ಉಡುಪಿ: ಮತದಾರರ ಪಟ್ಟಿ ಪರಿಷ್ಕರಣೆ
ಉಡುಪಿ, ಜ.19: 2017ರ ಜನವರಿಗೆ 18 ವರ್ಷ ಪೂರ್ಣಗೊಳಿಸಿದ ಜಿಲ್ಲೆಯಲ್ಲಿ ವಾಸವಿರುವ ಅರ್ಹ ಭಾರತೀಯ ನಾಗರಿಕರಿಂದ ಮತದಾರರ ಪಟ್ಟಯಲ್ಲಿ ಹೆಸರು ನೋಂದಣಿ, ತಿದ್ದುಪಡಿ ಮತ್ತು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ನಿಗದಿತ ನಮೂನೆಯ ಅರ್ಜಿಯಲ್ಲಿ ಪೂರಕ ಮಾಹಿತಿಯೊಂ ದಿಗೆ ಆಯಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ಅಥವಾ ಆಯಾ ತಾಲೂಕಿನ ತಹಶೀಲ್ದಾರ್/ವಿಶೇಷ ತಹಶೀಲ್ದಾರ್‌ರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮತಗಟ್ಟೆ ಅಧಿಕಾರಿ, ಸ್ಥಳೀಯ ತಹಶೀಲ್ದಾರ್/ವಿಶೇಷ ತಹಶೀಲ್ದಾರ್ ಅಥವಾ ಸಹಾಯಕ ಕಮಿಷನರ್ ಕಚೇರಿಯನ್ನು ಸಂಪರ್ಕಿಸಬಹುದು.
ಅರ್ಜಿಗಳನ್ನು www.voterreg.kar.nic.in ಆನ್‌ಲೈನ್ ನಲ್ಲಿ ಸಲ್ಲಿಸಿ, ಅವುಗಳ ಪ್ರಿಂಟ್‌ಔಟ್‌ಗಳನ್ನು ಡೌನ್‌ಲೋಡ್ ಮಾಡಿ, ಪೂರಕ ದಾಖಲೆಗಳೊಂದಿಗೆ 7 ದಿನಗಳ ಒಳಗೆ ಜಿಲ್ಲಾ ಚುನಾವಣಾ ಧಿಕಾರಿ, ರಜತಾದ್ರಿ ಮಣಿಪಾಲ ಇಲ್ಲಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
Next Story





