ಮಾರ್ಚ್‌ನಲ್ಲಿ ಗರೋಡಿಗಳ ಗುರಿಕಾರರ ಸನ್ಮಾನ- ಸಮ್ಮಿಲನ
ಉಡುಪಿ, ಜ.20: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ ಗರೋಡಿಗಳ ಗುರಿಕಾರರ ಸನ್ಮಾನ- ಸಮ್ಮಿಲನ ಕಾರ್ಯಕ್ರಮವನ್ನು ಮಾರ್ಚ್ ಅಂತ್ಯದೊಳಗೆ ನಡೆಸಲು ನಿರ್ಧರಿಸಲಾಗಿದೆ ಎಂದು ವೇದಿಕೆ ಅಧ್ಯಕ್ಷ ಪ್ರವೀಣ್ ಎಂ.ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರೋಡಿಯ ನಿರಂತರ ಏಳಿಗೆಗಾಗಿ ಮತ್ತು ದಿನನಿತ್ಯದ ಆಗುಹೋಗುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಸೇವಾ ಮನೋಭಾವದ ಆಡಳಿತ ಮುಖ್ಯಸ್ಥರು, ಗುರಿಕಾರರು, ಅರ್ಚಕರು, ಕೂಡುಕಟ್ಟಿನವರೆಲ್ಲರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 236 ಗರೋಡಿಗಳಿದ್ದು, ಸುಮಾರು 2 ಸಾವಿರ ಗುರಿಕಾರರಿ ದ್ದಾರೆ. ಗರೋಡಿಗಳ ಜೀವಾಳವಾಗಿರುವ ಇವರು ಸಾಂಸ್ಕೃತಿಕ ರಾಯಭಾರಿ ಗಳು. ಸಾಮರಸ್ಯದ ಕೇಂದ್ರವಾಗಿರುವ ಗರೋಡಿ ಅಸ್ತಿತ್ವದಲ್ಲಿರುವುದು ಗುರಿಕಾರರಿಂದ ಎಂದು ವೇದಿಕೆಯ ಗೌರವಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ದಿವಾಕರ್ ಸನಿಲ್, ಮಹೇಶ್ ಸುವರ್ಣ, ಶರತ್ ಉಪಸ್ಥಿತರಿದ್ದರು.
‘ಬಿಲ್ಲವರ ಭಾವನೆಗೆ ಧಕ್ಕೆ’
ಜ.24ರಂದು ನಡೆಯುವ ಗರಡಿ ಮಹಾಸಮ್ಮೇಳನದ ಕಟೌಟ್‌ನಲ್ಲಿ ದೇವರಂತೆ ಪೂಜಿಸುವ ಕೋಟಿಚೆನ್ನಯ್ಯರ ಫೋಟೋವನ್ನು ತಟ್ಟಿರಾಯನ ರೀತಿಯಲ್ಲಿ ಬಳಸುವ ಮೂಲಕ ಬಿಲ್ಲವರ ಭಾವನೆಗೆ ಧಕ್ಕೆ ಉಂಟು ಮಾಡ ಲಾಗಿದೆ ಎಂದು ಅಚ್ಯುತ ಕಲ್ಮಾಡಿ ಆರೋಪಿಸಿದರು.
ಈ ಮಹಾಸಮ್ಮೇಳನಕ್ಕೂ ಗರಡಿಗೂ ಯಾವುದೇ ಸಂಬಂಧವಿಲ್ಲ. ಗರಡಿ ಗಳಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆಯೇ ಹೊರತು ಅವುಗಳ ಪಾಲ್ಗೊಳ್ಳುವಿಕೆ ಇದರಲ್ಲಿ ಇಲ್ಲ. ಸಮ್ಮೇಳನದಲ್ಲಿ ಭಕ್ತರಿಗೆ ನೋವು ಅಥವಾ ಅವಮಾನ ವಾಗುವ ರೀತಿಯಲ್ಲಿ ವರ್ತಿಸಿದರೆ ಮುಂದೆ ತೀವ್ರ ಪ್ರತಿಭಟನೆ ನಡೆಸಲಾಗು ವುದು ಎಂದು ಅವರು ಎಚ್ಚರಿಕೆ ನೀಡಿದರು.
‘ಕೋಟಿ-ಚೆನ್ನಯರು ದೈವಗಳಲ್ಲ’
ಕೋಟಿ-ಚೆನ್ನಯರನ್ನು ಬಿಲ್ಲವರು ಕುಲದೇವರಂತೆ ಪೂಜಿಸುತ್ತಾರೆ. ಅವರು ದೈವಗಳಲ್ಲ. ದೈವಾರಾಧನೆಯ ನೆಲೆಗಟ್ಟಿನಲ್ಲಿ ಗರೋಡಿಗಳ ಸಮ್ಮೇಳನವಾಗುತ್ತಿ ರುವುದು ಖಂಡನೀಯ. ಎಲ್ಲ ಗರೋಡಿಗಳ ಮಾಹಿತಿಯನ್ನೂ ಪಡೆಯದೆ, ಗುರಿಕಾರರನ್ನು ಸಂಪರ್ಕಿಸದೆ ಸಂಘಟನೆಯೊಂದು ಗರೋಡಿಗಳ ಸಮ್ಮೇಳನ ನಡೆಸುವುದು ಸರಿಯಲ್ಲ. ದೈವಗಳ ಬಗ್ಗೆ ಸಮ್ಮೇಳನ ನಡೆಸಲಿ. ತುಳುನಾಡ ಗರೋಡಿಗಳ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಬೇಕಿದೆ. ಸಮ್ಮೇಳನದ ಹೆಸರಿನಲ್ಲಿರುವ ಬ್ಯಾನರ್, ಕಟೌಟ್‌ಗಳಲ್ಲಿ ಕೋಟಿ-ಚೆನ್ನಯರನ್ನು ಪ್ರತ್ಯೇಕವಾಗಿ ಬಿಂಬಿಸಿ ಅವಹೇಳನ ಮಾಡಿರುವುದೂ ಖಂಡನೀಯವಾಗಿದೆ ಎಂದು ಅಚ್ಯುತ ಅಮೀನ್ ತಿಳಿಸಿದರು.







