ವಿವಿಧೆಡೆ ದಫ್ ಸ್ಪರ್ಧೆ

ವಿಟ್ಲ, ಜ.21: ಇಸ್ಲಾಮಿನ ಸಾಂಸ್ಕೃತಿಕ ಕಲೆಯಾಗಿರುವ ದಫ್ ಅನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಾಡಿನ ವಿವಿಧೆಡೆ ಸಂಘ-ಸಂಸ್ಥೆಗಳು ದಫ್ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ. ಜ.28ರಂದು ಆತೂರಿನಲ್ಲಿ, ಫೆಬ್ರವರಿ 4ರಂದು ಪುತ್ತೂರು ತಾಲೂಕಿನ ಕೂರ್ನಡ್ಕ ಹಾಗೂ ಉಡುಪಿ ಜಿಲ್ಲೆಯ ಕಟಪಾಡಿ-ಮಣಿಪುರ ಹಾಗೂ ಫೆ.19ರಂದು ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ದಫ್ ಸ್ಪರ್ಧೆ ನಡೆಯಲಿದೆ. ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9611545686 ಅಥವಾ 9844976826ನ್ನು ಸಂಪರ್ಕಿಸಬಹುದು ಎಂದು ದಫ್‌ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





