ಎರಡನೆ ಏಕದಿನ : ವೋಕ್ಸ್ ಪ್ರಹಾರ ಭಾರತಕ್ಕೆ ಆರಂಭಿಕ ಆಘಾತ 39/3

ಕಟಕ್ , ಜ.19: ಇಲ್ಲಿ ಆರಂಭಗೊಂಡ ಇಂಗ್ಲೆಂಡ್ ವಿರುದ್ಧದ ಎರಡನೆ ಏಕದಿನ ಪಂದ್ಯದಲ್ಲಿ ಭಾರತ ಕ್ರಿಸ್ ವೋಕ್ಸ್ ದಾಳಿಗೆ ಸಿಲುಕಿ ಆರಂಭಿಕ ಆಘಾತ ಅನುಭವಿಸಿದ್ದು8 ಓವರ್ ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟದಲ್ಲಿ 39 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತದ ಆರಂಭಿಕ ದಾಂಡಿಗರಾದ ಕೆ.ಎಲ್.ರಾಹುಲ್ (5), ಶಿಖರ್ ಧವನ್(11) ಮತ್ತು ನಾಯಕ ವಿರಾಟ್ ಕೊಹ್ಲಿ (8) ಔಟಾಗಿದ್ದಾರೆ. ಆಲ್ ರೌಂಡರ್ ಯುವರಾಜ್ ಸಿಂಗ್ 14ರನ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮಹೇಂದ್ರ ಸಿಂಗ್ ಧೋನಿ 1 ರನ್ ಗಳಿಸಿ ಔಟಾಗದೆ ಕ್ರೀಸ್ ನಲ್ಲಿದ್ದಾರೆ.
Next Story





