ಸ್ಟಂಟ್ ಶೂಟಿಂಗ್ ವೇಳೆ ಪ್ರಿಯಾಂಕಾಗೆ ಪೆಟ್ಟು

" ಕ್ವಾಂಟಿಕೊ’ಟಿವಿ ಸರಣಿಯ ಮೂಲಕ ಹಾಲಿವುಡ್‌ಗೂ ಪ್ರಿಯಾಂಕಾ ಚೋಪ್ರಾ ಲಗ್ಗೆಯಿಟ್ಟಿರುವುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ನ್ಯೂಯಾರ್ಕ್‌ನಲ್ಲಿ ನಡೆದ ಈ ಟಿವಿ ಸರಣಿಯ ಸಾಹಸದೃಶ್ಯದ ಶೂಟಿಂಗ್ ವೇಳೆ ಪ್ರಿಯಾಂಕ ಆಯತಪ್ಪಿ ಜಾರಿಬಿದ್ದುದರಿಂದ ತಲೆಗೆ ಸಣ್ಣ ಗಾಯವಾಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೊಂದು ಸಣ್ಣ ಘಟನೆಯಾಗಿದ್ದು, ಈ ಬಗ್ಗೆ ಅಭಿಮಾನಿಗಳು ಗಾಬರಿಪಡಬೇಕಿಲ್ಲವೆಂದು ಕ್ವಾಂಟಿಕೊ ತಂಡ ತಿಳಿಸಿದೆ. ಪ್ರಿಯಾಂಕಾ ಅವರು ಮನೆಯಲ್ಲೀಗ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಮುಂದಿನ ವಾರ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರಂತೆ. ಈ ಮಧ್ಯೆ ಕ್ವಾಂಟಿಕೊ ತಂಡವು, ಪ್ರಿಯಾಂಕಾರನ್ನು ಒಳಗೊಂಡಿರದ ದೃಶ್ಯಗಳ ಚಿತ್ರೀಕರಣವನ್ನು ಮುಂದುವರಿಸಿದೆ.
ಹಾಲಿವುಡ್ ಚಿತ್ರ ಬೇವಾಚ್‌ನಲ್ಲಿಯೂ ನಟಿಸುತ್ತಿರುವ ಪ್ರಿಯಾಂಕಾ, ಕ್ವಾಂಟಿಕೊ ಟಿವಿ ಸರಣಿಯಲ್ಲಿ ತನ್ನ ಪಾಲಿನ ಸ್ಟಂಟ್ ದೃಶ್ಯಗಳನ್ನು ಸ್ವತಃ ಯಾವುದೇ ಅಳುಕಿಲ್ಲದೆ ನಿರ್ವಹಿಸಿದ್ದಾರೆ.
Next Story





