ಒಬಾಮ ಸರಕಾರದ 50 ಅಧಿಕಾರಿಗಳನ್ನು ಉಳಿಸಿಕೊಂಡ ಟ್ರಂಪ್

ವಾಶಿಂಗ್ಟನ್, ಜ. 20: ನಿರ್ಗಮನ ಅಧ್ಯಕ್ಷ ಬರಾಕ್ ಒಬಾಮರ ಸರಕಾರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 50 ಉನ್ನತ ಅಧಿಕಾರಿಗಳು ಡೊನಾಲ್ಡ್ ಟ್ರಂಪ್‌ರ ನೂತನ ಸರಕಾರದಲ್ಲೂ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಶ್ವೇತಭವನದ ನೂತನ ವಕ್ತಾರ ಸಿಯನ್ ಸ್ಪೈಸರ್ ಗುರುವಾರ ತಿಳಿಸಿದರು.
ಸರಕಾರದಲ್ಲಿ ‘ನಿರಂತರತೆಯನ್ನು ಕಾಯ್ದುಕೊಳ್ಳುವ’ ಮಹತ್ವವನ್ನು ಟ್ರಂಪ್ ಮನಗಂಡಿದ್ದಾರೆ, ಹಾಗಾಗಿ, ಪ್ರಸಕ್ತ ಸರಕಾರದಲ್ಲಿ ‘ಮಹತ್ವದ’ ಹುದ್ದೆಗಳನ್ನು ಹೊಂದಿರುವ ಸುಮಾರು 50 ಅಧಿಕಾರಿಗಳು ಸದ್ಯಕ್ಕೆ ತಮ್ಮ ಹುದ್ದೆುಲ್ಲಿ ಮುಂದುವರಿಯುವಂತೆ ಅವರು ಸೂಚಿಸಿದ್ದಾರೆ ಎಂದು ಸ್ಪೈಸರ್ ಹೇಳಿರುವುದಾಗಿ ‘ಇಎಫ್‌ಇ ನ್ಯೂಸ್’ ವರದಿ ಮಾಡಿದೆ.
Next Story





