Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿ ಮೋದಿಯವರ ನೋಟು ರದ್ದತಿ...

ಪ್ರಧಾನಿ ಮೋದಿಯವರ ನೋಟು ರದ್ದತಿ ಭಾಷಣಕ್ಕೆ ಮುನ್ನ ಮೂರು ಗಂಟೆಗಳಲ್ಲಿ ನಡೆದಿದ್ದೇನು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ20 Jan 2017 8:40 PM IST
share
ಪ್ರಧಾನಿ ಮೋದಿಯವರ ನೋಟು ರದ್ದತಿ ಭಾಷಣಕ್ಕೆ ಮುನ್ನ ಮೂರು ಗಂಟೆಗಳಲ್ಲಿ ನಡೆದಿದ್ದೇನು ಗೊತ್ತೇ?

ಹೊಸದಿಲ್ಲಿ,ಜ.20: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ನ.8ರಂದು 500 ಮತ್ತು 1,000 ರೂ.ನೋಟುಗಳನ್ನು ರದ್ದುಗೊಳಿಸುತ್ತಿರುವುದನ್ನು ಪ್ರಕಟಿಸಲು ರಾಷ್ಟ್ರವನ್ನುದ್ದೇಶಿಸಿ ಮಾಡಿದ್ದ ಟಿವಿ ಭಾಷಣಕ್ಕೆ ಮೂರು ಗಂಟೆಗಳ ಮೊದಲು ರಿಸರ್ವ್ ಬ್ಯಾಂಕ್ ನಿಷೇಧ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿತ್ತು.

ಇಂದಿಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಕುರಿತ ಸಂಸದೀಯ ಸಮಿತಿಯ ಎದುರು ಹಾಜರಾದ ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು, ನ.8ರಂದು ತನ್ನ ಅಧ್ಯಕ್ಷತೆಯಲ್ಲಿ ನಡೆದಿದ್ದ ಆರ್‌ಬಿಐ ಮಂಡಳಿ ಸಭೆಯು ಒಂದು ದಿನ ಮೊದಲು ತನಗೆ ಸಲ್ಲಿಸಲಾಗಿದ್ದ ನೋಟು ನಿಷೇಧ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿಸಿತ್ತು ಎಂದು ತಿಳಿಸಿದರು.

ಪಟೇಲ್ ಬುಧವಾರ ಹಣಕಾಸು ಕುರಿತ ಸಂಸದೀಯ ಸಮಿತಿಯ ಎದುರು ಹಾಜರಾಗಿದ್ದರು. ನಿನ್ನೆ ಮತ್ತು ಇಂದು ಅವರು ನೀಡಿದ ಮಾಹಿತಿಗಳು ಸರಕಾರ ಮತ್ತು ಆರ್‌ಬಿಐ ನೋಟು ನಿಷೇಧ ಕುರಿತು ಕಳೆದ ವರ್ಷದ ಮೇ ತಿಂಗಳಲ್ಲಿಯೇ ಮಾತುಕತೆಗಳನ್ನು ಆರಂಭಿಸಿದ್ದವು ಎನ್ನುವುದನ್ನು ಸೂಚಿಸುತ್ತಿವೆ. ನ.7ರಂದು ಈ ಯೋಜನೆಗೆ ಆರಂಭ ದೊರಕಿದ್ದು, ಎಲ್ಲವೂ ತ್ವರಿತವಾಗಿ ನಡೆದು 24 ಗಂಟೆಗಳಲ್ಲಿ ನೋಟು ನಿಷೇಧ ಪ್ರಕಟಣೆ ಹೊರಬಿದ್ದಿತ್ತು.

 ನ.8ರಂದು ದಿಲ್ಲಿಯಲ್ಲಿ ಸಭೆ ಸೇರಿದ್ದ ಆರ್‌ಬಿಐ ಮಂಡಳಿಯು ನೋಟು ನಿಷೇಧದ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದರೆ ಅತ್ತ ಪ್ರಧಾನಿ ತನ್ನ ಸಂಪುಟ ಸದಸ್ಯರು ಸಂಜೆ ಏಳು ಗಂಟೆಯಿಂದ ತನ್ನ ಕಚೇರಿಯಲ್ಲಿ ಕಾಯುವಂತೆ ಮಾಡಿದ್ದರು. ಸಚಿವರಿಗೆ ಸೆಲ್ ಪೋನ್‌ಗಳನ್ನು ಬಳಸಲು ಅವಕಾಶ ನೀಡಲಾಗಿರಲಿಲ್ಲ. ಸಂಪುಟ ಸಭೆಗಳಲ್ಲಿ ಸಚಿವರು ಮೊಬೈಲ್ ಬಳಸಕೂಡದು ಎಂಬ ನಿರ್ಧಾರವನ್ನು ಕಳೆದ ಜುಲೈನಲ್ಲಿ ಮೊದಲ ಬಾರಿಗೆ ತೆಗೆದುಕೊಳ್ಳಲಾಗಿತ್ತು. ಮುಂದೇನಾಗಲಿದೆ ಎನ್ನುವುದರ ಅರಿವಿದ್ದ ಪ್ರಧಾನಿ ಕಚೇರಿಯ ಸಿಬ್ಬಂದಿಗಳು ಮತ್ತು ವಿತ್ತ ಸಚಿವಾಲಯದ ತಂಡ ಆರ್‌ಬಿಐ ನಿರ್ಧಾರಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದರು.

ಆಗಲೇ,ಆರ್‌ಬಿಐ ಮಂಡಳಿಯ 10 ಸದಸ್ಯರ ಪೈಕಿ ಎಂಟು ಸದಸ್ಯರು ಸರಕಾರದ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ ಎಂಬ ಸಂದೇಶ ಬಂದಿತ್ತು. ಇಷ್ಟಾದ ಬಳಿಕ ಮೋದಿಯವರು ತನ್ನ ನಿವಾಸದಿಂದ ಪ್ರಧಾನಿ ಕಚೇರಿಗೆ ತೆರಳಿ ತನ್ನ ಬೃಹತ್ ಆರ್ಥಿಕ ಸುಧಾರಣೆ ಯೋಜನೆಯನ್ನು ಸಂಪುಟ ಸದಸ್ಯರಿಗೆ ಬಹಿರಂಗ ಗೊಳಿಸಿದ್ದರು. ಅದನ್ನು ವಿಧ್ಯುಕ್ತವಾಗಿ ಪರಿಶೀಲಿಸಿದ ಸಂಪುಟ ಸದಸ್ಯರು ಒಪ್ಪಿಗೆ ಸೂಚಿಸಿದ್ದರು. ಎಂಟು ಗಂಟೆಗೆ ಪ್ರಧಾನಿಯವರು ರಾಷ್ಟ್ರವನ್ನುದ್ದೇಶಿಸಿ ತನ್ನ ಭಾಷಣವನ್ನು ಆರಂಭಿಸಿದ್ದರು.

ನೋಟು ರದ್ದತಿ ಕ್ರಮಕ್ಕೆ ತಾನು ಸಿದ್ಧವಾಗಿದ್ದೆ ಎಂದು ಆರ್‌ಬಿಐ ಹೇಳಿದೆ. ಅದರ ಆಡಳಿತ ಮಂಡಳಿಯ ಹತ್ತು ಸದಸ್ಯರ ಪೈಕಿ ಒಬ್ಬರು ವಿದೇಶದಲ್ಲಿದ್ದರೆ, ಇನ್ನೋರ್ವರು ಮುಂಬೈನ ಕೇಂದ್ರ ಕಚೇರಿಯಲ್ಲಿದ್ದು, ಅವರಿಗೆ ಸರಕಾರದ ನಿರ್ಧಾವನ್ನು ತಕ್ಷಣವೇ ಜಾರಿಗೊಳಿಸಲು ಅಗತ್ಯ ಸಮನ್ವಯ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಯೋಜನೆಗೆ ಅಂತಿಮ ಒತ್ತು ತರಾತುರಿಯಲ್ಲಿ ನೀಡಲಾಗಿತ್ತಾದರೂ ನೋಟು ನಿಷೇಧ ಯೋಜನೆ ತರಾತುರಿಯದ್ದಾಗಿರಲಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಮಾತುಕತೆಗಳು ಮೇ ತಿಂಗಳಿನಲ್ಲಿಯೇ ಆರಂಭಗೊಂಡಿದ್ದು, ಇದಕ್ಕಾಗಿ ಆರ್‌ಬಿಐ ಗವರ್ನರ್ ಮತ್ತು ಉಪ ಗವರ್ನರ್ ನಿಯಮಿತವಾಗಿ ದಿಲ್ಲಿಗೆ ಭೇಟಿ ನೀಡುತ್ತಿದ್ದರು. ಸುಮಾರಾಗಿ ಪ್ರತಿ ಶುಕ್ರವಾರ ಸಂಜೆ ಆರು ಗಂಟೆಯ ಬಳಿಕ ಮೋದಿಯವರು ರಚಿಸಿದ್ದ ಪ್ರಧಾನಿ ಕಚೇರಿ ಮತ್ತು ವಿತ್ತ ಸಚಿವಾಲಯದ ಅಧಿಕಾರಿಗಳ ತಂಡದ ಜೊತೆಗೆ ನಡೆಯುತ್ತಿದ್ದ ಸಭೆಗಳಲ್ಲಿ ನೋಟು ರದ್ದತಿಯ ಅನುಷ್ಠಾನ ಕ್ರಮ, ನಂತರದ ಪರಿಸ್ಥಿತಿಗೆ ಸನ್ನದ್ಧತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು ಎಂದು ಅವು ಹೇಳಿವೆ. ಗೌಪ್ಯವನ್ನು ಕಾಯ್ದುಕೊಳ್ಳಲು ಈ ಸಭೆಗಳ ನಡಾವಳಿಗಳನ್ನೂ ದಾಖಲಿಸುತ್ತಿರಲಿಲ್ಲ.

ನೋಟು ರದ್ದತಿಯು ಕಪ್ಪುಹಣ ಮತ್ತು ನಕಲಿ ನೋಟುಗಳ ಪಿಡುಗನ್ನು ತಡೆಯುತ್ತದೆ ಎಂಬ ಕೇಂದ್ರದ ಅಭಿಪ್ರಾಯವನ್ನು ಆರ್‌ಬಿಐ ಒಪ್ಪಿಕೊಂಡಿತ್ತು ಎಂದು ಪಟೇಲ್ ಸಂಸದೀಯ ಸಮಿತಿಗಳಿಗೆ ತಿಳಿಸಿದ್ದಾರೆ.

ಮೇ ಮತ್ತು ಆಗಸ್ಟ್ ನಡುವೆ ಆಗ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ ರಾಜನ್ ಅವರು ಈ ಸಭೆಗಳಲ್ಲಿ ಭಾಗಿಯಾಗುತ್ತಿದ್ದರು ಎಂದು ಮೂಲಗಳು ತಿಳಿಸಿದವು. ಆಗಸ್ಟ್‌ನಲ್ಲಿ ರಾಜನ್ ಅಧಿಕಾರಾವಧಿ ಮುಗಿದ ಬಳಿಕ ಪಟೇಲ್ ನೂತನ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು.

  ನಾಯಕತ್ವದಲ್ಲಿ ಬದಲಾವಣೆಯಿಂದಾಗಿ 2,000 ರೂ.ನೋಟುಗಳ ಮುದ್ರಣದಲ್ಲಿ ಕೊಂಚ ವಿಳಂಬವಾಗಿತ್ತು. ಹೊಸನೋಟುಗಳ ಮುದ್ರಣಕ್ಕಾಗಿ ಜೂನ್‌ನಲ್ಲಿಯೇ ನಿರ್ಧರಿಸಲಾಗಿತ್ತು. ನೂತನ ನೋಟುಗಳ ಮೇಲೆ ಆರ್‌ಬಿಐ ಗವರ್ನರ್ ಸಹಿ ಅಗತ್ಯವಾಗಿದ್ದರಿಂದ ಪಟೇಲ್ ಅಧಿಕಾರ ಸ್ವೀಕರಿಸುವವರೆಗೆ ನೋಟು ಮುದ್ರಣವನ್ನು ಮುಂದೂಡಲಾಗಿತ್ತು ಎಂದು ಮೂಲಗಳು ಹೇಳಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X