ಜ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ನಾರಾಯಣ ಗುರು ಅಧ್ಯಯನ ಪೀಠ ಉದ್ಘಾಟನೆ

ಮಂಗಳೂರು,ಜ.18:ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ 12.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ನಾರಾಯಣ ಗುರು ಅಧ್ಯಯನ ಪೀಠವನ್ನು ಬೆಳಗ್ಗೆ 1.30ಕ್ಕೆ ಉದ್ಘಾಟಿಸಲಿದ್ದಾರೆ.
ಬಳಿಕ ಕಾಸರಗೋಡಿನ ಮಂಜೇಶ್ವರಕ್ಕೆ ತೆರಳಿ ಸಂಜೆ 3.30ಕ್ಕೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಾಂಸ್ಕೃತಿಕ ಕೇಂದ್ರ ಗಿಳಿವಿಂಡನ್ನು ಉದ್ಘಾಟಿಸಲಿದ್ದಾರೆ ಸಂಜೆ 6.20ಕ್ಕೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





