‘ಗಣೇಶ್ ಮೆಡಿಕಲ್ಸ್ ಆ್ಯಂಡ್ ಸೂರ್ಯ ಲೈಫ್ ಕೇರ್’ ಉದ್ಘಾಟನೆ

ಮಂಗಳೂರು, ಜ.19: ಪ್ರಖ್ಯಾತ ಔಷಧ ಮಾರಾಟ ಸಂಸ್ಥೆಯಾದ ಗಣೇಶ್ ಮೆಡಿಕಲ್ಸ್‌ನ ನೂತನ ಮಳಿಗೆ ‘ಗಣೇಶ್ ಮೆಡಿಕಲ್ಸ್ ಆ್ಯಂಡ್ ಸೂರ್ಯ ಲೈಫ್ ಕೇರ್’ ನಗರದ ಪಂಪ್ ವೆಲ್ ಮಹಾವೀರ ವೃತ್ತದ ಬಳಿಯ ಕ್ಲಾಸಿಕ್ ಗೇಟ್‌ವೇ ಕಟ್ಟಡದಲ್ಲಿ ಗುರುವಾರ ಉದ್ಘಾಟನೆಗೊಂಡಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್, ಅವರ್ ಲೇಡಿ ಆ್ ದಿ ಹೋಲಿ ರೊಸಾರಿ ಕೆಥೆಡ್ರಲ್‌ನ ಧರ್ಮಗುರು ಫಾ. ಜೆ.ಬಿ.ಕ್ರಾಸ್ತಾ ನೂತನ ಮಳಿಗೆಯನ್ನು ಉದ್ಘಾಟಿಸಿದರು.
ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಗಣೇಶ್ ಮೆಡಿಕಲ್ಸ್ ಹಲವಾರು ವರ್ಷಗಳಿಂದ ಗುಣಮಟ್ಟದ ಸೇವೆಯೊಂದಿಗೆ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಖಾಝಿ ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಗಣೇಶ್ ಮೆಡಿಕಲ್ಸ್ ದ.ಕ.ಜಿಲ್ಲೆಯಲ್ಲದೆ ಸುತ್ತಮುತ್ತಲ ಪ್ರದೇಶಗಳಲ್ಲೂ ಹೆಸರು ವಾಸಿಯಾಗಿದೆ ಎಂದರು.
ಫಾ. ಜೆ.ಬಿ.ಕ್ರಾಸ್ತಾ ಮಾತನಾಡಿ, ಗಣೇಶ್ ಮೆಡಿಕಲ್ಸ್ ಉತ್ತಮ ಸೇವೆಯ ಮೂಲಕ ಜನಾನುರಾಗಿಯಾಗಿ ಬೆಳೆದಿದೆ. ಎಲ್ಲ ಪ್ರಕಾರಗಳ ಔಷಧಗಳು ಒಂದೇ ಕಡೆ ಲಭ್ಯವಿರುವುದು ವಿಶೇಷ ಎಂದು ಹಾರೈಸಿದರು. ಮುಖ್ಯಅತಿಥಿಗಳಾಗಿ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಟ್ರಸ್ಟಿ ಕೆ.ಸಿ.ನಾಕ್, ತಾರಾಕ್ಷಿ ನಾರಾಯಣ್, ಕೃಷ್ಣ ಮಾರ್ಲ ಭಾಗವಹಿಸಿದ್ದರು.
ಗಣೇಶ್ ಮೆಡಿಕಲ್ಸ್‌ನ ಆಡಳಿತ ನಿರ್ದೇಶಕ ಸದಾನಂದ ಶೆಟ್ಟಿ, ನಮಿತಾ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.
ಪ್ರಭಾ ಶರತ್ ಆಳ್ವ ಸ್ವಾಗತಿಸಿದರು. ಉದಯ ಕುಮಾರ್ ಶೆಟ್ಟಿ ವಂದಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.
1973ರಲ್ಲಿ ಸದಾನಂದ ಶೆಟ್ಟಿಯವರಿಂದ ಸ್ಥಾಪಿಸಲ್ಪಟ್ಟ ಗಣೇಶ್ ಮೆಡಿಕಲ್ಸ್ ಇಂದು ದ.ಕ.ಜಿಲ್ಲೆಯಲ್ಲದೆ ನೆರೆಯ ಜಿಲ್ಲೆಗಳು ಹಾಗೂ ಕೇರಳದ ಕಾಸರಗೋಡು, ಕಣ್ಣಾನೂರು ಹಾಗೂ ಕಲ್ಲಿಕೋಟೆ ಜಿಲ್ಲೆಗಳಲ್ಲೂ ಮನೆ ಮಾತಾಗಿದೆ. 2009ರಲ್ಲಿ ಇದರ ಸಹಸಂಸ್ಥೆಯಾಗಿ ಜೀವರಕ್ಷಕ ಔಷಧ ವಿತರಣಾ ಸಂಸ್ಥೆ ‘ಸೂರ್ಯ ಲೈಫ್ ಕೇರ್’ ಆರಂಭಗೊಂಡಿತು. ಎಲ್ಲ ವಿಧದ ಔಷಧಗಳು ಲಭ್ಯವಾಗುವುದರ ಜತೆಗೆ ಎಲ್ಲೂ ಸಿಗದ ಔಷಧಗಳನ್ನೂ ಸಂಸ್ಥೆ ಗ್ರಾಹಕರಿಗೆ ಒದಗಿಸುತ್ತಿದೆ. ಜೀವರಕ್ಷಕ ಔಷಧಗಳ ಕೊರತೆ ಹಾಗೂ ಸೂರ್ಯ ಲೈಫ್ಕೇರ್‌ನ ಯಶಸ್ಸಿನ ಹಿನ್ನಲೆಯಲ್ಲಿ ಸಂಸ್ಥೆಯು ಮಣಿಪಾಲ ಹಾಗೂ ಕಾಸರಗೋಡಿನಲ್ಲಿ ಶಾಖೆಗಳನ್ನು ಆರಂಭಿಸಿತು.







