ಅಳಂಗಾನಲ್ಲೂರಿನಲ್ಲಿ ಜಲ್ಲಿಕಟ್ಟು ನಡೆಸಲು ಸಿದ್ಧ: ಅಧಿಕಾರಿಗಳು

ಮದುರೈ,ಜ.21: ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ಕಲ್ಪಿಸಿ ಕರಡು ಸುಗ್ರೀವಾಜ್ಞೆಗೆ ಕೇಂದ್ರವು ಒಪ್ಪಿಗೆ ನೀಡುವುದರೊಂದಿಗೆ ಮದುರೆ ಜಿಲ್ಲಾಡಳಿತವು ಇಲ್ಲಿಗೆ ಸಮೀಪದ ಅಳಂಗಾನಲ್ಲೂರಿನಲ್ಲಿ ಈ ಕ್ರೀಡೆಯನ್ನು ಏರ್ಪಡಿಸಲು ತಾನು ಸಂಪೂರ್ಣ ಸನ್ನದ್ಧವಾಗಿರುವುದಾಗಿ ಶನಿವಾರ ತಿಳಿಸಿದೆ.
ಗೂಳಿಗಳನ್ನು ಪಳಗಿಸುವ ಜಲ್ಲಿಕಟ್ಟು ಕ್ರೀಡೆಯನ್ನು ಸಂಘಟಿಸುವಲ್ಲಿ ಅಳಂಗಾನಲ್ಲೂರು ಪ್ರಸಿದ್ಧವಾಗಿದೆ.
ಕ್ರೀಡೆಗಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಸರಕಾರದ ಹಸಿರುನಿಶಾನೆಗಾಗಿ ಕಾಯಲಾಗುತ್ತಿದೆ ಎಂದು ಮದುರೆ ಜಿಲ್ಲಾಧಿಕಾರಿ ಕೆ.ವೀರರಾಘವ ರಾವ್ ತಿಳಿಸಿದರು.
ಜಿಲ್ಲಾಧಿಕಾರಿಗಳು ಕ್ರೀಡಾ ತಾಣವನ್ನು ಪರಿಶೀಲಿಸಿದ್ದು, ಒಂದೆರಡು ದಿನಗಳಲ್ಲಿ ಜಲ್ಲಿಕಟ್ಟು ನಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದರು.
Next Story





