ಆನ್‌ಲೈನ್‌ನಲ್ಲಿ ಮಕ್ಕಳ ಅಶ್ಲೀಲ ವೆಬ್‌ಸೈಟ್ ಹೈದರಾಬಾದ್‌ನಲ್ಲಿ ಅಮೆರಿಕದ ಪ್ರಜೆಯ ಸೆರೆ

ಹೈದರಾಬಾದ್,ಜ20: ಅಂತರ್ಜಾಲದಲ್ಲಿ ಶಿಶುಕಾಮದ ಸಾಹಿತ್ಯವನ್ನು ಪ್ರಸಾರಿಸು ತ್ತಿರುವ ಶಂಕೆಯಲ್ಲಿ 2012ರಿಂದಲೂ ಇಲ್ಲಿಯ ಬಹುರಾಷ್ಟ್ರೀಯ ಕಾನೂನು ಸಂಸ್ಥೆ ಯೊಂದರಲ್ಲಿ ಉದ್ಯೋಗದಲ್ಲಿರುವ 42ರ ಹರೆಯದ ಅಮೆರಿಕದ ಪ್ರಜೆಯೋರ್ವನನ್ನು ಬಂಧಿಸಲಾಗಿದೆ. ಬಲಿಪಶುಗಳ ಪೈಕಿ ಯಾರನ್ನಾದರೂ ಕಳ್ಳ ಸಾಗಾಣಿಕೆ ಮಾಡಲಾಗಿ ದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಕ್ಕಳನ್ನು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆನ್‌ಲೈನ್ ಚಿತ್ರಗಳು ಮತ್ತು ವೀಡಿಯೊಗಳಿಗೆ ಸಂಬಂಧಿತ ಐಪಿ ವಿಳಾಸವೊಂದರ ಬಗ್ಗೆ ಇಂಟರ್‌ಪೋಲ್ ಪೊಲೀಸರಿಗೆ ಮಾಹಿತಿಯನ್ನು ನೀಡಿತ್ತು.
ಶಂಕಿತ ವ್ಯಕ್ತಿಯು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರಿಸಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ತೆಲಂಗಾಣ ಸೈಬರ್ ಅಪರಾಧ ವಿಭಾಗದ ಹೊಣೆಯನ್ನು ಹೊಂದಿರುವ ಎಸ್‌ಪಿ ಉಕ್ಕಲಂ ರಾಮಮೋಹನ್ ಅವರು ತಿಳಿಸಿದರು.
ಬಂಧಿತನ ಲ್ಯಾಪ್‌ಟಾಪ್ ಮತ್ತು ಐ ಫೋನ್‌ನಲ್ಲಿ ಆತ ಸುದೀರ್ಘ ಕಾಲದಿಂದ ಸಂಗ್ರಹಿಸಿದ್ದ ಹಲವಾರು ಸಾವಿರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳು ಪತ್ತೆಯಾಗಿವೆ ಎಂದರು.
ವೀಡಿಯೊಗಳಲ್ಲಿರುವ ಮಕ್ಕಳು ಯಾರು ಎಂದು ತಿಳಿದುಕೊಂಡು ಅವರನ್ನು ಪತ್ತೆ ಹಚ್ಚಲು ಇಂಟರ್‌ಪೋಲ್‌ಗೆ ನಾವು ಈ ಸಮಗ್ರ ದತ್ತಾಂಶಗಳನ್ನು ಒಪ್ಪಿಸಲಿದ್ದೇವೆ ಎಂದು ತೆಲಂಗಾಣ ಅಪರಾಧ ತನಿಖೆ ಇಲಾಖೆಯ ಐಜಿ ಸೌಮ್ಯಾ ಮಿಶ್ರಾ ತಿಳಿಸಿದರು.
ನ್ಯೂಜೆರ್ಸಿ ಮೂಲದ ಆರೋಪಿಯು ತಪ್ಪಿತಸ್ಥನೆಂದು ರುಜುವಾತಾದರೆ ಆತನಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು 10 ಲ.ರೂ.ವರೆಗೆ ದಂಡವನ್ನು ವಿಧಿಸಬ ಹುದಾಗಿದೆ.







