ನೇರಳಕಟ್ಟೆ ಪಿರ್ಸತ್ತೊ ಟ್ರೋಫಿ ಕ್ರಿಕೆಟ್ ಪಂದ್ಯಾಟ

ವಿಟ್ಲ, ಜ.21: ನೇರಳಕಟ್ಟೆಯ ಶೈನಿಂಗ್ ಹಾಗೂ ಸಕ್ಸಸ್ ಕ್ರಿಕೆಟರ್ಸ್ ಇವುಗಳ ಆಶ್ರಯದಲ್ಲಿ ಹೊನಲು ಬೆಳಕಿನ 8 ಜನರ ಅಂಡರ್ ಆರ್ಮ್ ಪಿರ್ಸತ್ತೊ ಟ್ರೋಫಿ ಕ್ರಿಕೆಟ್ ಪಂದ್ಯಾಟವು ಇಲ್ಲಿನ ಕಮ್ಮಾಡಿ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಪಂದ್ಯಾಟವನ್ನು ನೆಟ್ಲಮುಡ್ನೂರು ಗ್ರಾಪಂ ಸದಸ್ಯ ಡಿ. ತನಿಯಪ್ಪ ಗೌಡ ಉದ್ಘಾಟಿಸಿದರು. ಸ್ಥಳೀಯ ಗ್ರಾ.ಪಂ. ಸದಸ್ಯ ಲತೀಫ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಸುರತ್ಕಲ್ ಎನ್‌ಐಟಿಕೆ ಉಪನ್ಯಾಸಕ ದಿನೇಶ್ ನಾಕ್, ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಅನಂತಾಡಿ ಗ್ರಾ.ಪಂ. ಮಾಜಿ ಸದಸ್ಯ ಅಬ್ಬಾಸ್ ನೇರಳಕಟ್ಟೆ, ಡಾ. ಗಣರಾಜ ಎಲ್ಕಣ, ನೇರಳಕಟ್ಟೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪರೈ ಕುರ್ಲೆತ್ತಿಮಾರು, ನೇರಳಕಟ್ಟೆ ಸಿ.ಎ. ಬ್ಯಾಂಕ್ ಮ್ಯಾನೇಜರ್ ದಿನಕರ ನಾಯಕ್, ಉದ್ಯಮಿಗಳಾದ ಶಾಹುಲ್ ಹಮೀದ್ ಕೂಜುಬಾಡಿ, ಖಲಂದರ್ ಕೊಡಾಜೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಜೇತ ತಂಡಗಳಿಗೆ ಉದ್ಯಮಿಗಳಾದ ಅಬ್ದುಲ್ ಮಜೀದ್ ಮಾಣಿ ಹಾಗೂ ಎನ್.ಎ. ಖಾದರ್ ಬಹುಮಾನ ವಿತರಿಸಿದರು. ರಫೀಕ್ ನೇರಳಕಟ್ಟೆ ಸ್ವಾಗತಿಸಿ, ಇರ್ಫಾನ್ ಭಗವಂತಕೋಡಿ ವಂದಿಸಿದರು. ನಿಹಾಲ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಫಳ್ನೀರ್ ತಂಡಕ್ಕೆ ಪ್ರಶಸ್ತಿ
36 ತಂಡಗಳು ಭಾಗವಹಿಸಿದ್ದ ಈ ಕ್ರಿಕೆಟ್ ಪಂದ್ಯಾಟದಲ್ಲಿ ಫಳ್ನೀರ್‌ನ ಮಹಮ್ಮಾಯಿ ಫ್ರೆಂಡ್ಸ್ ತಂಡವು ಪ್ರಥಮ ಹಾಗೂ ಕನ್ಯಾನದ ಚಕ್ರವರ್ತಿ ಕ್ರಿಕೆಟರ್ಸ್ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು.
ಫಳ್ನೀರ್ ತಂಡದ ಸಯ್ಯದ್, ವಿನೀತ್ ಹಾಗೂ ಕನ್ಯಾನ ತಂಡದ ರಹೀಂ ವೈಯುಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಬದ್ರುದ್ದೀನ್, ರವೂಫ್, ಅಝೀಝ್, ಅಬ್ದುಲ್ ಖಾದರ್ ಪುತ್ತ, ಅಜಿತ್ ಸೂರಿಕುಮೇರು, ಶಮ್ಮಾಸ್, ಹಾರೂನ್ ಕೊಡಾಜೆ ಮೊದಲಾದವರು ತೀರ್ಪುಗಾರರಾಗಿ ಸಹಕರಿಸಿದರು.







