ಗಿಳಿವಿಂಡುವಿನಲ್ಲಿ ಸಿಎಂಗೆ ಕಾಗೆ ಕಾಟ..!

ಮಂಜೇಶ್ವರ, ಜ.19: ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಗೌರವಾರ್ಥ ಅವರ ಹುಟ್ಟೂರು ಮಂಜೇಶ್ವರದಲ್ಲಿ ಕೇರಳ ಸರಕಾರದ ಸಹಾಯದೊಂದಿಗೆ ನಿರ್ಮಿಸಲಾಗಿರುವ ಗಿಳಿವಿಂಡು ಸಾಂಸ್ಕೃತಿಕ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಇಂದು ಭಾಗವಹಿದ್ದ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಅವರಿಗೆ ಕಾಗೆಯೊಂದು ಅಡ್ಡಿಪಡಿಸಿತು.
ವೇದಿಕೆಯ ಮೇಲೆ ಕುಳಿತಿದ್ದ ಸಿಎಂ ಮೇಲೆ ಪಕ್ಕದ ಮರದಲ್ಲಿ ಕುಳಿತಿದ್ದ ಕಾಗೆಯೊಂದು ಹಿಕ್ಕೆ ಹಾಕಿತು. ಇದರಿಂದ ಸಿಎಂ ಮುಜುಗರಕ್ಕೊಳಗಾದರು. ತಕ್ಷಣ ಶಾಸಕ ಮೊಯ್ದೀನ್ ಬಾವಾ ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಕೊಟ್ಟರು.ಮೂಡಾದ ಮಾಜಿ ಅಧ್ಯಕ್ಷ ತೇಜೋಮಯ ಅವರು ಸಿಎಂ ಪಂಚೆ ಮೇಲೆ ಬಿದ್ದ ಕಾಗೆ ಹಿಕ್ಕೆಯನ್ನು ಟಿಶ್ಯೂ ಪೇಪರ್ ಸಹಾಯದಿಂದ ಸ್ವಚ್ಛಗೊಳಿಸಿದರೆಂದು ತಿಳಿದು ಬಂದಿದೆ.
ಬಳಿಕ ಕಾಗೆಯನ್ನು ಮರದಿಂದ ಓಡಿಸಲಾಯಿತು.
Next Story





