ಕದ್ರಿ ಮಂಜುನಾಥ ದೇವರಿಗೆ ಮುಖ ಮಂಟಪದ ರಜತದ್ವಾರ : ಸಚಿವ ಆರ್.ವಿ. ದೇಶಪಾಂಡೆಯವರಿಂದ ಸಮರ್ಪಣೆ

ಮಂಗಳೂರು, ಜ,19: ಕದ್ರಿ ಶ್ರೀ ಮಂಜುನಾಥ ದೇವರ ಜಾತ್ರಾ ರಥೋತ್ಸವದ ಶುಭಾವಸರದಲ್ಲಿ ಮುಖಮಂಟಪದ ರಜತದ್ವಾರ ಸಮರ್ಪಣೆ ನಡೆಯಲಿದೆ. ಜನವರಿ 21 ರ ಮುಂಜಾನೆ 9.15ಕ್ಕೆ ಬೃಹತ್ ಕೈಗಾರಿಕಾ ಸಚಿವ ಆರ್.ವಿ .ದೇಶಪಾಂಡೆ ಅವರು, ತಂತ್ರಿಗಳು, ಅರ್ಚಕರು, ಹಿರಿಯರಾದ ಎ.ಜೆ. ಶೆಟ್ಟಿ, ಜನಪ್ರತಿನಿಧಿಗಳು, ಗಣ್ಯರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಸಮರ್ಪಿಸಲಿದ್ದಾರೆ.
ಸಮರ್ಪಿಸಲಾಗುವ ರಜತ ಮುಖಮಂಟಪ ದ್ವಾರ ಸುಮಾರು 16ಕೆ.ಜಿ. ಬೆಳ್ಳಿಯ ತಗಡಿನಲ್ಲಿ ಅತ್ಯಾಕರ್ಷಕ ಸಾಂಪ್ರದಾಯಿಕವಾದ ಕುಸುರಿಯೊಂದಿಗೆ ಸ್ವರ್ಣ ಜ್ಯುವೆಲ್ಲರ್ಸ್‌ನ ರಾಮದಾಸ್ ನಾಕ್ ಮಾರ್ಗದರ್ಶನದಲ್ಲಿ ಸುಮಾರು 12 ಲಕ್ಷ ವೆಚ್ಚದಲ್ಲಿ ತಯಾರಿಸಲಾಗಿದೆ ಎಂದು ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





