ಸೈಯದ್ ಯೂಸುಫುಲ್ ಜೀಲಾನಿ ಬುಖಾರಿ ವೈಲತ್ತೂರ್ ನಿಧನ

ಮಲಪ್ಪುರಂ,ಜ.21: ವಿದ್ವಾಂಸ ಹಾಗೂ ಕಾರಂದೂರ್ ಮರ್ಕಝ್ ನ ಉಪಾಧ್ಯಕ್ಷ ಕೇರಳ ಮುಸ್ಲಿಂ ಜಮಾಅತ್ ಮಲಪ್ಪುರಂ ಜಿಲ್ಲಾಧ್ಯಕ್ಷ ಸೈಯದ್ ಯೂಸುಫುಲ್ ಜೀಲಾನಿ ಬುಖಾರಿ ಶನಿವಾರ ಬೆಳಗ್ಗಿನ ಜಾವ ಒಂದು ಗಂಟೆಗೆ ವೈಲತ್ತೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ , ಸುಪ್ರೀಂ ಕೌನ್ಸಿಲ್ ಸದಸ್ಯಮಲಪ್ಪುರಂ ಜಿಲ್ಲಾಧ್ಯಕ್ಷ ಮುಂತಾದ ಸ್ಥಾನಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಪತ್ನಿ ಸಫಿಯಾ ಬೀವಿ,ಮಕ್ಕಳು ಜಲಾಲುದ್ದೀನ್ ಸಖಾಫಿ, ಝಕರಿಯ್ಯ ಸಖಾಫಿ, ಅಲಿ ಅಹ್ಸನಿ, ಜಮೀಲಾಬೀವಿ, ರಮ್ಲಾ ಬೀವಿ, ರಳಿಯಾ ಬೀವಿ, ಅಳಿಯಂದಿರು ಅಬ್ದುಸ್ಸಲೀಂ ಹೈದ್ರೋಸಿ ಮಲಪ್ಪುರಂ, ಝೈನುಲ್ ಆಬಿದೀನ್ ಜಮಲುಲ್ಲೈಲಿ ಚೇಳಾರಿ, ಸಿದ್ದೀಕ್ ತಂಙಳ್‌ಹಾಗೂ ಅಪಾರ ಅಭಿಮಾನಿ ಬಂಧುಮಿತ್ರಾದಿಗಳನ್ನು ಅವರು ಅಗಲಿದ್ದಾರೆಂದು ವರದಿತಿಳಿಸಿದೆ.
Next Story





