ಅಖಿಲೇಶ್ ಅವರೇ ಮುಖ್ಯಮಂತ್ರಿ; ಪುನರುಚ್ಚರಿಸಿದ ಮುಲಾಯಂ
.jpg)
ಲಕ್ನೊ,ಜ.19: ಸಮಾಜವಾದಿ ಪಾರ್ಟಿ ಎರಡು ತುಂಡಾದ ಬಳಿಕವೂ ಒಂದುಗೂಡಿಸುವ ಪ್ರಯತ್ನಸಾಗಿದ್ದು, ಮುಲಾಯಂ ಸಿಂಗ್ ಯಾದವ್ ಪಕ್ಷವನ್ನು ಒಂದಾಗಿರಿಸಲು ಬಯಸಿದ್ದಾರೆ. ಜೊತೆಗೆ ಸೈಕಲ್‌ನನ್ನು ತನ್ನ ಬಳಿಯೇ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮುಲಾಯಂ ಸಮಾಜವಾದಿ ಪಾರ್ಟಿಯ ಮುಖ್ಯ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡುತ್ತಾ ಪಕ್ಷ ಒಡೆಯಲು ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಸಮಾಜವಾದಿ ಪಾರ್ಟಿ ಚಿಹ್ನೆಯನ್ನೂ ಬದಲಿಸುವುದಿಲ್ಲ. ಪಾರ್ಟಿ ಒಗ್ಗಟ್ಟಾಗಿರುತ್ತದೆ ಹಾಗೂ ಸೈಕಲ್ ಜೊತೆಗಿರುತ್ತದೆ ಎಂದು ಹೇಳಿದರು.
ಅಖಿಲೇಶ್ ಮುಖ್ಯಮಂತ್ರಿ ಹಾಗೂ ಮುಂದಿನ ಮುಖ್ಯಮಂತ್ರಿ ಕೂಡಾ ಅವರೇ:
ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ಮುಂದಿನ ಮುಖ್ಯಮಂತ್ರಿಕೂಡಾ ಅವರೇ ಆಗಲಿದ್ದಾರೆ ಎಂದು ಘೋಷಿಸಿದ್ದೇವೆ. ಜೊತೆಗೆ ವಂಚಕರ ಜೊತೆ ಯಾಕೆ ಹೋಗುತ್ತಿದ್ದೀರಿ ಎಂದು ಅಖಿಲೇಶ್‌ರನ್ನು ಪ್ರಶ್ನಿಸಿದ್ದೇನೆ. ಯಾವುದೇ ವಿವಾದದಲ್ಲಿ ಸಿಲುಕಿಕೊಳ್ಳದಿರುವಂತೆ ಸಲಹೆ ನೀಡಿದ್ದೇನೆ. ಪಾರ್ಟಿಯಲ್ಲಿ ಒಗ್ಗಟ್ಟನ್ನು ಬಯಸುತ್ತಿದ್ದೇನೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು. ನೀವೆಲ್ಲ ನನಗೆ ನೆರವಾಗಿರಿ. ಬೆಂಬಲಿಸಿರಿ. ನಮ್ಮ ಜೊತೆ ಇರುತ್ತೇವೆ ಹಾಗೂ ಪಾರ್ಟಿಯನ್ನು ಉಳಿಸುತ್ತೇವೆ ಎಂದು ಮಾತುಕೊಡಿರಿ ಎಂದು ಮುಲಾಯಂ ಕಾರ್ಯಕರ್ತರನ್ನು ಆಗ್ರಹಿಸಿದ್ದಾರೆ. ನಮ್ಮ ಪಾರ್ಟಿ ಒಂದಾಗಿರಬೇಕೆಂದು ಬಯಸುತ್ತೇನೆ:
ಭಾವುಕರಾದ ಮುಲಾಯಂ ಕಾರ್ಯಕರ್ತರಲ್ಲಿ ಈಗ ನನ್ನ ಬಳಿ ಏನೂ ಇಲ್ಲ. ನನ್ನ ಬಳಿ ಏನಿತ್ತು ಅವೆಲ್ಲವನ್ನೂ ನೀಡಿಯಾಗಿದೆ. ಈಗ ನನ್ನ ಬಳಿ ಏನೂ ಇಲ್ಲ. ನನ್ನ ಬಳಿ ನೀವಿದ್ದೀರಿ ಎಂದು ಹೇಳಿದರು. ನನ್ನಜೊತೆ ಜನರಿದ್ದಾರೆ ಅವರು ನನ್ನನ್ನು ಬೆಂಬಲಿಸಿದ್ದಾರೆ. ಜನರಿಂದಾಗಿ ನಾವು ಇಲ್ಲಿದ್ದೇವೆ. ಅವರಿಂದ ನಾವು ನಾಯಕರಾಗಿದ್ದೇವೆ. ಪಾರ್ಟಿಕಟ್ಟಲು ತುಂಬ ಪ್ರಯತ್ನ ಪಟ್ಟಿದ್ದೇನೆ. ಕಷ್ಟ ಅನುಭವಿಸಿದ್ದೇನೆ. 1977ರ ತುರ್ತು ಪರಿಸ್ಥಿತಿ ಕಂಡವನು ನಾನು. ಆದ್ದರಿಂದ ನಾನು ನಮ್ಮ ಪಾರ್ಟಿ ಒಂದಾಗಿರಬೇಕು ಎಂದು ನಾನು ಬಯಸುತ್ತಿದ್ದೇನೆ. ನಾನು ಬಡವನಾಗಿಯೂ ಬದುಕಿ ನೋಡಿದವನು. ಪಾರ್ಟಿಗಾಗಿ ಲಾಠಿಯೇಟು ತಿಂದವನುಎಂದು ಮುಲಾಯಂ ಹೇಳಿದರೆಂದುವರದಿಯಾಗಿದೆ.







