Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಕ್ಕಳ ಪೀಡೆಗಳು

ಮಕ್ಕಳ ಪೀಡೆಗಳು

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್21 Jan 2017 10:02 PM IST
share
ಮಕ್ಕಳ ಪೀಡೆಗಳು

ಮಗುವಿನ ನಡವಳಿಕೆಗಳಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡುಬಂದರೆ ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಪತ್ತೇದಾರಿ ಕೆಲಸ ಮಾಡಬೇಕು. ಇದು ಬಹಳ ಅಗತ್ಯ. ಮಕ್ಕಳನ್ನು ನೇರವಾಗಿ ಕೇಳುವಂತಹ ಕೆಲಸ ಮೊದಲಾಗಬೇಕು. ಆದರೆ ಅವರು ಏನೂ ಬಾಯಿ ಬಿಡದಿದ್ದಾಗ ಹೆದರಿಸಿ, ಅಥವಾ ನಾನಿದ್ದೇನೆ ನಿನ್ನ ಜೊತೆಗೆ ಎಂಬ ಧೈರ್ಯದ ಮಾತುಗಳಿಂದಲೂ ಒತ್ತಾಯ ಮಾಡಲು ಹೋಗಬಾರದು. ಆಗ ಅವರು ಜಾಸ್ತಿ ಸುಳ್ಳು ಹೇಳುತ್ತಾ ವಿಚಾರಣೆಯು ದಾರಿ ತಪ್ಪುತ್ತದೆ ಅಥವಾ ಗೋಜಲುಗೋಜಲಾಗುತ್ತದೆ.

ಮಗುವು ವಿಷಯವನ್ನು ಹಂಚಿಕೊಳ್ಳದಿರುವುದಕ್ಕೆ ಕಾರಣಗಳು

1. ಶಿಕ್ಷೆಯನ್ನು ಎದುರಿಸುವ ಭಯ.

2. ತನ್ನ ಪ್ರೀತಿಸುವವರು ತಿರಸ್ಕರಿಸುವರು ಎಂಬ ಭಯ. 3. ಶಾಲೆಯಲ್ಲಿ, ನೆರೆಹೊರೆಯಲ್ಲಿ ಮತ್ತು ಮನೆಯಲ್ಲಿ ಅಪಮಾನಕ್ಕೊಳಗಾಗುವ ಭಯ.

4. ಸಿಗುತ್ತಿರುವ ಮಾನ್ಯತೆ, ಸವಲತ್ತು, ತನ್ನ ಮೆಚ್ಚಿನ ವಸ್ತುಗಳಿಂದ ವಂಚಿತವಾಗಬಹುದು ಎಂಬ ಭಯ.

5. ಎಲ್ಲದ್ದಕ್ಕಿಂತ ಹೆಚ್ಚಾಗಿ ಮನೆಯವರ ಪ್ರೀತಿ, ಆಸರೆ ಕಳೆದುಕೊಳ್ಳುವ ಭಯ.

ಒಟ್ಟಾರೆ ಭಯವೇ ಅವರ ತೆರೆದುಕೊಳ್ಳುವಿಕೆಯ ದೊಡ್ಡ ಅಡ್ಡಿ. ಮನೆಯವರು ಯಾವುದೇ ಕಾರಣಕ್ಕೂ ತನ್ನನ್ನು ತಿರಸ್ಕರಿಸುವುದಿಲ್ಲ, ಮನೆಯವರು ಮತ್ತು ಶಾಲೆಯವರು ಶಿಕ್ಷಿಸುವುದಿಲ್ಲ ಎಂದು ಅವರಿಗೆ ಮನವರಿಕೆಯಾಗಿದ್ದರೆ ಅವರು ಕುಗ್ಗುವುದಿಲ್ಲ. ತೆರೆದುಕೊಳ್ಳಲು ಹಿಂಜರಿಯುವುದಿಲ್ಲ.

ಮಕ್ಕಳಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಾಣುತ್ತದೆ. ಸಾಧಾರಣವಾಗಿ ಪೋಷಕರು ಆ ದಿಢೀರ್ ಬದಲಾವಣೆಯನ್ನು ಗಮನಿಸುವಷ್ಟು ಸೂಕ್ಷ್ಮರಾಗಿರುವುದಿಲ್ಲ. ಆದ್ದರಿಂದ ಮಗುವಿನಲ್ಲಿ ಆದ ಬದಲಾವಣೆಯು ಹಲವು ಕಾಲ ಮುಂದುವರಿದ ಮೇಲೆ ಯಾಕೋ ಈ ನಡುವೆ ಮೊದಲಿನ ತರಹ ಇಲ್ಲ. ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯು್ತ ಎಂದು ಗೊಣಗಲು ಆರಂಭಿಸುತ್ತಾರೆ.

ಮಗುವಿನ ಆ ಬಗೆಯ ಬದಲಾವಣೆಗಳು ನಾನಾ ರೀತಿಗಳಲ್ಲಿ, ನಾನಾ ಕಾರಣಗಳಲ್ಲಿ ಆಗುತ್ತದೆ.

ಅಕಾರಣ ಬದಲಾವಣೆಗಳು:

ವಿನಾಕಾರಣ ಮಗುವು ಬೇರೆ ಹೇಗೋ ವರ್ತಿಸುತ್ತಿದೆ. ಮನೆಯಲ್ಲಿ ಎಲ್ಲವೂ ಮೊದಲಿನಂತೆಯೇ ಇದೆ. ಶಾಲೆಯಲ್ಲಿ ಎಲ್ಲವೂ ಸರಾಗವಾಗಿಯೇ ನಡೆಯುತ್ತಿದೆ. ಆದರೆ ಯಾಕೆ ಮಗುವು ಹೇಗೋ ಒಂದು ರೀತಿಯಲ್ಲಿ, ಅದರಲ್ಲೂ ನಕಾರಾತ್ಮಕವಾಗಿ ಬದಲಾವಣೆಯನ್ನು ತೋರುತ್ತಿದೆ ಎಂದು ಅಂದುಕೊಳ್ಳುತ್ತಾರೆ. ಮನೆ ಮತ್ತು ಶಾಲೆಯಲ್ಲಿ ಸ್ಥೂಲವಾಗಿ ಬದಲಾವಣೆಯೇನೂ ಆಗದಿರಬಹುದು, ವ್ಯವಸ್ಥೆಯ ಮುಂದುವರಿಕೆ ಯಥಾಸ್ಥಿತಿಯಲ್ಲಿಯೇ ಇರಬಹುದು. ಆದರೆ ಮಗುವಿನಲ್ಲಿ ಬದಲಾವಣೆ ತರುವಂತಹ ಬೇರೆ ಕ್ರಿಯೆಗಳು, ಘಟನೆಗಳು ಮಗುವಿನ ತೀರಾ ಖಾಸಗಿ ವಿಚಾರದಲ್ಲಿ ಆಗಿರಬಹುದು. ಮನೆ ಮತ್ತು ಶಾಲೆಯ ಒಟ್ಟು ಸ್ಥಿತಿಯನ್ನು ನೋಡಿ ಮಗುವಿನಲ್ಲಿ ಬದಲಾವಣೆ ಏಕಾಗಿದೆ ಎಂದು ನಿರ್ಧರಿಸಲು ಆಗುವುದೇ ಇಲ್ಲ. ಯಾಕೆಂದರೆ ಆ ಕಾರಣ ಮಗುವಿಗೆ ಮಾತ್ರವೇ ಗೊತ್ತಿರುತ್ತದೆ. ಮಗು ಆರನೆಯ ತರಗತಿ ಓದುತ್ತಿದೆ. ಅದು ಇತ್ತೀಚೆಗೆ ಶಾಲಾ ಚಟುವಟಿಕೆಗಳಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಅನಾಸಕ್ತಿ ಆರಂಭವಾದ ದಿನಗಳಲ್ಲಿ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನೆಪ ಹುಡುಕುತ್ತಿತ್ತು. ಹೊಟ್ಟೆ ನೋವು, ತಲೆ ನೋವು ಒಮ್ಮಿಂದೊಮ್ಮೆಲೇ ಬಂದುಬಿಡುತ್ತಿತ್ತು. ಜ್ವರ ಬಂದಿರುವಂತೆ ಮುಖ ಹಾಕಿಕೊಂಡು, ಹಾಸಿಗೆಯ ಮೇಲೆಯೇ ಬಿದ್ದುಕೊಂಡಿರುತ್ತಿದ್ದರಿಂದ ನಿಜವಾಗಿಯೂ ಜ್ವರ ಬಂದಿರುವಂತೆಯೇ ಆಗಿರುತ್ತಿತ್ತು. ಸರಿ, ನಂತರ ಒಮ್ಮಿಂದೊಮ್ಮೆಲೇ ಶಾಲೆಗೆ ಸರಿಯಾಗಿ, ಅಂದರೆ ಬಿಡದಂತೆ ಹಾಜರಾಗುತ್ತಿತ್ತು. ತನಗೆ ನಿಜವಾಗಿ ಜ್ವರ ಬಂದರೂ ಕೂಡ ಮಗುವು ಶಾಲೆಗೆ ಹೋಗಲೇಬೇಕು ಎಂದು ಹಟ ಹಿಡಿಯುತ್ತಿತ್ತು. ಮನೆಯಲ್ಲಿ ಏನೇ ಸಮಾರಂಭ ಮತ್ತು ಆಚರಣೆಗಳಿದ್ದರೂ ಈ ಮೊದಲಿನಂತೆ ಶಾಲೆಗೆ ರಜೆ ಹಾಕುತ್ತಿರಲಿಲ್ಲ. ಏಕೆಂದು ವಿಚಾರಿಸಿದರೆ, ಶಾಲೆಯಲ್ಲಿ ಶಿಕ್ಷಕರ ಜೊತೆಗೆ ಏನೂ ಸಮಸ್ಯೆ ಇರಲಿಲ್ಲ. ಈಗ ಮೊದಲಿನಂತೆ ಶಿಕ್ಷಣದಲ್ಲಿ ಪ್ರಗತಿ ಇರಲಿಲ್ಲ ಎಂಬುದನ್ನು ಬಿಟ್ಟರೆ ಏನೂ ಸಮಸ್ಯೆ ಶಾಲೆಯ ಕಡೆಯಿಂದಾಗಲಿ, ಶಿಕ್ಷಕರಿಂದಾಗಲಿ ಇಲ್ಲ. ಇನ್ನು ಮನೆಯವರಿಂದಂತೂ ಏನೂ ತೊಡಕಿರಲಿಲ್ಲ. ಆದರೆ ತೊಡಕಿರುವುದು ಎಲ್ಲಿ?

ಮಗುವಿಗೆ ಸಮಾಲೋಚನೆ ಮಾಡಿದರೆ ಏನೂ ಹೇಳುತ್ತಿಲ್ಲ. ಒಂದಂತೂ ಈಗ ಸ್ಪಷ್ಟವಾಗಿದೆ. ಸಮಸ್ಯೆ ಇರುವುದು ತನ್ನ ಯಾರೋ ಸಹಪಾಠಿಗಳೊಡನೆಯೇ ಎಂದು. ಆದರೆ ಯಾರೊಂದಿಗೆ ಎಂದು ಅದು ಹೇಳುತ್ತಿಲ್ಲ. ಹೇಳಿದರೆ ತನಗೆ ಏನೋ ತೊಂದರೆಯಾಗುತ್ತದೆ ಎಂದು ಹೆದರುತ್ತಿದೆ.

ಪತ್ತೇದಾರಿ ಮಗುವಿನ ನಡವಳಿಕೆಗಳಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡುಬಂದರೆ ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಪತ್ತೇದಾರಿ ಕೆಲಸ ಮಾಡಬೇಕು. ಇದು ಬಹಳ ಅಗತ್ಯ. ಮಕ್ಕಳನ್ನು ನೇರವಾಗಿ ಕೇಳುವಂತಹ ಕೆಲಸ ಮೊದಲಾಗಬೇಕು. ಆದರೆ ಅವರು ಏನೂ ಬಾಯಿ ಬಿಡದಿದ್ದಾಗ ಹೆದರಿಸಿ, ಅಥವಾ ನಾನಿದ್ದೇನೆ ನಿನ್ನ ಜೊತೆಗೆ ಎಂಬ ಧೈರ್ಯದ ಮಾತುಗಳಿಂದಲೂ ಒತ್ತಾಯ ಮಾಡಲು ಹೋಗಬಾರದು. ಆಗ ಅವರು ಜಾಸ್ತಿ ಸುಳ್ಳು ಹೇಳುತ್ತಾ ವಿಚಾರಣೆಯು ದಾರಿ ತಪ್ಪುತ್ತದೆ ಅಥವಾ ಗೋಜಲುಗೋಜಲಾಗುತ್ತದೆ.

ಇದಕ್ಕಿರುವ ಕೆಲವು ದಾರಿಗಳೆಂದರೆ:

ಆಪ್ತಮಿತ್ರನೊಡನೆ ಕುಶಲೋಪರಿ:

ಮಗುವಿಗೆ ಆಪ್ತವಾಗಿರುವ ಗೆಳತಿ ಅಥವಾ ಗೆಳೆಯನೊಡನೆ ಮಾತಾಡಬೇಕು. ಅದೂ ನಮ್ಮ ಮಗು ಜೊತೆಯಲ್ಲಿ ಇಲ್ಲದಿರುವಾಗ. ಏಕೆಂದರೆ ಆ ಮಗುವು ತನ್ನ ಸ್ನೇಹಿತ ಅಥವಾ ಸ್ನೇಹಿತೆ ಜೊತೆಯಲ್ಲಿರುವಾಗ ತಮ್ಮ ಗೆಳೆತನಕ್ಕೆ ಭಂಗಬಾರದಂತೆ ಮಾತಾಡಲು ಯತ್ನಿಸುತ್ತದೆ. ಇಲ್ಲವೇ ಮುಂದೆ ಯಾಕೆ ಹೇಳಿದೆ ಎಂದು ಸ್ನೇಹ ಕಡಿದುಕೊಂಡು ಬೇರೆ ಬೇರೆ ಮಸಲತ್ತುಗಳನ್ನು ಮಾಡಲೂಬಹುದು.

ಹಾಗೆ ತಮ್ಮ ಮಗುವಿನ ಮಿತ್ರನೊಂದಿಗೆ ಮಾತಾಡುವಾಗ ಆ ಮಗುವಿನ ಮನೆಯವರು ಇರಬಾರದು. ಒಂದು ವೇಳೆ ಆ ಮಗುವು ಹೇಳುವಂತಹ ವಿಷಯವು ಗಂಭೀರವಾಗಿದ್ದು ಮನೆಯವರು ಅಂತಹ ವಿಷಯಗಳನ್ನು ಒಪ್ಪುವುದಿಲ್ಲ ಎಂದು ತಿಳಿದಿದ್ದರೆ ಮಗುವು ಹೇಳುವುದಿಲ್ಲ. ಕೆಲವೊಮ್ಮೆ ಮಗುವು ಹೇಳಿದರೂ ಮಗುವಿನ ತಂದೆ ತಾಯಿಗಳು ಮಗುವನ್ನು ಮನೆಯಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ನಮ್ಮ ಮಗುವಿನ ಸಹವಾಸ ಮಾಡದಿರಲು ಒತ್ತಾಯ ಮಾಡುತ್ತಾರೆ.ತೀವ್ರಗಾಮಿಗಳಾಗಿದ್ದ ಪಕ್ಷದಲ್ಲಿ ಶಾಲೆಯಲ್ಲಿ ಪ್ರಾಂಶುಪಾಲರ ಅಥವಾ ಶಿಕ್ಷಕರ ಬಳಿಗೆ ಹೋಗಿ ದೂರು ಸಲ್ಲಿಸಿ ಆರ್ಭಟಿಸುತ್ತಾರೆ. ಮಕ್ಕಳಿಗೆ ಮುಜುಗರ ಉಂಟಾಗುವುದಲ್ಲದೆ, ವೃಥಾ ಮಾನಸಿಕವಾಗಿ ಬಳಲುತ್ತಾರೆ.

ಮಕ್ಕಳ ಎಡವಟ್ಟುಗಳ ಸಂದರ್ಭಗಳಲ್ಲಿ ಎಂದಿಗೂ, ಎಂದೆಂದಿಗೂ ಮರೆಯಲೇ ಬಾರದಂತಹ ವಿಷಯವೆಂದರೆ, ನಾವು ವ್ಯವಹರಿಸುವುದು ಯಾವುದೋ ಭೌತಿಕ ವಿಚಾರಗಳಲ್ಲ. ಬದಲಿಗೆ ಮಗುವಿನ ಮಾನಸಿಕ ಮತ್ತು ಭಾವನಾತ್ಮಕ ಸೂಕ್ಷ್ಮಗಳ ಕುರಿತಾಗಿ. ಹಾಗಾಗಿ, ನಮ್ಮ ಮಕ್ಕಳೇ ಆಗಲಿ, ಮತ್ತೋರ್ವ ಮಗುವೇ ಆಗಲಿ, ಈಗ ನಡೆಯುವ ಘಟನೆ ಅವರ ಮನಸ್ಸು ಮತ್ತು ಭಾವನೆಗಳ ಮೇಲೆ ದೀರ್ಘಕಾಲದ ಪರಿಣಾಮ ಬೀರುತ್ತದೆ ಮತ್ತು ನಮ್ಮ ಈಗಿನ ವರ್ತನೆ ಹಾಗೂ ಇಂದಿನ ಘಟನೆ ಅವರ ವ್ಯಕ್ತಿತ್ವದ ಮೇಲೆ ಗಾಢ ಪ್ರಭಾವ ಬೀರುತ್ತದೆ ಎಂಬ ಎಚ್ಚರಿಕೆ ವಹಿಸಲೇಬೇಕು.

ನಮ್ಮ ಮಗುವಿಗೆ ಅನ್ಯಾಯವೋ, ಅಥವಾ ತೊಂದರೆಯೋ ಉಂಟಾಯಿತೆಂದು ಇನ್ನೊಂದು ಮಗುವನ್ನು ದಂಡಿಸುವುದು, ನಿಂದಿಸುವುದು, ತಿರಸ್ಕರಿಸುವುದು ಅಥವಾ ಅಪಮಾನಿಸುವುದು ಎಂದಿಗೂ ಮಾಡಬಾರದು.

ಅಡಗುತಾಣಗಳಲ್ಲಿ ವಸ್ತುಗಳು:

ಮಗುವು ತನ್ನ ಬ್ಯಾಗಿನಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ್ದಲ್ಲದೇ ಬೇರೆ ಯಾವ ವಸ್ತುಗಳನ್ನು ಇಟ್ಟುಕೊಳ್ಳುತ್ತದೆ? ಮನೆಯಿಂದ ಸಾಗಿಸಲು ಯತ್ನಿಸುತ್ತದೆ? ಮನೆಯಲ್ಲಿಯೇ ತನ್ನದೇನಾದರೂ ಅಡಗುತಾಣಗಳನ್ನು ಇಟ್ಟುಕೊಂಡಿದೆಯೇ? ಒಂದು ವೇಳೆ ಹಾಗೆ ಇಟ್ಟುಕೊಂಡಿದ್ದರೆ ಅದರಲ್ಲಿ ಯಾವ ನಿಧಿಗಳನ್ನು ಅವಿತಿಟ್ಟುಕೊಂಡಿದೆ? ಮನೆಯಲ್ಲಿ ಕಳ್ಳತನಗಳನ್ನೇನಾದರೂ ಮಾಡುತ್ತಿದೆಯೇ? ಹಾಗೆಯೇ ಶಾಲೆಯಿಂದ ಅಥವಾ ಬೇರೆ ಕಡೆಯಿಂದ ವಸ್ತುಗಳನ್ನೇನಾದರೂ ತರುತ್ತಿದೆಯಾ? ಈ ವಿಷಯಗಳನ್ನು ಗಮನಿಸಬೇಕು.

ಕೆಲವು ಪೋಷಕರು ಒಂದು ವಸ್ತು ಹಾಗೆ ಕಣ್ಣಿಗೆ ಬಿದ್ದ ತಕ್ಷಣ ಎಗರಾಡಲು ಪ್ರಾರಂಭಿಸುತ್ತಾರೆ. ಇದನ್ನು ಎಲ್ಲಿಂದ ತಂದೆ? ಏಕೆ ತಂದೆ? ಯಾರು ಕೊಟ್ಟರು? ಯಾಕೆ ಇಸ್ಕೊಂಡೆ? ಅಂತೆಲ್ಲಾ ಕಿರುಚಾಡಿ, ಇನ್ನೊಮ್ಮೆ ಯಾರ ಬಳಿಯೂ ಹಾಗೆ ಇಸ್ಕೋಬೇಡಾಂತ ಒಂದು ಸುಗ್ರೀವಾಜ್ಞೆ ಹೊರಡಿಸಿ ಸುಮ್ಮನಾಗಿಬಿಡುತ್ತಾರೆ. ಆದರೆ ಮಗು ವ್ಯವಹಾರವನ್ನು ತಂದೆ ಅಥವಾ ತಾಯಿಯ ಗಮನಕ್ಕೆ ಬರದಂತೆಯೇ ನಡೆಸುವುದಕ್ಕೆ ಮತ್ತಷ್ಟು ದಾರಿಗಳನ್ನು ಹುಡುಕುತ್ತದೆ. ಆ ಸೂಕ್ಷ್ಮ ಪೋಷಕರ ಸ್ಥೂಲ ಕಣ್ಣಿಗೆ ಬೀಳದಂತೆ ವ್ಯವರಿಸುವಷ್ಟು ಸೂಕ್ಷ್ಮವಾಗುತ್ತಾರೆ.

ಮಕ್ಕಳ ವ್ಯವಹಾರದ ಕದ್ದ ಮಾಲುಗಳೋ, ಅಥವಾ ಇನ್ನೆಂತದ್ದೇ ತಮ್ಮ ಮನೆಯದ್ದಲ್ಲದ ವಸ್ತುಗಳನ್ನು ಕಣ್ಣಿಗೆ ಬಿದ್ದರೆ, ಅದರಲ್ಲೂ ಅವರು ನಮ್ಮ ಕಣ್ಣಿಗೆ ಬೀಳಬಾರದು ಎಂಬ ಎಚ್ಚರ ವಹಿಸಿದ್ದರೆ ನೇರಾನೇರ ಕೇಳಬಾರದು. ಬದಲಿಗೆ ಗಮನಿಸಬೇಕು. ತಾವು ಅದನ್ನು ಗಮನಿಸಿಯೇ ಇಲ್ಲ ಎಂಬಂತೆ ಗಮನಿಸಬೇಕು. ಅದು ಸುದೀರ್ಘ ಕಾಲಕ್ಕೆ ಅಂತೇನಲ್ಲ. ನಮ್ಮ ಗಮನಿಸುವಿಕೆಯ ಪ್ರಕಾರ ಮುಂದೆ ಯಾವ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಅರಿಯುವಷ್ಟು ಅನುಸರಿಸಬೇಕು.

ಆಪ್ತ ಸಮಾಲೋಚನೆ:

ಮಗುವು ಹೀಗೆ ಏನೋ ವ್ಯವಹಾರಗಳನ್ನು ಮಾಡುತ್ತಿದೆ. ಹೆದರಿಕೊಂಡಿದೆ. ವಸ್ತುಗಳನ್ನು, ಹಣವನ್ನು ಕದಿಯುತ್ತಿದೆ ಎಂದು ತಿಳಿದಾಗ ವಿಚಾರಣೆಗೆ ಒಳಪಡಿಸದೆ ಅತ್ಯಂತ ಆತ್ಮೀಯವಾಗಿ ತಂದೆ ಅಥವಾ ತಾಯಿ ಆಪ್ತ ಸಮಾಲೋಚನೆ ಮಾಡಬೇಕು. ಈ ಸಮಾಲೋಚನೆಯಲ್ಲಿ ಮಗುವಿಗೆ ಮುಖ್ಯವಾಗಿ ಕೆಲವು ವಿಷಯಗಳು ಅರ್ಥವಾಗಬೇಕು.

1. ನಾವು ನಿನ್ನನ್ನು ಪ್ರೀತಿಸುತ್ತೇವೆ.

2. ನೀನು ಒಂದು ವೇಳೆ ಏನೇ ತ್ಪು ಮಾಡಿದ್ದರೂ ಕ್ಷಮಿಸುತ್ತೇವೆ.

3. ನಾವಿರುವಾಗ ನೀನು ಯಾವುದೇ ರೀತಿಯ ಅಥವಾ ಯಾರದೆೀ ಭಯ ಇಟ್ಟುಕೊಳ್ಳುವ ಅಗತ್ಯವಿಲ್ಲ.

4. ಗೋಪ್ಯತೆಯ್ನು ಕಾಪಾಡುತ್ತೇವೆ.

5. ಮನೆಯಲ್ಲಿ ಇತರ ಸಹೋದರ ಅಥವಾ ಸಹೋದರಿಯರಿಗಾಗಲಿ, ಇತರ ಕುಟುಂಬದ ಸದಸ್ಯರಿಗಾಗಲಿ, ಶಾಲೆಯಲ್ಲಿ ಶಿಕ್ಷಕ ಅಥವಾ ಆಡಳಿತ ಮಂಡಳಿಯವರಿಗಾಗಲಿ, ನಿನ್ನದೇ ಇತರ ಮಿತ್ರರಿಗಾಗಲಿ ವಿಷಯವು ತಿಳಿಯದಂತೆ ನೋಡಿಕೊಳ್ಳುತ್ತೇನೆ. ಇದು ಕೇವಲ ನಮ್ಮಿಬ್ಬರಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳುವಂತಹದ್ದು. ಎಂಬ ಆಶ್ವಾಸನೆ ಕೊಡಬೇಕು ಮತ್ತು ಅದನ್ನು ಉಳಿಸಿಕೊಳ್ಳಬೇಕು. ಪ್ರಕರಣವು ಶುಭಾಂತ್ಯವಾಗಲು ಬೇಕಾದ ಸಹಕಾರಗಳನ್ನು ಅವರಿಂದ ಪಡೆದುಕೊಳ್ಳುವಾಗಲೂ ವಿಷಯವನ್ನು ಗದ್ದಲವೆಬ್ಬಿಸಿ ರಾಡಿ ಕದಡಬಾರದು.

6. ನೀನು ಏನೇ ಮಾಡಿದ್ದರೂ ನಿನ್ನ ಮೇಲಿನ ನನ್ನ ಪ್ರೀತಿ ಕಡಿಮೆಯಾಗುವುದಿಲ್ಲ. ನಾನು ನಿನ್ನನು್ನ ನೋಡುವ ರೀತಿ ಬದಲಾಗುವುದಿಲ್ಲ.

7. ತಪ್ಪುಗಳು ಸಹಜವಾಗಿ ಆಗಿಬಿಡುತ್ತವೆ. ಆದರೆ ಅದನ್ನು ಬೇಗನೇ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ತಪ್ಪುಗಳು ಅಪರಾಧಗಳಾಗಿ ಪರಿವರ್ತನೆ ಹೊಂದುತ್ತವೆ. ಅದು ಪೊಲೀಸು, ಕೋರ್ಟುಗಳಿಗೆ ಹೋಗುವಂತಹ ಗಂಭೀರ ಪ್ರಕರಣಗಳಾಗಿ ರೂಪಾಂತರ ಹೊಂದುವ ಸಾಧ್ಯತೆಗಳಿರುವುದರಿಂದ ಈಗ ಇಲ್ಲೇ ಎ್ಚರಿಕೆಯಿಂದ ಸರಿಪಡಿಸಿಕೊಳ್ಳಬೇಕು.

8. ಯಾವುದೇ ಬಗೆಯ ಪ್ರಕರಣಗಳು (ಮಗುವು ಎದುರಿಸುತ್ತಿರುವಂತ ಸಮಸ್ಯೆಗೆ ಕುರಿತಾಗಿ) ತೀರ ಅಪರೂಪವೋ, ಆಘಾತಕರವೋ, ತಾನೊಂದೇ ಎದುರಿಸುತ್ತಿರುವಂತಹುದೇನೂ ಅಲ್ಲ. ಇವಕ್ಕೆಲ್ಲಾ ಪರಿಹಾರ ಇದ್ದೇ ಇದೆ.

9. ಮುಚ್ಚಿಟ್ಟಷ್ಟೂ ಜಟಿಲವಾಗುತ್ತದೆ. ಮುಂದೆ ಸರಿಪಡಿಸಲಾಗದಷ್ಟು ಕಠಿಣವಾಗುತ್ತದೆ.

ಸ್ಥಳ ಮತ್ತು ಸಹವಾಸಗಳ ಬದಲಾವಣೆಗಳು: ಕ್ರಮೇಣ ಒಂದು ಮಗುವು ತನ್ನ ಸ್ನೇಹಿತರ ಸಂಗ ಮತ್ತು ಆಡುವ ಅಥವಾ ಬೆರೆಯುವ ಸ್ಥಳಗಳನ್ನು ಪೋಷಕರ ಗಮನಕ್ಕೆ ತರದಂತೆ ಬದಲಾಯಿಸುತ್ತಿದ್ದರೆ ನಾವು ಎಚ್ಚೆತ್ತುಕೊಳ್ಳಬೇಕು. ಏಕೆ ಆ ಸ್ನೇಹಿತರ ಜೊತೆ ಆಡುತ್ತಿಲ್ಲ? ಏಕೆ ಅಲ್ಲಿಗೆ ನೀನು ಹೋಗ್ತಿಲ್ಲ ಎಂದರೆ ಹಾರಿಕೆಯ ಉತ್ತರಗಳನ್ನು ಅವರು ಕೊಡಬಹುದು. ಕೆಲವೊಮ್ಮೆ ಸಿಡಿಮಿಡಿಗೊಳ್ಳುತ್ತವೆ. ಅವರು ಉತ್ತರ ಕೊಡುವ ರೀತಿಯಲ್ಲಿಯೇ ಅಲ್ಲೇನೋ ಎಡವಟ್ಟಾಗಿದೆ ಎಂದು ಗಮನಿಸಬಹುದು. ಆಗಲೂ ಉತ್ತರವನ್ನು ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ಪಡೆಯಲು ಒತ್ತಾಯಿಸಬೇಡಿ. ಗಮನಿಸಿ, ಸೂಕ್ಷ್ಮವಾಗಿ ಗಮನಿಸಿ. ಅವರ ಹೇಳಿಕೆಗಳಲ್ಲಿ ಎಷ್ಟು ಬಾರಿ ಬದಲಾವಣೆಗಳಾಗುತ್ತಿವೆ? ಹೇಗೆ ಪಲಾಯನ ಮಾಡಲು ಯತ್ನಿಸುತ್ತಿವೆ? ಹೇಗೆ ಕೇಳದಿರುವಂತೆ ನಟಿಸುತ್ತಿವೆ? ಈ ಎಲ್ಲಾ ಸೂಕ್ಷ್ಮತೆಗಳನ್ನು ಅರಿಯುವಂಹ ತಾಳ್ಮೆ ಪೋಷಕರಲ್ಲಿರಬೇಕು.

ಪ್ರಶ್ನೋತ್ತರಗಳಿಗೆ ಮೀರಿದ ಮಾತುಕತೆ: ನಾವು ಏನನ್ನಾದರೂ ಕೇಳಿದಾಗ ಮಕ್ಕಳು ಉತ್ತರಿಸುತ್ತಾರೆ. ಅದು ನಿಜವೋ, ಸುಳ್ಳೋ, ಅರೆದಿಟವೋ, ಸಮಾಧಾನೋಕ್ತಿಗಳೋ ತಿಳಿಯುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೆ, ಅವರಷ್ಟಕ್ಕೆ ಅವರೇ ಯಾವುದಾದರೂ ಮಾತಾಡುವಾಗ ಯಾವ ಸಂಗತಿಗಳನ್ನು ಅವರು ತಮಗೇ ಅರಿವಿಲ್ಲದಂತೆ ಪ್ರಕಟಿಸುತ್ತಾರೆ ಎಂಬುದನ್ನು ಗಮನಿಸಬೇಕು. ಅದು ಸಾಧಾರಣಾಗಿ ಹೆಚ್ಚು ನಂಬಲಾರ್ಹವಾಗಿರುತ್ತದೆ.

ಪತ್ತೇದಾರಿಕೆಯಿಂದ ನಮಗೆ ಏನೇನೆಲ್ಲಾ ತಿಳಿಯಬಹುದು. ಮಗುವು ನಕಾರಾತ್ಮಕವಾದ ಬದಲಾವಣೆ ಹೊಂದಿದ್ದಲ್ಲಿ, ಮಂಕಾದ ಪಕ್ಷದಲ್ಲಿ, ಊಟ, ಪಾಠ, ನಿದ್ರೆ, ಉಡುಗೆ ತೊಡುಗೆ ಇತ್ಯಾದಿಗಳ ವಿಷಯಗಳಲ್ಲಿ ನಿರಾಸಕ್ತಿ ತೋರುತ್ತಿದ್ದ ಸಂದರ್ಭಗಳಲ್ಲಿ ಮಗುವಿನ ಮೇಲೆ ವೈಯಕ್ತಿಕವಾದಂತಹ ಹಲ್ಲೆಯಾಗಿದೆ ಎಂದು ತಿಳಿಯಬೇಕು. ಅಲ್ಲದೇ, ಮಗುವು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲವೆಂದೂ ತಿಳಿಯಬೇಕು. ಆಗ ಮಾಡುವ ಪತ್ತೇದಾರಿ ಕೆಲಸಗಳಿಂದ ನಮಗೆ ಹಲವಾರು ವಿಷಯಗಳು ತಿಳಿಯುತ್ತವೆ. ಅದರಲ್ಲೂ ಅವರನ್ನು ಆ ಸ್ಥಿತಿಗೆ ತಳ್ಳಿರುವ ತನ್ನದೇ ಸಹಪಾಠಿಯೋ, ಮನೆಯ ಸುತ್ತಮುತ್ತ ಇರುವವರೋ, ಶಾಲಾ ಶಿಕ್ಷಕರೋ, ಅಥವಾ ಇತರ ಕಾರ್ಮಿಕರೋ; ಒಟ್ಟಾರೆ ಮಗುವಿನ ವೈಯಕ್ತಿಕ ಕಕ್ಷೆಯೊಳಗೆ ಯಾರೋ ಪ್ರವೇಶಿಸಿದ್ದಾರೆ ಎಂದು ತಿಳಿಯುತ್ತದೆ. ಹಾಗೂ, ಆ ಪ್ರವೇಶ ಮಗುವಿಗೆ ಹಿತಕರವಾಗಿಲ್ಲ ಎಂದೂ ತಿಳಿಯುತ್ತದೆ.

ಮಕ್ಕಳ ನಕಾರಾತ್ಮಕ ಮಂಕುಕವಿದ ಮನಸ್ಥಿತಿಗೆ ಕಾರಣವಾಗುವಂತೆ ವೈಯಕ್ತಿಕವಾಗಿ ಅವರನ್ನು ಕಾಡುವ ಅನೇಕ ಪೀಡಕರು ಮನೆಯಲ್ಲಿ, ನೆರೆಹೊರೆಯಲ್ಲಿ, ಶಾಲೆಯಲ್ಲಿ, ಅವರು ನಿತ್ಯವೂ ಕುಳಿತುಕೊಳ್ಳುವ ಡೆಸ್ಕಿನಲ್ಲಿ, ಆಟದ ಮೈದಾನದಲ್ಲಿ ಇರಬಹುದು. ಇವುಗಳನ್ನು ಗುರುತಿಸಿ ಅವುಗಳಿಂದ ಮಕ್ಕಳನ್ನು ಹೇಗೆ ರಕ್ಷಿಸುವುದು ಎಂದು ಮುಂದೆ ನೋಡೋಣ.

share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X