ಕಠಿಣ ದಾರಿಯಲ್ಲಿ ನಡೆದು ನಾವು ಗೆದ್ದೇ ತೀರುವೆವು: ರಾಜ ವೇಮುಲಾ
ಹೈದರಾಬಾದ್, ಜ.19: ಕಹಿಯಾದ ಅನುಭವಗಳನ್ನು ದಾಟಿ ಬಂದಿದ್ದೇವೆ. ನ್ಯಾಯ ನಿರಾಕರಣೆಯ ದಾರಿಯನ್ನು ನಾವು ದಾಟಿ ಮುಂದುವರಿಯುತ್ತಿದ್ದೇವೆ ಎಂದು ರೋಹಿತ್ ವೇಮುಲಾರ ಸಹೋದರ ರಾಜ ವೇಮುಲಾ ಹೇಳಿದ್ದಾರೆ. ಸಹೋದರನ ಅಗಲಿಕೆಯ ಅಗಾಧ ನೋವಿನೊಂದಿಗೆ ವರ್ಷವನ್ನು ಹಿಂದಿಕ್ಕಿದ ಅವರು ಮನಸ್ಸು ಬಿಚ್ಚಿ ಮಾತಾಡಿದ್ದಾರೆ.
ನ್ಯಾಯಕ್ಕಾಗಿ ಹೋರಾಟ ಕಹಿ ಕಠಿಣವಾದುದು. ನನ್ನ ಸಹೋದರನಿಗೆ ನ್ಯಾಯ ಸಿಕ್ಕಿಲ್ಲ ಮಾತ್ರವಲ್ಲ ನಮ್ಮನ್ನು ದಲಿತರೋ? ಹಿಂದುಳಿದ ವಿಭಾಗಕ್ಕೆ ಸೇರಿದವರೋ ಅಲ್ಲವೆಂದು ಸಾಬೀತು ಪಡಿಸುವ ಪ್ರಯತ್ನ ಈಗ ನಡೆಯುತ್ತಿದೆ. ಏನೇ ಆದರೂ ಕೊನೆಗೆ ನಾವೇ ಜಯಗಳಿಸುತ್ತೇವೆ. ಸಹೋದರನ ಸಾವಿಗೆ ಕಾರಣಕರ್ತರಾಗಿರುವವರು ಶಿಕ್ಷಿಸಲ್ಪಡಲಿದ್ದಾರೆ ಎಂದು ರಾಜ ವೇಮುಲಾ ಹೇಳಿದ್ದಾರೆ.
ರೋಹಿತ್ ವಿದಾಯದ ಬಹಳ ದಿನಗಳ ನಂತರ ಇತ್ತೀಚೆಗಷ್ಟೆ ಅಮ್ಮ ಅದರ ಆಘಾತದಿಂದ ಹೊರಬರುತ್ತಿದ್ದಾರೆ. ಅವರು ಈಗ ಹೊಲಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ದೇಶಾದ್ಯಂತ ಜಾತಿ, ಮತ್ತಿತರ ತಾರತಮ್ಯ ದ್ವೇಷಗಳಿಗೆ ಬಲಿಯಾಗುವವರ ಹತ್ತಿರಕ್ಕೆ ಓಡಿ ಬರುತ್ತಾರೆ. ಜೆಎನ್‌ಯು ಮತ್ತು ಕಾನೂನು ವಿದ್ಯಾರ್ಥಿನಿ ಜಿಷಾ ಕೊಲೆಯಾದ ಕೇರಳದ ಪೆರುಂಬಾವೂರ್‌ಗೆ ನಾವು ಹೋದೆವು. ದಲಿತರೆಲ್ಲ ಒಗ್ಗಟ್ಟಿಗಾಗಿ ದೇಶಾದ್ಯಂತ ಸಭೆ ಪ್ರತಿಭಟನೆ ಪಾಲ್ಗೊಂಡೆವು ಎಂದು ರಾಜವೇಮುಲಾ ಹೇಳಿದ್ದಾರೆ.





