Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪತಂಜಲಿಯಿಂದ 33 ರಲ್ಲಿ 25 ಸುಳ್ಳು ಹಾಗು...

ಪತಂಜಲಿಯಿಂದ 33 ರಲ್ಲಿ 25 ಸುಳ್ಳು ಹಾಗು ದಾರಿ ತಪ್ಪಿಸುವ ಜಾಹಿರಾತುಗಳು

ಅಡ್ವರ್ಟೈಸಿಂಗ್ ಸ್ಟ್ಯಾಂಡರ್ಡ್ಸ್ ಕೌನ್ಸಿಲ್ ಆಫ್ ಇಂಡಿಯಾ

ರಾಕೇಶ್ ದುಬ್ಬುಡುರಾಕೇಶ್ ದುಬ್ಬುಡು21 Jan 2017 7:16 PM IST
share
ಪತಂಜಲಿಯಿಂದ  33 ರಲ್ಲಿ 25 ಸುಳ್ಳು ಹಾಗು ದಾರಿ ತಪ್ಪಿಸುವ ಜಾಹಿರಾತುಗಳು

ಹೊಸದಿಲ್ಲಿ, ಜ.21: ಪತಂಜಲಿ ಆಯುರ್ವೇದ ಸಂಸ್ಥೆ ತನ್ನ ಉತ್ಪನ್ನಗಳ ಪ್ರಚಾರಕ್ಕಾಗಿ ನಡೆಸುತ್ತಿರುವ ಬಹುತೇಕ ಜಾಹೀರಾತು ತಪ್ಪು ಸಂದೇಶ ನೀಡುತ್ತಾ ದಾರಿ ತಪ್ಪಿಸುತ್ತಿದೆ ಎಂದು ಭಾರತೀಯ ಜಾಹೀರಾತು ಮಾನದಂಡ ಸಮಿತಿ (ಎಎಸ್‌ಸಿಐ) ತಿಳಿಸಿದೆ.

ಲೋಕಸಭೆಯಲ್ಲಿ ಸರಕಾರ ನೀಡಿದ ಮಾಹಿತಿಯಂತೆ, 2015ರ ಎಪ್ರಿಲ್ ಮತ್ತು 2016ರ ಜುಲೈ ಅವಧಿಯಲ್ಲಿ ಮಾಧ್ಯಮಗಳಲ್ಲಿ ಪ್ರಸಾರವಾದ ಪತಂಜಲಿ ಸಂಸ್ಥೆಯ 33 ಉತ್ಪನ್ನಗಳ ಜಾಹೀರಾತಿನ ಬಗ್ಗೆ ದೂರು ಸ್ವೀಕರಿಸಲಾಗಿದ್ದು, 25 ಜಾಹೀರಾತಿನ ಕುರಿತ ದೂರು ನಿಜವೆಂದು ದೃಢಪಟ್ಟಿದೆ. ಇದರಲ್ಲಿ ಖಾದ್ಯ ಮತ್ತು ಪೇಯಗಳು, ವೈಯಕ್ತಿಕ ಬಳಕೆಯ ವಸ್ತುಗಳು, ಆರೋಗ್ಯ ಉತ್ಪನ್ನಗಳು ಸೇರಿವೆ. ಇದರಲ್ಲಿ ಆರು ದೂರುಗಳು ಉತ್ಪನ್ನಗಳ ಪ್ಯಾಕೇಜಿಂಗ್ ಬಗ್ಗೆ ಕೇಳಿ ಬಂದರೆ ಉಳಿದ 17 ದೂರುಗಳು ಜಾಹೀರಾತು ವಿಷಯವು ಎಎಸ್‌ಸಿಐ ನಿಯಮವನ್ನು ಉಲ್ಲಂಘಿಸಿದ ಕುರಿತಾಗಿದೆ. ಟಿವಿಯಲ್ಲಿ ಪ್ರಸಾರವಾದ ಎರಡು ಜಾಹೀರಾತು ಎಎಸ್‌ಸಿಐ ನಿಯಮವನ್ನು ಉಲ್ಲಂಘಿಸಿದೆ ಎಂದು ಎಎಸ್‌ಸಿಐ ತಿಳಿಸಿದೆ.

ಇದಕ್ಕೆ ಉದಾಹರಣೆಯಾಗಿ ಪತಂಜಲಿ ‘ದಂತ್ ಕಾಂತಿ’ ಎಂಬ ಟೂಥ್‌ಪೇಸ್ಟ್‌ನ ಜಾಹೀರಾತನ್ನು ನೋಡಬಹುದು. ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳಿಂದ ತಯಾರಿಸಲಾದ ಈ ಟೂಥ್‌ಪೇಸ್ಟ್ ನಿರಂತರ ಬಳಸಿದರೆ ದಂತಕ್ಷಯದಿಂದ ಮುಕ್ತಿ ದೊರಕುತ್ತದೆ ಮತ್ತು ಹಲ್ಲುನೋವು ಹೇಳ ಹೆಸರಿಲ್ಲದಂತೆ ಮಾಯವಾಗುತ್ತದೆ. ಒಸಡಿನ ಮತ್ತು ಹಲ್ಲಿನ ಆರೋಗ್ಯರಕ್ಷಣೆಗೆ ಇದೊಂದು ರಾಮಬಾಣ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಆದರೆ ಈ ಹೇಳಿಕೆಯನ್ನು ವೈಜ್ಞಾನಿಕವಾಗಿ ದೃಢಪಡಿಸುವ ಯಾವೊಂದು ಆಧಾರವನ್ನೂ ಇಲ್ಲಿ ಒದಗಿಸಲಾಗಿಲ್ಲ ಎಂದು ಎಎಸ್‌ಸಿಐ ತಿಳಿಸಿದೆ.

ವೊಡಾಫೋನ್, ಐಡಿಯ, ಏರ್‌ಟೆಲ್, ಹೀರೊ ಮೋಟಾರ್‌ಕಾರ್ಪ್, ಟಾಟಾ ಮೋಟರ್ಸ್, ಉಬರ್, ಲಾರಿಯಲ್, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಹಿಂದೂಸ್ತಾನ್ ಯುನಿಲಿವರ್ ಇತ್ಯಾದಿ ಸಂಸ್ಥೆಗಳೂ ಜಾಗೀರಾತು ಪ್ರಸಾರದ ಸಂದರ್ಭ ಎಎಸ್‌ಸಿಐ ಕಾನೂನನ್ನು ಉಲ್ಲಂಘಿಸಿವೆ . ಅಲ್ಲದೆ, ಎಎಸ್‌ಸಿಐ ನಿರ್ದೇಶನದ ಬಳಿಕ ಸುಮಾರು ಶೇ.80ರಷ್ಟು ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು ಬದಲಿಸಿದ್ದಾರೆ ಅಥವಾ ವಾಪಾಸು ಪಡೆದಿದ್ದಾರೆ ಎಂದೂ ತಿಳಿಸಲಾಗಿದೆ.

ಪ್ರಸಕ್ತ ಸಂದರ್ಭದಲ್ಲಿ ದೃಶ್ಯ ಮತ್ತು ಮುದ್ರಣ ಮಾಧ್ಯಮ- ಎರಡರಲ್ಲೂ ದಾರಿ ತಪ್ಪಿಸುವ ಜಾಹೀರಾತುಗಳು ಸಾಮಾನ್ಯವಾಗಿ ಬಿಟ್ಟಿದೆ. ಕೇಂದ್ರ ಸರಕಾರದ ಬಳಕೆದಾರರ ವ್ಯವಹಾರ ವಿಭಾಗದ ಪ್ರಕಾರ ಇಂತಹ ಹಲವಾರು ಜಾಹೀರಾತುಗಳು ಮಾಧ್ಯಮಗಳಲ್ಲಿ ನಿರಂತರ ಪ್ರಸಾರವಾಗುತ್ತಿದೆ. ದಾರಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ಬರುವ ದೂರುಗಳನ್ನು ಪರಿಶೀಲಿಸಲು ಕೇಂದ್ರ ಸರಕಾರವು ಭಾರತೀಯ ಜಾಹೀರಾತು ಮಾನದಂಡ ಸಮಿತಿ (ಎಎಸ್‌ಸಿಐ)ಯನ್ನು ನೇಮಿಸಿದೆ. ಲೋಕಸಭೆಯಲ್ಲಿ ಕೇಂದ್ರ ಸರಕಾರ ನೀಡಿದ ಮಾಹಿತಿಯಂತೆ 2013ರಿಂದ 2016ರ ಅವಧಿಯಲ್ಲಿ ಇಲೆಕ್ಟ್ರಾನಿಕ್ಸ್ ಮಾಧ್ಯಮದಲ್ಲಿ ಪ್ರಸಾರವಾದ 500ಕ್ಕೂ ಹೆಚ್ಚು ಜಾಹೀರಾತುಗಳು ದಾರಿ ತಪ್ಪಿಸುವ , ಆಧಾರರಹಿತ ಸಂದೇಶ ನೀಡುತ್ತವೆ.

ಸುಳ್ಳು ಜಾಹೀರಾತಿಗೆ ಶಿಕ್ಷೆ ಏನು?: ಹಾಲಿ ಇರುವ ಬಳಕೆದಾರರ ಸುರಕ್ಷತೆ ಕಾಯ್ದೆ 1986ರ ಪ್ರಕಾರ, ಬಾಯ್ಮೆತಿನ ಮೂಲಕ ಅಥವಾ ಲಿಖಿತವಾಗಿ ಅಥವಾ ದೃಶ್ಯಗಳ ಮೂಲಕ - ಸರಕಿನ ಗುಣಮಟ್ಟ, ಶ್ರೇಣಿ, ಮಾದರಿ, ಪ್ರಮಾಣ ಇತ್ಯಾದಿಗಳ ಬಗ್ಗೆ ನೀಡು ಅಸಹಜ ಹೇಳಿಕೆಗಳು ಅನ್ಯಾಯದ ವ್ಯಾಪಾರ ಪದ್ದತಿ ಎಂದು ಪರಿಗಣಿಸಲ್ಪಡುತ್ತದೆ.

ಇಂತಹ ಪ್ರಕರಣಗಳ ಬಗ್ಗೆ ಬಳಕೆದಾರರು ಬಳಕೆದಾರರ ವೇದಿಕೆಗೆ ದೂರು ನೀಡಬಹುದು. ಈ ದೂರಿನಲ್ಲಿ ಸತ್ಯಾಂಶವನ್ನು ಕಂಡುಕೊಂಡರೆ ಬಳಕೆದಾರರ ವೇದಿಕೆಯು ಈ ಜಾಹೀರಾತನ್ನು ಅಥವಾ ಸರಕನ್ನು ತಕ್ಷಣ ವಾಪಾಸು ಪಡೆಯಲು ಆದೇಶಿಸಬಹುದು. ಮತ್ತು ಇದರ ಬದಲು ಉತ್ತಮ ಗುಣಮಟ್ಟದ ಸರಕನ್ನು ನೀಡಿ ಈ ಬಗ್ಗೆ ಸರಿಯಾದ ಜಾಹೀರಾತು ನೀಡುವಂತೆ ಆದೇಶ ನೀಡಬಹುದಾಗಿದೆ.

ದಾರಿ ತಪ್ಪಿಸುವ ಜಾಹೀರಾತುಗಳ ಬಗ್ಗೆ ದೂರು ನೀಡಲು ಒಂದು ವೆಬ್‌ಪೋರ್ಟಲ್ ಆರಂಭಿಸಲಾಗಿದೆ. ಈ ಮೂಲಕ ಸಂಬಂಧಿತ ರಾಜ್ಯ ಸರಕಾರಗಳಿಗೆ ದೂರು ಸಲ್ಲಿಸಬಹುದಾಗಿದೆ. 2015ರ ಮಾರ್ಚ್‌ನಿಂದ 2016ರ ಮಾರ್ಚ್‌ವರೆಗಿನ ಅವಧಿಯಲ್ಲಿ ಈ ಪೋರ್ಟಲ್ ಮೂಲಕ 1046 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

 


     

share
ರಾಕೇಶ್ ದುಬ್ಬುಡು
ರಾಕೇಶ್ ದುಬ್ಬುಡು
Next Story
X