ಜಾಲತಾಣ ಸರಣಿ ‘ಸೆಲ್ಯೂಟ್ ಸಿಯಾಚಿನ್’

ಸಿಯಾಚಿನ್‌ನಲ್ಲಿರುವ ಸಶಸ್ತ್ರಪಡೆಯನ್ನು ಅಭಿನಂದಿಸುವ ಸಲುವಾಗಿ ಆಗಸ್ಟ್ 15, 2016ರಂದು ತಂಡವು ಈ ಪ್ರವಾಸವನ್ನು ಆರಂಭಿಸಿತು. ತಮ್ಮ ಗುರಿಯತ್ತ ಪ್ರಯಾಣಿಸುವ ತಂಡವು ಕ್ಯಾಮರಾಫೋನ್‌ಗಳನ್ನು ಮತ್ತು ಸೆಲ್ಫಿ ಸ್ಟಿಕ್‌ಗಳನ್ನು ಕೊಂಡೊಯ್ದಿತ್ತು. ಪ್ರತಿಯೊಂದು ಹದಿನೈದು ನಿಮಿಷಗಳ ಸರಣಿಯು ಬಹುತೇಕವಾಗಿ ತಂಡದ ಸದಸ್ಯರು ಸೆರೆಹಿಡಿದ ಭಾವಚಿತ್ರಗಳು ಮತ್ತು ವೀಡಿಯೊ ಸರಣಿಗಳನ್ನು ಹೊಂದಿದೆ.
ಲೇಹ್‌ನ ಮನಮೋಹಕ ಸೌಂದರ್ಯವು ಹಲವಾರು ಸಿನೆಮಾಗಳಲ್ಲಿ ಕಾಣಿಸಿಕೊಂಡಿವೆ ಮತ್ತು ಇರೋಸ್ ನೌ ನಿರ್ಮಿಸಿರುವ ಕಿರು ಸರಣಿ ‘ಸೆಲ್ಯೂಟ್ ಸಿಯಾಚಿನ್’ನ ಕೇಂದ್ರಬಿಂದು ಕೂಡಾ ಇದೇ ಆಗಿದೆ. ಸಿಯಾಚಿನ್ ಹಿಮಗಲ್ಲಿನಲ್ಲಿ 15,632 ಅಡಿ ಎತ್ತರದಲ್ಲಿರುವ ಕುಮಾರ್ ಪೋಸ್ಟ್‌ಗೆ ತೆರಳುವ ಸೆಲೆಬ್ರಿಟಿ ದಂಡಯಾತ್ರೆಯ ಐದು ಭಾಗಗಳ ಪ್ರವಾಸ ಕಥನವನ್ನು ಇರೋಸ್ ನೌ ಕಳೆದ ಜನವರಿ 15ರಂದು ಡಿಜಿಟಲ್ ಮಾಧ್ಯಮದಲ್ಲಿ ಬಿಡುಗಡೆ ಮಾಡಿತು.
ಸೆಲ್ಯೂಟ್ ಸಿಯಾಚಿನ್‌ನಲ್ಲಿ ನಟರಾದ ಅರ್ಜುನ್ ರಾಂಪಾಲ್, ರಣ್‌ವಿಜಯ್ ಸಿಂಗ್, ಅರುಣೋದಯ್ ಸಿಂಗ್, ಹಸನ್ ಝೈದಿ ಮತ್ತು ಸೋನಾಲಿ ಸೆಹ್ಗಲ್, ಮಾಡೆಲ್ ನಮ್ರತಾ ಗುಜ್ರನ್, ಕ್ರಿಕೆಟ್ ಆಟಗಾರ ರುದ್ರಪ್ರತಾಪ್ ಸಿಂಗ್ ಮತ್ತು ಹಾಕಿ ಆಟಗಾರ ಯುವರಾಜ್ ವಾಲ್ಮೀಕಿಯವರನ್ನೊಳಗೊಂಡ ತಂಡದ 20 ದಿನಗಳ ಪ್ರಯಾಣವನ್ನು ತೋರಿಸಲಾಗಿದೆ. ಭೂಮಿಯ ಮೇಲೆ ಅತ್ಯಂತ ಎತ್ತರದಲ್ಲಿರುವ ಯುದ್ಧಭೂಮಿ ಎಂದು ಕರೆಸಿಕೊಳ್ಳುವ ಸಿಯಾಚಿನ್ ಹಿಮಗಲ್ಲಿನ ಮೇಲೆ ಅತ್ಯಂತ ಪ್ರತಿಕೂಲ ವಾತಾವರಣದಲ್ಲಿ ಭಾರತೀಯ ಸೇನೆ ಯಾವ ರೀತಿ ಕಾರ್ಯಾಚರಿಸುತ್ತದೆ ಎಂಬುದರ ಮೇಲೆ ಈ ಪ್ರವಾಸವು ಬೆಳಕು ಚೆಲ್ಲುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಸಿನೆಮಾ ಹರಾಮ್‌ಕೋರ್‌ನ ನಿರ್ದೇಶಕ ಶ್ಲೋಕ್ ಶರ್ಮಾ ಕೂಡಾ ಈ ತಂಡದ ಜೊತೆಗಿದ್ದು ಪ್ರವಾಸ ಸರಣಿಯನ್ನು ಚಿತ್ರೀಕರಿಸಿದರು. ಸಿಯಾಚಿನ್‌ನಲ್ಲಿರುವ ಸಶಸ್ತ್ರಪಡೆಯನ್ನು ಅಭಿನಂದಿಸುವ ಸಲುವಾಗಿ ಆಗಸ್ಟ್ 15, 2016ರಂದು ತಂಡವು ಈ ಪ್ರವಾಸವನ್ನು ಆರಂಭಿಸಿತು. ತಮ್ಮ ಗುರಿಯತ್ತ ಪ್ರಯಾಣಿಸುವ ತಂಡವು ಕ್ಯಾಮರಾಫೋನ್‌ಗಳನ್ನು ಮತ್ತು ಸೆಲ್ಫಿ ಸ್ಟಿಕ್‌ಗಳನ್ನು ಕೊಂಡೊಯ್ದಿತ್ತು. ಪ್ರತಿಯೊಂದು ಹದಿನೈದು ನಿಮಿಷಗಳ ಸರಣಿಯು ಬಹುತೇಕವಾಗಿ ತಂಡದ ಸದಸ್ಯರು ಸೆರೆಹಿಡಿದ ಭಾವಚಿತ್ರಗಳು ಮತ್ತು ವೀಡಿಯೊ ಸರಣಿಗಳನ್ನು ಹೊಂದಿದೆ. ಈ ತುಣುಕುಗಳ ಮುಖ್ಯವಾಗಿ ಅರ್ಜುನ್ ರಾಂಪಾಲ್ ಮತ್ತು ರಣ್‌ವಿಜಯ್ ಸೆರೆಹಿಡಿದ ಚಿತ್ರಗಳ ತಾಜಾತನ ಸರಣಿಗೆ ನಿಖರತೆ ಮತ್ತು ಉತ್ಸುಕತೆಯನ್ನು ಒದಗಿಸುತ್ತದೆ.
ಆದರೂ, ಹಲವು ಮೂಲಗಳಿಂದ ಬಂದಿರುವ ತುಣುಕುಗಳನ್ನು ಜೊತೆಯಾಗಿ ಜೋಡಿಸಿ ತಯಾರಿಸಿರುವ ಈ ಸರಣಿಯು ಅಲ್ಲೊಮ್ಮೆ ಇಲ್ಲೊಮ್ಮೆ ಕಿರಿಕಿರಿ ಉಂಟುಮಾಡುತ್ತದೆ. ಈ ಸರಣಿಯಲ್ಲಿ ತಂಡದ ಸದಸ್ಯರ ಅನುಭವಗಳು ಬಹಳ ಮುಖ್ಯವಾಗಿದ್ದರಿಂದ ಅವರ ವಿವರಣೆಗಳಿಗೆ ಬಹಳ ಕಡಿಮೆ ಅಡ್ಡಿಪಡಿಸಲಾಗಿದೆ. ಪ್ರವಾಸದ ತುಣುಕುಗಳಲ್ಲಿನ ವಿಚಾರಧಾರೆಗಳನ್ನು ಒಂದೋ ತಂಡದ ಸದಸ್ಯರೇ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ ಅಥವಾ ಪರದೆಯ ಮೇಲೆ ಬರಹದ ರೂಪ
ದಲ್ಲಿ ತೋರಿಸಲಾಗಿದೆ.
ಚಾರಣದ ತುಂಬೆಲ್ಲಾ ಒಂದು ರೀತಿಯ ಅಪಾಯ ಮತ್ತು ಸಾಹಸದ ಅನುಭವವು ಉಂಟಾಗುವುದರಿಂದ ಚಾಣಾಕ್ಷತನದಿಂದ ನಿರ್ಮಿಸಿದ ರಿಯಾಲಿಟಿ ಶೋವನ್ನು ನೆನಪಿಸುತ್ತದೆ. ಟೀಂ ವರ್ಕ್ ನ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಮತ್ತು ಚಾರಣಿಗರ ಮಧ್ಯೆ ಇರಬೇಕಾದ ನಿಕಟಸ್ನೇಹವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮವು ತಂಡದ ಸದಸ್ಯರನ್ನು ಸೂಕ್ಷ್ಮವಾಗಿ ನಿಭಾಯಿಸಲಾಗಿದೆ.
ಸೆಲ್ಯೂಟ್ ಸಿಯಾಚಿನ್‌ನಲ್ಲಿ ಭಾವಾತಿರೇಕದ ಪ್ರದರ್ಶನವೂ ಇದೆ, ಆದರೆ ಸರಣಿಯು ವೈಯಕ್ತಿಕ ಸಂಘರ್ಷಗಳಿಗಿಂತ ಅಲ್ಲಿನ ಭೌಗೋಳಿಕ ರಚನೆಯು ಒಡ್ಡುವ ಸವಾಲನ್ನು ಹೆಚ್ಚು ಪ್ರದರ್ಶಿಸುತ್ತದೆ.
ಸಿಯಾಚಿನ್‌ನಲ್ಲಿ ಸೇನೆಯು ಎದುರಿಸುವ ಅಪರಿಮಿತ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ಸರಣಿಯಲ್ಲಿ ದೇಶಭಕ್ತಿ ಮತ್ತು ರಾಷ್ಟ್ರವಾದಿ ಬೇಗೆಯನ್ನು ಕೂಡಾ ಬಹಳವಾಗಿ ತುಂಬಲಾಗಿದೆ. ಆದರೆ ಪ್ರತಿಯೊಬ್ಬರ ವೈಯಕ್ತಿಕ ಪ್ರವಾಸದ ಮೇಲೆ ಬೆಳಕು ಚೆಲ್ಲುವ ಮೂಲಕ ಮತ್ತು ಈ ಭೌಗೋಳಿಕ ರಚನೆಯ ಮೇಲೆ, ಪ್ರತಿಕೂಲ ವಾತಾವರಣದಲ್ಲಿ ಪ್ರತಿನಿತ್ಯ ನಡೆದಾಡುವ ಜನರ ಬಗ್ಗೆ ವ್ಯಕ್ತಪಡಿಸಿರುವ ಪ್ರಾಮಾಣಿಕ ಶ್ಲಾಘನೆಯಿಂದಾಗಿ ಈ ಸರಣಿಯಲ್ಲಿ ಅತಿರೇಕದ ೇಶಭಕ್ತಿ ಪ್ರದರ್ಶನ ಮಾಡಲಾಗಿಲ್ಲ.

ಸೆಲ್ಯೂಟ್ ಸಿಯಾಚಿನ್‌ನನ್ನು ಲೇಹ್‌ನ ಅಸ್ಪಶ್ಯ ಪರ್ವತಸಾಲುಗಳ ಸುಂದರತಾಣಗಳ ಮಧ್ಯೆ ಸೆರೆಹಿಡಿಯಲಾಗಿದ್ದರೂ, ಆ ಸೌಂದರ್ಯಕ್ಕಿಂತ ಅಲ್ಲಿನ ಭೌಗೋಳಿಕ ಪರಿಸ್ಥಿತಿಯನ್ನು ಎದುರಿಸುತ್ತಾ ಹಿಮಗಲ್ಲನ್ನು ಏರಲು ಪ್ರಯತ್ನಿಸುವ ಜನರ ಬಗ್ಗೆ ಈ ಸರಣಿ ಬೆಳಕು ಚೆಲ್ಲುತ್ತದೆ. ಸರಣಿಯ ತುಂಬಾ ನೀಲಿ ಆಕಾಶದಲ್ಲಿ ಕಡಿದಾದ ಪರ್ವತಶ್ರೇಣಿಗಳ ಮೇಲೆ ಮೋಡಗಳು ತರಾತುರಿಯಲ್ಲಿ ಚಲಿಸುವ ದೃಶ್ಯಗಳನ್ನು ತೋರಿಸಲಾಗಿದೆ. ಜೊತೆಗೆ ಈ ಪರ್ವತಗಳಿಗೆ ಭೇಟಿ ನೀಡುವ ಪ್ರವಾಸಿಗರು ವ್ಯಕ್ತಪಡಿಸುವ ವಿಸ್ಮಯ ಮತ್ತು ಗೌರವವನ್ನು ಸೆರೆಹಿಡಿಯುತ್ತದೆ.
ಜಾಗತಿಕ ತಾಪಮಾನ ಏರಿಕೆಯಿಂದ ಸಿಯಾಚಿನ್‌ನ ಹಿಮಗುಹೆಗಳ ಮೇಲೆ ಉಂಟಾಗಿರುವ ಪರಿಣಾಮವನ್ನು ತೋರಿಸಿರುವ ಆ ದೃಶ್ಯಾವಳಿಗಳು ಸರಣಿಯ ಅತ್ಯಂತ ಪ್ರಭಾವಪೂರ್ಣ ಭಾಗವಾಗಿದೆ. ಇಂತಹ ಹಿಮಗುಹೆಗಳ ಕ್ಷೀಣಿಸುತ್ತಿರುವ ಸಂಖ್ಯೆ ಮತ್ತು ತ್ವರಿತವಾಗಿ ಕರಗುತ್ತಿರುವ ಹಿಮಗಲ್ಲುಗಳ ದೃಶ್ಯಗಳು ಅತ್ಯಂತ ಕಡಿಮೆ ಪ್ರಸ್ತಾಪಿಸಲಾಗಿರುವ ಜಾಗತಿಕ ತಾಪಮಾನ ಏರಿಕೆಯ ಸಮಸ್ಯೆಯ







