ಲಾಲ್‌ಬಾಗ್‌ನಲ್ಲಿ ‘ಹೂ’ಗಳ ಜಾತ್ರೆ
ತೋಟಗಾರಿಕೆ ಇಲಾಖೆ ವತಿಯಿಂದ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಬಿಜಾಪುರದ ಗೋಲ ಗುಂಬಝನ್ನೇ ತಂದು ಲಾಲ್‌ಬಾಗ್‌ನಲ್ಲಿ ಪ್ರತಿಷ್ಠಾಪಿಸಿರುವಂತೆ ಸುಮಾರು ಲಕ್ಷ ಹೂಗಳಿಂದ ಗೋಲ್‌ಗುಂಬಝ್‌ನ್ನು ನಿರ್ಮಿಸಲಾಗಿದೆ. ಹತ್ತಾರು ಬಗೆಯ ಹೂಗಳು ಒಂದಕ್ಕಿಂತ ಒಂದು ಚೆಂದವಾಗಿ ಕಾಣುತ್ತಿವೆ. ಸಿಕ್ಕಿಂನ ಆರ್ಕಿಡ್ ‘ಹೂ’ಗಳು ಈ ವರ್ಷದ ವಿಶೇಷವಾಗಿದೆ. ಇದರ ಜೊತೆಗೆ ಫ್ಯಾನ್ಸಿ, ಸಾಲ್ವಿಯಾ, ಪಾಪಿ, ಲಾರ್ಕ್ಸ್ ಪರ್, ಅಂಥೋರಿಯಾನಂ ಮತ್ತಿತರ ವಿಭಾಗದ ಹೂಗಳು ನೋಡುಗರನ್ನು ಆಕರ್ಷಿಸುತ್ತಿವೆ.
Next Story





