ದಲಿತ ಮಕ್ಕಳಿಗೆ ಪಾಠ ಹೇಳುವಂತೆ ಬಾಲಾಪರಾಧಿಗೆ ಶಿಕ್ಷೆ !
ಬಿಹಾರ ಮದ್ಯ ಪ್ರಕರಣ

ಶೇಖಪುರಾ,ಜ.21: ಸಂಪೂರ್ಣ ಮದ್ಯನಿಷೇಧ ಜಾರಿಯಲ್ಲಿರುವ ಬಿಹಾರದಲ್ಲಿ ಅಕ್ರಮ ಮದ್ಯ ಮಾರಾಟಕ್ಕಾಗಿ ಬಂಧಿಸಲ್ಪಟ್ಟಿದ್ದ ಬಾಲಾಪರಾಧಿಗೆ ಇಲ್ಲಿಯ ಬಾಲ ನ್ಯಾಯ ಮಂಡಳಿಯು ಶನಿವಾರ ಶಿಕ್ಷೆಯನ್ನು ಪ್ರಕಟಿಸಿದೆ. ಮೂರು ತಿಂಗಳು ದಲಿತರ ಪ್ರದೇಶದಲ್ಲಿಯ ಬಡಮಕ್ಕಳಿಗೆ ಪಾಠ ಹೇಳಿಕೊಡುವಂತೆ ಮತ್ತ ನಂತರದ ಮೂರು ತಿಂಗಳು ಇಲ್ಲಿಯ ಸದರ್ ಆಸ್ಪತೆಯಲ್ಲಿ ರೋಗಿಗಳ ಸೇವೆ ಮಾಡುವಂತೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಜಿಗರ್ ಶಾ ನೇತೃತ್ವದ ಮಂಡಳಿಯು ಆದೇಶಿಸಿದೆ.
ಕಳೆದ ವರ್ಷದ ಎಪ್ರಿಲ್‌ನಿಂದ ರಾಜ್ಯಾದ್ಯಂತ ಮದ್ಯನಿಷೇಧ ಜಾರಿಯಲ್ಲಿದ್ದರೂ ಇನ್ನೂ 18 ತುಂಬದ ಈ ಬಾಲಕ ಶೇಖಪುರಾ ಜಿಲ್ಲೆಯ ಅರಿಯಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳಭಟ್ಟಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ.
Next Story





