ಕೈದಿ ಬಳಿ ಮೊಬೈಲ್ ಪತ್ತೆ
ಮಂಗಳೂರು, ಜ. 21: ಆರೋಪಿಗಳಿಬ್ಬರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆರೋಪಿಯೋರ್ವನ ಬಳಿ ಮೊಬೈಲ್ ಪತ್ತೆಯಾಗಿದ್ದು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಇರ್ಷಾದ್ ಮತ್ತು ಮುಹಮ್ಮದ್ ಇಮ್ತಿಯಾಝ್ ಎಂಬಿಬ್ಬರು ಖೈದಿಗಳನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸುಮಾರು 11:45ಕ್ಕೆ ಹಿಂದಿರುಗುವಾರ ಆರೋಪಿಗಳು ನಮಗೆ ಚಾ ಕುಡಿದ ಬಳಿಕ ಸಿಗರೇಟು ಬೀಡಿ ಕೊಡಿಸದಿದ್ದಲ್ಲಿ ನಾವು ಜೈಲಿಗೆ ಬರುವುದಿಲ್ಲ ಎಂದು ಉಢಾಫೆಯಾಗಿ ವರ್ತಿಸಿದ್ದಾರೆ.
ಆರೋಪಿಗಳ ಪೈಕಿ ಇರ್ಷಾದ್ ಬೆಂಗಾವಲು ವಾಹನ ಹತ್ತುವ ಸಂದರ್ಭದಲ್ಲಿ ಆತನ ಅಂಗಿಯಿಂದ ಮೊಬೈಲ್‌ವೊಂದು ಕೆಳಕ್ಕೆ ಬಿದ್ದಿದ್ದು, ಈ ಗ್ಗೆ ವಿಚಾರಿಸಿದಾಗ ಸಮರ್ಪಕವಾಗಿ ಉತ್ತರಿಸದೆ ಉಢಾಫೆಯಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





