ಪಾಕಿಸ್ತಾನದ ಮಾರುಕಟ್ಟೆಯಲ್ಲಿ ಬಾಂಬು ಸ್ಫೋಟ: 20 ಮಂದಿ ಸಾವು
ಪೇಶಾವರ, ಜ.21:ಕುರ್ರಮ್ ಜಿಲ್ಲೆಯ ಪರಾಚಿನಾರ್ ಪಟ್ಟಣದ ಜನನಿಬಿಡ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಬಾಂಬು ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮಾರುಕಟ್ಟೆಯ ಒಳಗಿರುವ ಈದ್ಗಾ ಬಜಾರ್ನಲ್ಲಿ ಜನರು ತರಕಾರಿ, ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾಗ ಬಾಂಬುಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಂಬನ್ನು ತರಕಾರಿ ಬಾಕ್ಸ್ನಲ್ಲಿ ಅಡಗಿಸಿಡಲಾಗಿತ್ತು ಎಂದು ಸರಕಾರಿ ಅಧಿಕಾರಿ ಶಾಹಿದ್ ಖಾನ್ ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿರುವ ಕುರ್ರಮ್ ಜಿಲ್ಲೆಯಲ್ಲಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಇಲ್ಲಿ ಅಪಹರಣ, ಭಯೋತ್ಪಾದಕ ದಾಳಿಗಳು ಸರ್ವೇಸಾಮಾನ್ಯವಾಗಿದೆ. ಪಾಕ್ ಸೇನೆ ಭಯೋತ್ಪಾದಕರ ಮಟ್ಟಹಾಕಲು ಭಾರೀ ಕಾರ್ಯಾಚರಣೆಯನ್ನು ನಡೆಸಿತ್ತು.
Next Story