ಟ್ರಾಕ್ಟರ್-ಬೈಕ್ ಢಿಕ್ಕಿ: ಸವಾರ ಮೃತ್ಯು
ಮಣಿಪಾಲ, ಜ.21: ಮಣಿಪಾಲ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನ ಎಂಎಂಎಂಸಿಯ ಮುಂಭಾಗದಲ್ಲಿ ಜ.20ರಂದು ಬೈಕೊಂದು ಟ್ರಾಕ್ಟರ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಬೈಕ್ ಸವಾರ ಕ್ರಿಶ್ಚಿಯನ್ ಜೋನಥಾಯಿ ಎಂದು ಗುರುತಿಸಲಾಗಿದೆ. ಸಹ ಸವಾರ ಅಶ್ವಿನ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಣಿಪಾಲ ವಿವಿ ರಸ್ತೆಯಲ್ಲಿ ಸೊಳ್ಳೆ ನಾಶಕ್ಕಾಗಿ ೆಗ್ ಸಿಂಪಡಿಸುತ್ತಿದ್ದ ಟ್ಯಾಕ್ಟರ್‌ಗೆ ವಿವಿ ಕಡೆಯಿಂದ ಜಿಲ್ಲಾಕಾರಿ ಕಚೇರಿ ಕಡೆ ಹೋಗುತ್ತಿದ್ದ ಬೈಕ್ ಹಿಂದಿನಿಂದ ಢಿಕ್ಕಿ ಹೊಡೆಯಿತು. ಇದರಿಂದ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡರೆನ್ನಲಾಗಿದೆ.
ಇವರಲ್ಲಿ ಕ್ರಿಶ್ಚಿಯನ್ ಜೋನಥಾಯಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





