ಉಳ್ಳಾಲ ನಗರಸಭೆ: 2 ಸ್ಥಾನಗಳಿಗೆ ಫೆ.12ರಂದು ಉಪಚುನಾವಣೆ
ಉಳ್ಳಾಲ, ಜ.19: ಉಳ್ಳಾಲ ನಗರಸಭೆಯ 24 ಮತ್ತು 26ನೆ ವಾರ್ಡ್‌ಗೆ ಉಪಚುನಾವಣೆ ನಡೆ ಸಲು ರಾಜ್ಯ ಚುನಾವಣಾ ಆಯೋಗ ದಿನಾಂಕ ನಿಗದಿ ಪಡಿಸಿದೆ. ಅದರಂತೆ ಖಾಲಿಯಿರುವ ಈ 2 ಸ್ಥಾನಗಳಿಗೆ ಫೆ.12ರಂದು ಮತದಾನ ನಡೆಯಲಿದೆ.
ಈ ಬಗ್ಗೆ ಜ.25ರಂದು ದ.ಕ. ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಫೆ.1ರಂದು ನಾಮಪತ್ರ ಸಲ್ಲಿಸಲು ಕೊನೆಯದಿನ. ಫೆ.2ರಂದು ನಾಮಪತ್ರಗಳ ಪರಿಶೀಲನೆ, ಫೆ.4 ರಂದು ಉಮೇದುವಾರಿಕೆ ಹಿಂಪಡೆಯಲು ಕೊನೆ ದಿನ. ಫೆ.12ರಂದು ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಿದ್ದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಫೆ.15ರಂದು ಮತ ಎಣಿಕೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





