ಮಜ್ಲಿಸ್ ವತಿಯಿಂದ ಮಂಗಳೂರಿನಲ್ಲಿ ಉಮರಾ ಮೀಟ್

ಮಂಗಳೂರು, ಜ.18 : ಕಾಸರಗೋಡು ಜಿಲ್ಲೆಯ ಅದೂರು ಮಂಞ್ಞಂಪಾರ ಎಂಬಲ್ಲಿ ಕಾರ್ಯಚರಿಸುತ್ತಿರುವ ಮಜ್ಲಿಸುಶ್ಶಿಫಾಉ ಅಸ್ಸಖಾಫಿಲ್ ಇಸ್ಲಾಮಿ ಇದರ ಕ್ರಿಸ್ಟಲ್ ಜುಬಿಲಿ ಪ್ರಯುಕ್ತ ಮಂಗಳೂರು ಬಲ್ಮಠ ಸಹೋದಯ ಹಾಲಿನಲ್ಲಿ ಉಮರಾ ಮೀಟ್ ಸಂಘಟಿಸಲಾಯಿತು.
ಮಜ್ಲಿಸ್ ಜುಬಿಲಿಯ ಪ್ರಚಾರದೊಂದಿಗೆ ಮಂಗಳೂರಿನ ಮುಡಿಪು ಎಂಬಲ್ಲಿ ಮಜ್ಲಿಸ್ ಅಧೀನದಲ್ಲಿ ಸ್ಥಾಪಿಸಲ್ಪಟ್ಟ ಮಜ್ಲಿಸ್ ಎಜ್ಯು ಪಾರ್ಕ್ ಇದರ ಪ್ರಚಾರ ಉದ್ದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲ್ಪಟ್ಟಿದೆ.
ಕಾರ್ಯಕ್ರಮದಲ್ಲಿ ಮಜ್ಲಿಸ್ ಚೇರ್ಮಾನ್ ಸಯ್ಯಿದ್ ಅಶ್ರಫ್ ಅಸ್ಸಖಾಫ್ ತಂಙಳ್ ರವರು ಅಧ್ಯಕ್ಷತೆ ವಹಿಸಿದರು.
ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮಮ್ತಾಝ್ ಅಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದ.ಕ ಜಿಲ್ಲಾ ಮುಸ್ಲಿಂ ಜಮಾತ್ ಕೌನ್ಸಿಲ್ ಇದರ ಜಿಲ್ಲಾಧ್ಯಕ್ಷ ಹೈದರ್ ಪರ್ತಿಪ್ಪಾಡಿ ,ದ.ಕ ವಕ್ಫ್ ಬೋರ್ಡ್ ಅಧ್ಯಕ್ಷರಾದ ಎಸ್.ಎಂ. ಅಬ್ದುರ್ರಶೀದ್ ಹಾಜಿ, ಅಲ್ ಅನ್ಸಾರ್ ವಾರಪತ್ರಿಕೆ ಪ್ರಕಾಶಕ ಇಬ್ರಾಹೀಂ ಬಾವ ಹಾಜಿ, ಹಾಜಿ ಹಮೀದ್ ಖಂದಕ್, ಕುಂಞ್ಞಹ್ಮದ್ ಹಾಜಿ ದೇರಳಕಟ್ಟೆ, ಮಲ್ಲೂರು ಅಶ್ರಫ್ ಸಹದಿ, ಅಮೀನ್ ಎಚ್.ಎಚ್, ರಫೀಕ್ ಮಾಸ್ಟರ್ ಟ್ಯಾಲೆಂಟ್, ಎಸ್.ಕೆ. ಖಾದರ್ ಹಾಜಿ, ಕಾಯರ್ ಕಟ್ಟೆ ಅಬ್ದುಲ್ ಖಾದರ್ ಹಾಜಿ, ಅಡ್ವೊಕೇಟ್ ಅಬೂಬಕರ್ ಜಾಲ್ಸೂರು, ಅಬ್ದುನ್ನಾಸರ್ ಲಕ್ಕಿಸ್ಟಾರ್ ಮುಂತಾದವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಜ್ಲಿಸ್ ಪ್ರಧಾನ ಕಾರ್ಯದರ್ಶಿ ಕೊಲ್ಲಂಬಾಡಿ ಅಬ್ದುಲ್ ಕಾದರ್ ಸಹದಿ ಸಂಸ್ಥೆಯ ಕುರಿತು ಪರಿಚಯಿಸಿದರು.
ಎಸ್.ವೈ.ಎಸ್. ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಸ್ವಾಗತಿಸಿದರು.
ಸಯ್ಯದ್ ಜಲಾಲುದ್ದೀನ್ ಜಮಲುಲ್ಲೈಲಿ ತಂಙಳ್ ಪ್ರಾರ್ಥಿಸಿದರು.ಮಜ್ಲಿಸ್ ಪಿಆರ್ ಒ ಅಬ್ದುರ್ರಝಾಕ್ ಖಾಸಿಮಿ ಧನ್ಯವಾದ ಅರ್ಪಿಸಿದರು.







