದಕ್ಕೇ ಸಾಲುವುದಿಲ್ಲ. ಈ ಸ್ಥಿತಿಯಲ್ಲಿ ವಿದೇಶಕ್ಕೆ ತೆರಳಬೇಕಾಗಿರುವುದರಿಂದ ಇವರಿಗೆ ನೆರವಿನ ಹಸ್ತ ಅಗತ್ಯವಿದೆ. ವಲಿಬಾಷ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಇವರಿಗೆ ಸಹಾಯ ಮಾಡುವವರು:
 IFSC: CNRB MICR CODE ವಲಿಬಾಷ , ಕೆನರಾ ಬ್ಯಾಂಕ್‌ನ ಖಾತೆ ಸಂಖ್ಯೆ: 0537101028753 0000537, : 583015202 ಖಾತೆಗೆ ಹಣ ಜಮಾ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಹಣ ಹಾಕಿದವರು ಮಾಹಿತಿ ನೀಡಲು ಅಥವಾ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9591222262ರನ್ನು ಸಂಪರ್ಕಿಸಬಹುದು.


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X