ಎಸ್‌ಕೆಎಸ್‌ಎಸ್‌ಎಫ್ ಸೌಹಾರ್ದತೆ, ಐಕ್ಯತೆಯನ್ನು ಪ್ರತಿಪಾದಿಸುವ ಸಂಘಟನೆ : ಜುನೈದ್ ಜಿಫ್ರಿ ತಂಙಳ್
ನೀರಾಜೆ: ಸಮಸ್ತದ ನೇತಾರರ ಅನುಸ್ಮರಣೆ, ಮಾನವ ಸರಪಳಿ ಪ್ರಚಾರ ಸಮ್ಮೇಳನ

ಉಪ್ಪಿನಂಗಡಿ , ಜ.21 : ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿರುವಂತಹ ಸಮಾನತೆ, ಸಹೋದರತೆ, ಐಕ್ಯತೆಯನ್ನು ಎಸ್.ಕೆ.ಎಸ್.ಎಸ್.ಎಫ್. ಸಂಘಟನೆ ಪ್ರತಿಪಾದಿಸುತ್ತಾ ಬಂದಿದ್ದು, ಇಲ್ಲಿ ಧರ್ಮ ನಿಂದನೆಗೆ ಅವಕಾಶವೇ ಇಲ್ಲ, ಇದು ಸಲ್ಲ ಎಂದು ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಹೇಳಿದರು.
ಅವರು ಜ. 20ರಂದು ನೂರುಲ್ ಹುದಾ ಮದ್ರಸ ನೀರಾಜೆ ಮತ್ತು ಎಸ್‌ಕೆಎಸ್‌ಎಸ್‌ಎಫ್. ನೀರಾಜೆ ಕೊಲ ಇದರ ಆಶ್ರಯದಲ್ಲಿ ಸಮಸ್ತದ ಅಗಲಿದ ನೇತಾರರ ಅನುಸ್ಮರಣಾಚರಣೆ ಹಾಗೂ ಮಾನವ ಸರಪಳಿ ಪ್ರಚಾರ ಸಮ್ಮೇಳನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆ ಕಳೆದ 10 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲೆಮಾದ ಹಿರಿಯ ನೇತಾರರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಡೆದು ಬಂದಿದೆ. ಸಂಘಟನೆ ಯುವ ಸಮೂಹದ ಜನಪರ ಸೇವೆಯೊಂದಿಗೆ ಎತ್ತರಕ್ಕೆ ಬೆಳೆಯುತ್ತಿದ್ದು, ಇದೀಗ "ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ" ಘೋಷಣೆಯೊಂದಿಗೆ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಯಶಸ್ಸು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.
ಹಿರಿಯ ಧಾರ್ಮಿಕ ವಿದ್ವಾಂಸ ಹಾಜಿ ಡಾ ಕೆ.ಎಂ. ಶಾಹ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅನುಸ್ಮರಣೆ ಬಹಳ ಹಿಂದಿನಿಂದಲೂ, ಪ್ರಾಚೀನ ಕಾಲದಿಂದಲೂ ನಡೆದು ಬಂದಿದ್ದು, ಧಾರ್ಮಿಕ ಪಂಡಿತ ಸ್ಮರಣೆಯೊಂದಿಗೆ ಅಲ್ಲಾಹುವಿನ ಸ್ಮರಣೆಯೂ ಸಾಧ್ಯ ಎಂದರು.
ಕೇರಳದ ವಯನಾಡು ಮುಹಮ್ಮದ್ ಕುಟ್ಟಿ ನಿಝಾಮಿ ಧಾರ್ಮಿಕ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ಆತೂರು ಮೊಹಿಯುದ್ದೀನ್ ಜುಮಾ ಮಸೀದಿ ಖತೀಬ್ ಹನೀಫ್ ಫೈಝಿ, ಉಪ್ಪಿನಂಗಡಿ ರೇಂಜ್ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೇಜಾಲ್, ಬಿ. ಅಬ್ದುಲ್ಲ ಮುಸ್ಲಿಯಾರ್ ಕೆಮ್ಮಾರ, ಹಾಜಿ ಇಬ್ರಾಹಿಂ ಮುಸ್ಲಿಯಾರ್ ಆತೂರು, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ. ಅಬ್ದುಲ್ ರಜಾಕ್, ಮೊಹಿಯುದ್ದೀನ್ ಮಸೀದಿ ಅಧ್ಯಕ್ಷ ಅಯ್ಯೂಬ್ ಹಾಜಿ, ಎಸ್.ಕೆ.ಎಸ್.ಎಸ್.ಎಫ್. ದ.ಕ. ಜಿಲ್ಲಾ ಉಪಾಧ್ಯಕ್ಷ ಪಿ.ಎ. ಮರ್ದಾಳ, ಉಪ್ಪಿನಂಗಡಿ ವಲಯ ಅಧ್ಯಕ್ಷ ಅಶ್ರಫ್ ಕೊಳ್ಳೇಜಾಲ್, ಕಡಬ ವಲಯದ ಅಶ್ರಫ್ ಶೇಡಿಗುಂಡಿ, ಫಲೂಲುದ್ದೀನ್ ಆತೂರು, ಯುಪಿ ರಹಿಮಾನ್ ಅಡೆಕಲ್, ಕಡವಿನಬಾಗಿಲು ಮದ್ರಸ ಅಧ್ಯಕ್ಷ ಮಹಮ್ಮದ್ ಹಾಜಿ ಕಡವಿನಬಾಗಿಲು, ಬಿ.ಕೆ. ಅಬ್ದುಲ್ ಅಜೀಜ್ ಆತೂರು, ದ.ಕ. ಜಿಲ್ಲಾ ವಕ್ಷ್ ಸಲಹಾ ಸಮಿತಿ ಅಧ್ಯಕ್ಷ ಹೆಚ್. ಆದಂ, ಕೋಲ್ಪೆ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಕರಾಯ ಮಸೀದಿ ಅಧ್ಯಕ್ಷ ಅಶ್ರಫ್ ಹಾಜಿ ಪೆದಮಲೆ, ಆತೂರು ಮಸೀದಿಯ ಬಿ.ಆರ್. ಅಬ್ದುಲ್ ಖಾದರ್, ಅಬ್ದುಲ್ ರಜಾಕ್ ಹೇಂತಾರು, ನೀರಾಜೆ ನೂರುಲ್ ಹುದಾ ಮದ್ರಸದ ಮಾಜಿ ಅಧ್ಯಕ್ಷರಾದ ಪೊಡಿಕುಂಞ್ ನೀರಾಜೆ, ಆದಂ ಕುಂಞ್, ಸೌಹಾರ್ದ ವೇದಿಕೆ ಅಧ್ಯಕ್ಷ ನಝೀರ್ ಎನ್.ಕೆ., ಆದಂ ಹೇಂತಾರ್ ಮತ್ತಿತರರು ಉಪಸ್ಥಿತರಿದ್ದರು.
ಮಾನವ ಸರಪಳಿ ಪ್ರಚಾರ ಜಾಥಾ:
ಸಭಾ ಕಾರ್ಯಕ್ರಮಕ್ಕೆ ಮುನ್ನ ಆತೂರು ಸುಲ್ತಾನುಲ್ ಹಿಂದ್ ವೇದಿಕೆ ಬಳಿಯಿಂದ ಜಾಥಾ ಹೊರಟು ನೀರಾಜೆ ಮದ್ರಸದಲ್ಲಿ ಸಮಾಪನಗೊಂಡಿತು. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಮುಹಮ್ಮದ್ ಸೈಯ್ಯದ್ ಜುನೈದ್ ಜಿಫ್ರಿ ತಂಙಳ್‌ರವರ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಂಡಿಬಾಗಿಲು ಮಸೀದಿ ಖತೀಬ್ ಸೈಯ್ಯದ್ ಅನಸ್ ತಂಙಳ್ ಜಾಥಾ ಉದ್ಘಾಟಿಸಿದರು.
ನೀರಾಜೆ ನೂರುಲ್ ಹುದಾ ಮದ್ರಸದ ಸದರ್ ಮುಅಲ್ಲಿಂ ಅಬ್ದುಲ್ ರಜಾಕ್ ದಾರಿಮಿ ಸ್ವಾಗತಿಸಿ, ಸಫ್ವಾನ್ ಕಿರಾಅತ್ ಪಠಿಸಿದರು.
ನೂರುಲ್ ಹುದಾ ಮದ್ರಸದ ಅಧ್ಯಕ್ಷ ಇಬ್ರಾಹಿಂ ಆತೂರು, ಕಾರ್ಯದರ್ಶಿ ಎಸ್.ಕೆ. ಸಿದ್ದಿಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಎಸ್.ಕೆ.ಎಸ್.ಎಸ್.ಎಫ್. ಕಾರ್ಯದರ್ಶಿ ಮಹಮ್ಮದ್ ಶರೀಫ್ ನೀರಾಜೆ ವಂದಿಸಿದರು. ಅಶ್ರಫ್ ಮುಸ್ಲಿಯಾರ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.







