ಕೊಣಾಜೆ : ಪದಾಧಿಕಾರಿಗಳ ಆಯ್ಕೆ

ಕೊಣಾಜೆ , ಜ.19 : ಮುನ್ನೂರು ಗ್ರಾಮದ ಸಂತೋಷ್ ನಗರದಲ್ಲಿರುವ ಬದ್ರಿಯಾ ಜುಮಾ ಮಸೀದಿ ಹಾಗೂ ಸಿರಾಜುಲ್ ಉಲೂಂ ಮದರಸಾದ ವಾರ್ಷಿಕ ಮಹಾಸಭೆ ನಡೆದು 2017-18ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಬ್ದುಲ್ ರಹಿಮಾನ್ ಅಧ್ಯಕ್ಷರಾಗಿ ಹಾಗೂ ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಎ.ಮುಹಮ್ಮದ್, ಜತೆ ಕಾರ್ಯದರ್ಶಿಗಳಾಗಿ ಮುನೀರ್ ಮತ್ತು ನಿಸಾರ್, ಕೋಶಾಧಿಕಾರಿಯಾಗಿ ಅಬ್ದುಲ್ ಕರೀಂ, ಲೆಕ್ಕ ಪರಿಶೋಧಕರಾಗಿ ಮನ್ಸೂರ್ ಹಾಗೂ 14 ಮಂದಿಯನ್ನು ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.
ಮಸೀದಿಯ ಖತೀಬ್ ಯಾಕೂಬ್ ನೀಮಿ ಅಫ್ಳಲಿ ಅಧ್ಯಕ್ಷತೆ ವಹಿಸಿದ್ದರು.
Next Story





