ಸರಕಾರಿ ಸ್ವಾಮ್ಯದ ಸಾಮಾನ್ಯ ವಿಮೆ ಕಂಪೆನಿಗಳ ಲಿಸ್ಟಿಂಗ್ ಪ್ರಸ್ತಾವನೆಗೆ ಸಂಪುಟದ ಸಮ್ಮತಿ
ಹೊಸದಿಲ್ಲಿ,ಜ.18: 2016-17ನೆ ಸಾಲಿನ ಮುಂಗಡ ಪತ್ರದಲ್ಲಿ ಪ್ರಕಟಿಸಿದ್ದಂತೆ ಸಾರ್ವಜನಿಕ ಕ್ಷೇತ್ರದಲ್ಲಿ ಐದು ಸಾಮಾನ್ಯ ವಿಮೆ ಕಂಪೆನಿಗಳ ಲಿಸ್ಟಿಂಗ್ ಪ್ರಸ್ತಾವನೆಗಳಿಗೆ ಸರಕಾರವು ಇಂದು ಒಪ್ಪಿಗೆ ನೀಡಿದೆ.
ಈ ಕಂಪೆನಿಗಳಲ್ಲಿ ಶೇ.100ರಷ್ಟಿರುವ ಸರಕಾರದ ಪಾಲು ಕ್ರಮೇಣ ಶೇ.75ಕ್ಕೆ ಇಳಿಯಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಲಿಸ್ಟಿಂಗ್ ಆಗಲಿರುವ ಕಂಪೆನಿಗಳಲ್ಲಿ ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪೆನಿ, ನ್ಯಾಷನಲ್ ಇನ್ಶೂರನ್ಸ್ ಕಂಪೆನಿ, ಓರಿಯಂಟಲ್ ಇನ್ಶೂರನ್ಸ್ ಕಂಪೆನಿ, ಯುನೈಟೆಡ್ ಇಂಡಿಯಾ ಇನ್ಶೂರನ್ಸ್ ಕಂಪೆನಿ ಮತ್ತು ಮರು ವಿಮೆ ಕಂಪೆನಿ ಜಿಐಸಿ ಸೇರಿವೆ. 24 ಜೀವವಿಮೆ ಮತ್ತು 28 ಸಾಮಾನ್ಯ ವಿಮೆ ಕಂಪೆನಿಗಳು ಸೇರಿದಂತೆ ದೇಶದಲ್ಲಿ ಒಟ್ಟು 52 ವಿಮೆ ಕಂಪೆನಿಗಳಿವೆ.
Next Story





