15 ಮಕ್ಕಳ ಸಾವು
ಶಾಲಾಬಸ್‌ಗೆ ಲಾರಿ ಢಿಕ್ಕಿ
ಇಟಾ(ಉ.ಪ್ರ),ಜ.19: ಇಲ್ಲಿಗೆ ಸಮೀಪದ ಅಲಿಗಂಜ್-ಪಲಿಯಾಲಿ ರಸ್ತೆಯಲ್ಲಿ ಅಸದ್‌ನಗರ ಗ್ರಾಮದ ಬಳಿ ಇಂದು ಬೆಳಗ್ಗೆ ದಟ್ಟಮಂಜಿನ ನಡುವೆ ಲಾರಿಯೊಂದು ಶಾಲಾಬಸ್ಸಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 5ರಿಂದ 15 ವರ್ಷ ವಯೋಮಾನದ ಕನಿಷ್ಠ 15 ಮಕ್ಕಳು ಸಾವನ್ನಪ್ಪಿದ್ದು, ಸುಮಾರು 20 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ನತದೃಷ್ಟ ಬಸ್ ಜೆ.ಎಸ್.ವಿದ್ಯಾನಿಕೇತನ ಶಾಲೆಗೆ ಸೇರಿದ್ದು, ತೀವ್ರ ಶೀತ ವಾತಾವರಣದ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ ಈ ಶಾಲೆಯು ಕಾರ್ಯ ನಿರ್ವಹಿಸುತ್ತಿದೆ.
ಗಾಯಾಳು ಮಕ್ಕಳನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಇಟಾ ಜಿಲ್ಲಾಧಿಕಾರಿ ಶಂಭುನಾಥ್ ಆತಂಕ ವ್ಯಕ್ತಪಡಿಸಿದರು.
ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದರು.
Next Story





