ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಗೆ ಸಾರ್ವಜನಿಕರ ಗೂಸಾ

ಸುಳ್ಯ, ಜ.19: ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.
ಸಂತೋಷ್ ಶೆಟ್ಟಿ ಮಾಡಾವು ಸಾರ್ವಜನಿಕರಿಂದ ಸೆರೆಹಿಡಿಯಲ್ಪಟ್ಟ ಆರೋಪಿ. ಕುಡುಕನಾಗಿರುವ ಈತ ಬೆಳ್ಳಾರೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿ, ಮೊಬೈಲ್ ನಂಬರ್ ಕೇಳುತ್ತಿದ್ದನ್ನಲ್ಲದೆ, ನಿರಂತರವಾಗಿ ಮಹಿಳೆಯರನ್ನು ಹಿಂಬಾಲಿಸುತ್ತಿದ್ದ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಈತನನ್ನು ಸಾರ್ವಜನಿಕರು ಹಿಡಿದು ಥಳಿಸಿ ಬೆಳ್ಳಾರೆ ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ಈತನಿಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
Next Story





